ಆ್ಯಪ್ನಗರ

28 ಜನರಲ್ಲಿಕೊರೊನಾ ಸೋಂಕು ಪತ್ತೆ

ಮುಂಬೈ ಮಹಾನಗರಕ್ಕೆ ಗುಳೆ ತೆರಳಿ ವಾಪಸ್ಸಾದ ಬಳಿಕ ಜಿಲ್ಲೆಯ ಕಲಬುರಗಿ, ಸೇಡಂ, ಚಿತ್ತಾಪುರ ಜೇವರ್ಗಿ ಮತ್ತು ಆಳಂದ, ಯಡ್ರಾಮಿ ಸರಕಾರಿ ಕ್ವಾರಂಟೈನ್‌ ಕೇಂದ್ರದಲ್ಲಿರುವ ಜಿಲ್ಲೆಯ 28 ಜನರಲ್ಲಿಬುಧವಾರ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿಸೋಂಕಿತರ ಸಂಖ್ಯೆ 185ಕ್ಕೆ ತಲುಪಿದಂತಾಗಿದೆ.

Vijaya Karnataka 4 Jun 2020, 8:43 pm
ಕಲಬುರಗಿ:ಮುಂಬೈ ಮಹಾನಗರಕ್ಕೆ ಗುಳೆ ತೆರಳಿ ವಾಪಸ್ಸಾದ ಬಳಿಕ ಜಿಲ್ಲೆಯ ಕಲಬುರಗಿ, ಸೇಡಂ, ಚಿತ್ತಾಪುರ ಜೇವರ್ಗಿ ಮತ್ತು ಆಳಂದ, ಯಡ್ರಾಮಿ ಸರಕಾರಿ ಕ್ವಾರಂಟೈನ್‌ ಕೇಂದ್ರದಲ್ಲಿರುವ ಜಿಲ್ಲೆಯ 28 ಜನರಲ್ಲಿಬುಧವಾರ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿಸೋಂಕಿತರ ಸಂಖ್ಯೆ 185ಕ್ಕೆ ತಲುಪಿದಂತಾಗಿದೆ.
Vijaya Karnataka Web 28 people diagnosed with corona infection
28 ಜನರಲ್ಲಿಕೊರೊನಾ ಸೋಂಕು ಪತ್ತೆ


ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದ 22 ವರ್ಷದ ಪುರುಷ (ಪಿ-2338) ಮತ್ತು 55 ವರ್ಷದ ಮಹಿಳೆ (ಪಿ-2340), ನಾಗೂರ ತಾಂಡಾದ 49 ವರ್ಷದ ಪುರುಷ (ಪಿ-2339), ಡೊಂಗರಗಾಂವ ಬಳಿಯ ಭೀಮನಾಳ ತಾಂಡಾದ 36 ವರ್ಷದ ಯುವಕ (ಪಿ-2368) ಹಾಗೂ ಅಂಬಲಗಾ ಗ್ರಾಮದ 36 ವರ್ಷದ ವ್ಯಕ್ತಿಗೆ (ಪಿ-2359) ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜೇವರ್ಗಿ ತಾಲೂಕಿನ ರಾರ‍ಯವನೂರ್‌ ಗ್ರಾಮದ 38 ವರ್ಷದ ಪುರುಷ (ಪಿ-2344), 17 ವರ್ಷದ ಬಾಲಕಿ (ಪಿ-2345), 13 ವರ್ಷದ ಬಾಲಕ (ಪಿ-2346), 18 ವರ್ಷದ ಯುವತಿ (ಪಿ-2347), 50 ವರ್ಷದ ಪುರುಷ (ಪಿ-2348), 40 ವರ್ಷದ ಪುರುಷ (ಪಿ-2349), 35 ವರ್ಷದ ಮಹಿಳೆ (ಪಿ-2350) ಹಾಗೂ 26 ವರ್ಷದ ಯುವಕ (ಪಿ-2366), ಗುಡೂರ ಗ್ರಾಮದ 17 ವರ್ಷದ ಬಾಲಕ (ಪಿ-2351) ಮತ್ತು 10 ವರ್ಷದ ಬಾಲಕ (ಪಿ-2352), ಲಕನಾಪುರದ 34 ವರ್ಷದ ಯುವಕ (ಪಿ-2353), ಕೋಟನೂರ ಗ್ರಾಮದ 7 ವರ್ಷದ ಹೆಣ್ಣು ಮಗು (ಪಿ-2355) ಮತ್ತು 4 ವರ್ಷದ ಹೆಣ್ಣು ಮಗುವಿಗೂ (ಪಿ-2356) ಕೋವಿಡ್‌-19 ಅಂಟಿಕೊಂಡಿದೆ.

ಯಡ್ರಾಮಿ ತಾಲೂಕಿನ ಬಿಳವಾರದ 34 ವರ್ಷದ ವ್ಯಕ್ತಿಗೆ (ಪಿ-2139) ಕೊರೊನಾ ಸೋಂಕು ತಗುಲಿದೆ. ಆಳಂದ ತಾಲೂಕಿನ ನರೋಣಾ ಬಳಿಯ ಧರಿ ತಾಂಡಾದ 41 ವರ್ಷದ ವ್ಯಕ್ತಿ (ಪಿ-2357) ಮತ್ತು 20 ವರ್ಷದ ಯುವಕ (ಪಿ-2358), ಕಡಗಂಚಿ ತಾಂಡಾದ 23 ವರ್ಷದ ಯುವಕ (ಪಿ-2360), 16 ವರ್ಷದ ಬಾಲಕ (ಪಿ-2361) ಹಾಗೂ 22 ವರ್ಷದ ಯುವಕನಿಗೂ (ಪಿ-2362) ಮಹಾಮಾರಿ ಕೊರೊನಾ ಸೋಂಕು ಕಂಡುಬಂದಿದೆ.

ಸೇಡಂ ಪಟ್ಟಣದ 7 ವರ್ಷದ ಬಾಲಕ (ಪಿ-2139), ತಾಲೂಕಿನ ಶಂಕರಾಜಿಪುರ ಗ್ರಾಮದ 27 ವರ್ಷದ ಯುವಕ (ಪಿ-2363) ಮತ್ತು 11 ವರ್ಷದ ಬಾಲಕಿಗೂ (ಪಿ-2364) ಕೊರೊನಾ ಸೋಂಕು ದೃಢವಾಗಿದೆ.

ಇನ್ನು, ಚಿತ್ತಾಪುರ ತಾಲೂಕಿನ ಅಣಿಕೇರಿ ಸಮೀಪದ ರಾಮಾನಾಯಕ್‌ ತಾಂಡಾ ಮೂಲದ 40 ವರ್ಷದ ಪುರುಷನಿಗೂ (ಪಿ-2366) ಕೋವಿಡ್‌-19 ದೃಢವಾಗಿದೆ.

ಜಿಲ್ಲಾಮಟ್ಟದ ನೋಡಲ್‌ ಅಧಿಕಾರಿ ನೇಮಕ

ಕಲಬುರಗಿ: ಜಿಲ್ಲೆಯಲ್ಲಿಕೊರೊನಾ ವೈರಸ್‌ ತಡೆಗಟ್ಟುವ ಪ್ರಯುಕ್ತ ಲಾಕ್‌ಡೌನ್‌ ಸಂದರ್ಭದಲ್ಲಿದುರ್ಬಲ ವ್ಯಕ್ತಿಗಳಿಗೆ ಪರಿಹಾರ ಒದಗಿಸಲು ಹಾಗೂ ಎನ್‌.ಜಿ.ಓ. ಜೊತೆಗೆ ಸಮನ್ವಯ ಸಾಧಿಸಲು ಜಿಲ್ಲಾಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರನ್ನು ಜಿಲ್ಲಾಮಟ್ಟದ ನೋಡಲ್‌ ಅಧಿಕಾರಿ ಎಂದು ನೇಮಕ ಮಾಡಿ ಜಿಲ್ಲಾಧಿಕಾರಿ ಶರತ್‌ ಬಿ. ಆದೇಶ ಹೊರಡಿಸಿದ್ದಾರೆ.

ಅದೇ ರೀತಿ, ಕಲಬುರಗಿಯ ಪ್ರತಿಷ್ಠಿತ ಎನ್‌.ಜಿ.ಓ. ಗಳಾದ ಲಯನ್ಸ್‌ ಕ್ಲಬ್‌ (ನೃಪತುಂಗ), ರೋಟರಿ ಕ್ಲಬ್‌, ಡಾನ್‌ಬಾಸ್ಕೊ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಗಳನ್ನು ನೇಮಕ ಮಾಡಿ ಅವರು ಆದೇಶ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ