ಆ್ಯಪ್ನಗರ

ಕಲಬುರಗಿಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ 188ಕ್ಕೆ ಏರಿಕೆ

ಕಲಬುರಗಿ ಜಿಲ್ಲೆಯಲ್ಲಿ ಮಾರಕ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 188ಕ್ಕೆ ಏರಿಕೆಯಾಗಿದ್ದು, ಗುರುವಾರ ಜಿಲ್ಲೆಯಲ್ಲಿ ಮತ್ತೆ ಮೂರು ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.

Vijaya Karnataka Web 28 May 2020, 2:19 pm
ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇವರೆಲ್ಲರೂ ಮುಂಬೈ ನಗರದಿಂದ ಇತ್ತೀಚೆಗೆ ಜಿಲ್ಲೆಗೆ ಹಿಂದಿರುಗಿದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 188ಕ್ಕೆ ಏರಿಕೆಯಾಗಿದೆ.
Vijaya Karnataka Web ಕಲಬುರಗಿಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ಪತ್ತೆ


30 ವರ್ಷದ ಮಹಿಳೆಯರಾದ ಪಿ-2422 ಮತ್ತು ಪಿ-2492 ಹಾಗೂ 9 ವರ್ಷದ ಬಾಲಕ ಪಿ-2493 ಸೋಂಕಿಗೆ ಒಳಗಾದವರು ಎಂದು ರಾಜ್ಯ ಕೋವಿಡ್ ಬುಲೆಟಿನ್ ತಿಳಿಸಿದೆ.
ರಾಜ್ಯದಲ್ಲಿ ತುಸು ತಣ್ಣಗಾದ ಕೊರೊನಾ, 75 ಹೊಸ ಪ್ರಕರಣ, ಉಡುಪಿಯಲ್ಲಿ 27 ಪಾಸಿಟಿವ್‌

ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಮುಂಬೈ ಮಹಾನಗರಕ್ಕೆ ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದ ಸುಮಾರು ಒಂದುವರೆ ಲಕ್ಷ ವಲಸೆ ಕಾರ್ಮಿಕರ ಪೈಕಿ ಈಗಾಗಲೇ 32,500ಕ್ಕೂ ಹೆಚ್ಚು ಮಂದಿ ಜಿಲ್ಲೆಯ ವಿವಿಧ ಸರಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದಾರೆ. ಇನ್ನೂ ಇವರೆಲ್ಲರ ಲ್ಯಾಬ್ ಪರೀಕ್ಷೆ ನಡೆಯುವುದು ಬಾಕಿ ಉಳಿದಿದೆ‌. ಒಂದೊಮ್ಮೆ ಇಷ್ಟೊಂದು ಬೃಹತ್ ಸಮೂಹದ ಆಯ್ಕೆಯಾಧರಿತ (Random) ತಪಾಸಣೆ ಪೂರ್ಣಗೊಂಡ ಬಳಿಕವೇ ಇನ್ನೂ ಹೆಚ್ಚು ಪ್ರಮಾಣದ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ