ಆ್ಯಪ್ನಗರ

ಇಂದಿನ ಮಕ್ಕಳಿಗೆ ಸೃಜನಶೀಲತೆ ಕಲಿಸಿ

ಇಂದು ಜಾತೀಕರಣ ಮತ್ತು ಉದಾರೀಕರಣದ ನೀತಿಗಳಿಂದಾಗಿ ನಮ್ಮ ಮಕ್ಕಳಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮ ಸಂಸ್ಕೃತಿ ಮತ್ತು ಕಲೆ, ಸಂಸ್ಕಾರಗಳನ್ನು ನೀಡುತ್ತ ಸೃಜನಶೀಲತೆ ಕಲಿಸುವುದು ತುಂಬಾ ಅಗತ್ಯವಾಗಿದೆ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ ಪಟ್ಟರು.

Vijaya Karnataka 9 Sep 2018, 4:28 pm
ಕಲಬುರಗಿ : ಇಂದು ಜಾತೀಕರಣ ಮತ್ತು ಉದಾರೀಕರಣದ ನೀತಿಗಳಿಂದಾಗಿ ನಮ್ಮ ಮಕ್ಕಳಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮ ಸಂಸ್ಕೃತಿ ಮತ್ತು ಕಲೆ, ಸಂಸ್ಕಾರಗಳನ್ನು ನೀಡುತ್ತ ಸೃಜನಶೀಲತೆ ಕಲಿಸುವುದು ತುಂಬಾ ಅಗತ್ಯವಾಗಿದೆ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ ಪಟ್ಟರು.
Vijaya Karnataka Web advice on creating creativity in children
ಇಂದಿನ ಮಕ್ಕಳಿಗೆ ಸೃಜನಶೀಲತೆ ಕಲಿಸಿ


ನಗರದ ಮಾತೋಶ್ರೀ ನೀಲಗಂಗಮ್ಮ ಜಿ. ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿ ಶನಿವಾರ ಖ್ಯಾತ ಕಲಾವಿದ ನಾಡೋಜ ಡಾ. ವಿ.ಜಿ. ಅಂದಾನಿ ಅವರ 26ಕಲಾಕೃತಿಗಳ ಪ್ರದರ್ಶನ ಮತ್ತು ಕಲಾವಿದ ದಿ. ಎಂ.ಬಿ.ಪಾಟೀಲ ಸ್ಮರಣಾರ್ಥ ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಚಿತ್ರಕಲೆ, ನಾಟಕಗಳು ಮತ್ತು ನೆಲದ ಸೊಗಡಿನ ಪರಿಸರದಲ್ಲಿ ನಮ್ಮ ಮಕ್ಕಳು ಬೆಳೆಯದೇ ಇದ್ದರೆ ಮುಂದೆ ಅವರು ಯಂತ್ರ ಮಾನವರಾಗುವ ಅಪಾಯ ಖಂಡಿತ ಇದೆ. ಆದ್ದರಿಂದ ಮಕ್ಕಳನ್ನು ನಾಟಕ, ಸಂಗೀತ ಮತ್ತು ಚಿತ್ರಕಲೆ ಇಂತಹ ಪರಿಸರದಲ್ಲಿ ಬೆಳೆಸಲು ಸಲಹೆ ನೀಡಿದ ಅವರು, ಇದರಿಂದ ಭವಿಷ್ಯದಲ್ಲಿ ಉತ್ತಮ ನಾಗರಿಕರು ದೇಶಕ್ಕೆ ದೊರೆತಂತಾಗುತ್ತದೆ ಎಂದರು.

ಶಾಲೆಗಳಲ್ಲಿ ಕಡ್ಡಾಯವಾಗಿ ಚಿತ್ರಕಲೆ, ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಮುಂದಡಿ ಇಡಬೇಕು. ಇದರಿಂದ ಸೃಜನಾತ್ಮಕ ದೇಶ, ಸೃಜನಶೀಲ ಸಮಾಜ ಕಟ್ಟುವ ಕನಸು ಸಾಧ್ಯವಾಗುತ್ತದೆ ಎಂದರು.

ಖ್ಯಾತ ಕ್ಲಾರಿಯೋನೆಟ್‌ ವಾದಕ ಡಾ. ಪಂಡಿತ ನರಸಿಂಹಲು ವಡವಾಟಿ ಅವರು ಅಕ್ಕಮಹಾದೇವಿ ಅವರ ವಚನ ಹಾಡಿದರು ಅಲ್ಲದೆ, ಕ್ಲಾರಿಯೋನೆಟ್‌ ವಾದನ ಮಾಡಿ ನೆರೆದಿದ್ದ ಸಂಗೀತ ಪ್ರಿಯರ ಮನಸೂರೆಗೊಂಡರು. ಇದೇ ವೇಳೆ ಡಾ. ವಿ.ಜಿ.ಅಂದಾನಿ ಅವರು ಅಕ್ಕಮಹಾದೇವಿ ಆಯ್ದ ವಚನಗಳಲ್ಲಿನ ಭಾವಗಳನ್ನಾಧರಿಸಿ ರಚನೆ ಮಾಡಿರುವ 26 ಕಲಾಕೃತಿಗಳು ಪ್ರದರ್ಶನಗೊಂಡವು. ಈವೇಳೆಯಲ್ಲಿ ಕಲಾವಿದರು, ಸಂಗೀತ ಪ್ರಿಯರು ಹಾಗೂ ಗ್ಯಾಲರಿಯ ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ