ಆ್ಯಪ್ನಗರ

ಅಜಯಸಿಂಗ್‌ ಫಸ್ಟ್‌, ಮಾಲೀಕಯ್ಯ ಲಾಸ್ಟ್‌

2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತ್ತು ಅತೀ ಕಮ್ಮಿ ಮತ ಪಡೆದು ಗೆದ್ದವರು ಇದ್ದಾರೆ. ಜೇವರ್ಗಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಧರ್ಮಸಿಂಗ್‌ ಪುತ್ರ ಡಾ.ಅಜಯಸಿಂಗ್‌ ದಾಖಲೆಯ 36,700 ಮತಗಳ ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಲೀಕಯ್ಯ ಗುತ್ತೇದಾರ ಕಡಿಮೆ ಅಂದರೆ 5,238 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕೊನೆಯವರಾಗಿದ್ದಾರೆ.

Vijaya Karnataka 15 Apr 2018, 5:25 pm
ಪ್ರಭುಲಿಂಗ ಜಿ. ನೀಲೂರೆ
Vijaya Karnataka Web ajaya sing first malikayya lost
ಅಜಯಸಿಂಗ್‌ ಫಸ್ಟ್‌, ಮಾಲೀಕಯ್ಯ ಲಾಸ್ಟ್‌


ಕಲಬುರಗಿ :
2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತ್ತು ಅತೀ ಕಮ್ಮಿ ಮತ ಪಡೆದು ಗೆದ್ದವರು ಇದ್ದಾರೆ. ಜೇವರ್ಗಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಧರ್ಮಸಿಂಗ್‌ ಪುತ್ರ ಡಾ.ಅಜಯಸಿಂಗ್‌ ದಾಖಲೆಯ 36,700 ಮತಗಳ ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಲೀಕಯ್ಯ ಗುತ್ತೇದಾರ ಕಡಿಮೆ ಅಂದರೆ 5,238 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕೊನೆಯವರಾಗಿದ್ದಾರೆ.

ಜೇವರ್ಗಿ ಕ್ಷೇತ್ರದಿಂದ ಕಾಂಗ್ರೆಸ್‌ನ ಡಾ.ಅಜಯಸಿಂಗ್‌ 67038 ಮತ ಪಡೆದರೆ ಅವರ ಪ್ರತಿಸ್ಪರ್ಧಿ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ್‌ 30,338 ಮತ ಗಳಿಸುವಲ್ಲಿ ಮಾತ್ರ ಸಫಲರಾದರು. ಅಜಯಸಿಂಗ್‌ ಅವರ ಗೆಲುವಿನ ಅಂತರ ಎದುರಾಳಿ ಪಡೆದ ಮತಗಳಿಗಿಂತಲೂ ಹೆಚ್ಚಿರುವುದು ವಿಶೇಷ.

ಜೇವರ್ಗಿ ಮತಕ್ಷೇತ್ರದಿಂದ ಸತತ ಎಂಟು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದ ಮಾಜಿ ಸಿಎಂ ಎನ್‌. ಧರ್ಮಸಿಂಗ್‌ ಸಹ ಇಷ್ಟೊಂದು ಮತಗಳ ಅಂತರದಲ್ಲಿ ಗೆದ್ದಿರಲಿಲ್ಲ. ಅವರು 1989ರಲ್ಲಿ 11,664 ಹಾಗೂ 1978ರಲ್ಲಿ 11595 ಮತಗಳ ಅಂತರದಲ್ಲಿ ಮಾತ್ರ ಎದುರಾಳಿ ಅಭ್ಯರ್ಥಿಗಳನ್ನು ಮಣಿಸಿದ್ದರು. ಜೇವರ್ಗಿ ಮತಕ್ಷೇತ್ರದಲ್ಲಿ ಇದುವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಅಜಯಸಿಂಗ್‌ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಮೊದಲಿಗರಾಗಿದ್ದಾರೆ.

ಅಫಜಲಪುರ ಮತಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದ ಮಾಲೀಕಯ್ಯ ಗುತ್ತೇದಾರ 2013ರಲ್ಲಿ ನಡೆದ ಚುನಾವಣೆಯಲ್ಲಿ 5238 ಮತಗಳ ಅಂತರದಲ್ಲಿ ಕೆಜೆಪಿಯ ಎಂ.ವೈ.ಪಾಟೀಲ್‌ ಅವರನ್ನು ಮಣಿಸಿದ್ದರು. ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರು ಇವರು. ಗುತ್ತೇದಾರ 38,093 ಮತ ಪಡೆದರೆ ಅವರ ಎದುರಾಳಿ ಎಂ.ವೈ.ಪಾಟೀಲ್‌ 32,855 ಮತ ಗಳಿಸಿದ್ದರು.

ಅಜಯಸಿಂಗ್‌ ನಂತರ ಎರಡನೇ ಸ್ಥಾನದಲ್ಲಿದ್ದವರು ಚಿತ್ತಾಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಿಯಾಂಕ್‌ ಖರ್ಗೆ. ಇವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ವಾಲ್ಮೀಕಿ ನಾಯಕ ಅವರನ್ನು 31,191 ಮತಗಳ ಅಂತರದಲ್ಲಿ ಮಣಿಸಿದ್ದರು. ಪ್ರಿಯಾಂಕ ಖರ್ಗೆ 69,379 ಮತ ಗಳಿಸಿದ್ದರೆ ಎದುರಾಳಿ ಅಭ್ಯರ್ಥಿ ವಾಲ್ಮೀಕಿ ನಾಯಕ ಕೇವಲ 38,188 ಮತ ಗಳಿಸುವಲ್ಲಿ ಮಾತ್ರ ಸಫಲರಾಗಿದ್ದರು.

ಬಳಿಕ ಮೂರನೇ ಸ್ಥಾನದಲ್ಲಿದ್ದವರು ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ. ಇವರು ಬಿಜೆಪಿಯ ಸುನೀಲ್‌ ವಲ್ಯಾಪುರೆ ಅವರನ್ನು 26060 ಮತಗಳಿಂದ ಸೋಲಿಸಿದ್ದರು. ಅದೇ ರೀತಿ ಗುಲ್ಬರ್ಗ ಉತ್ತರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಖಮರುಲ್‌ ಇಸ್ಲಾಂ 20,121 ಮತಗಳ ಅಂತರದಲ್ಲಿ ಕೆಜೆಪಿಯ ನಾಸೀರ ಹುಸೇನ್‌ ಉಸ್ತಾದ ಅವರನ್ನು ಮಣಿಸುವ ಮೂಲಕ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಆಳಂದ ಕ್ಷೇತ್ರದ ಬಿ.ಆರ್‌.ಪಾಟೀಲ್‌ 17,114, ಸೇಡಂ ಮತಕ್ಷೇತ್ರದಿಂದ ಡಾ.ಶರಣಪ್ರಕಾಶ ಪಾಟೀಲ್‌ 11895, ಗುಲ್ಬರ್ಗ ದಕ್ಷಿಣ ಕ್ಷೇತ್ರದ ದತ್ತಾತ್ರೇಯ ಪಾಟೀಲ್‌ 9970 ಹಾಗೂ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿ.ರಾಮಕೃಷ್ಣ 7209 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.


ಮತಕ್ಷೇತ್ರ- ವಿಜೇತರು - ಗೆಲುವಿನ ಅಂತರ

ಜೇವರ್ಗಿ- ಅಜಯಸಿಂಗ್‌ -36700

ಚಿತ್ತಾಪುರ- ಪ್ರಿಯಾಂಕ್‌ ಖರ್ಗೆ-31191

ಚಿಂಚೋಳಿ- ಉಮೇಶ ಜಾಧವ- 26060

ಗುಲ್ಬರ್ಗ ಉತ್ತರ- ಖಮರುಲ್‌ ಇಸ್ಲಾಂ- 20121

ಆಳಂದ- ಬಿ.ಆರ್‌.ಪಾಟೀಲ್‌-17114

ಸೇಡಂ- ಡಾ.ಶರಣಪ್ರಕಾಶ- 11895

ಗುಲ್ಬರ್ಗ ದಕ್ಷಿಣ- ದತ್ತಾತ್ತೇಯ ಪಾಟೀಲ್‌- 9970

ಗುಲ್ಬರ್ಗ ಗ್ರಾಮೀಣ- ಜಿ.ರಾಮಕೃಷ್ಣ- 7209

ಅಫಜಲಪುರ- ಮಾಲೀಕಯ್ಯ ಗುತ್ತೇದಾರ- 5238

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ