ಆ್ಯಪ್ನಗರ

ಮರಳು ಸಾಗಾಟಕ್ಕೆ ಲಂಚಕ್ಕೆ ಕೈಯೊಡ್ಡಿದ ಪೊಲೀಸರು: ಕಲಬುರಗಿಯಲ್ಲಿ ಇನ್ಸ್ ಪೆಕ್ಟರ್, ಇಬ್ಬರು ಕಾನ್ಸ್ ಟೇಬಲ್ ಲೋಕಾಯುಕ್ತ ಬಲೆಗೆ

ಮರಳು‌ ಸಾಗಾಟಕ್ಕೆ ಲಂಚ ಪಡೆಯುವ ವಿಷಯವಾಗಿ ಜೇವರ್ಗಿ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ ಟೇಬಲ್‌ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್ಸ್ ಪೆಕ್ಟರ್ ಶಿವಪ್ರಸಾದ ಮಠದ, ಕಾನ್ಸ್ ಟೇಬಲ್ ಶಿವರಾಯ ಹಾಗೂ ಪಿಐ ವಾಹನ ಚಾಲಕ ಅವ್ವಣ್ಣ ಲೋಕಾಯುಕ್ತ ಬಲೆಗೆ ಬಿದ್ದವರು. ಶಹಾಪುರದ ಅಖಿಲ್ ಎಂಬುವವರಿಗೆ ಲಂಚದ ಹಣದ ಬೇಡಿಕೆ ಇಟ್ಟು ಅವರಿಂದ ಹಣ ಪಡೆಯುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿದ್ದಾರೆ.

Lipi 23 Sep 2022, 12:33 pm
ಕಲಬುರಗಿ: ಮರಳು‌ ಸಾಗಾಟಕ್ಕೆ ಲಂಚ ಪಡೆಯುವ ವಿಷಯವಾಗಿ ಜೇವರ್ಗಿ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ ಟೇಬಲ್‌ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Vijaya Karnataka Web police loka


ಇನ್ಸ್ ಪೆಕ್ಟರ್ ಶಿವಪ್ರಸಾದ ಮಠದ, ಕಾನ್ಸ್ ಟೇಬಲ್ ಶಿವರಾಯ ಹಾಗೂ ಪಿಐ ವಾಹನ ಚಾಲಕ ಅವ್ವಣ್ಣ ಲೋಕಾಯುಕ್ತ ಬಲೆಗೆ ಬಿದ್ದವರು. ಶಹಾಪುರದ ಅಖಿಲ್ ಎಂಬುವವರಿಗೆ ಲಂಚದ ಹಣದ ಬೇಡಿಕೆ ಇಟ್ಟು ಅವರಿಂದ ಹಣ ಪಡೆಯುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿದ್ದಾರೆ.

PSI Scam | ಪಿಎಸ್‌ಐ ಹಗರಣದಲ್ಲಿ ಬಸವರಾಜ ದಢೇಸುಗೂರು ವಿರುದ್ಧ ಲಂಚ ಪಡೆದ ಆರೋಪ: ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ
ಹಣದ ಸಮೇತ ಪರಾರಿಗೆ ಕಾನ್ಸ್ ಟೇಬಲ್ ಯತ್ನ- ಲೋಕಾಯುಕ್ತ ಡಿವೈಎಸ್ಪಿಗೆ ಗಾಯ:

ಮರಳು ಸಾಗಾಟಕ್ಕೆ ದೂರುದಾರ ಅಖಿಲ್ ಅವರಿಗೆ ಶಿವರಾಯ ಲಂಚದ ಹಣ ಬೇಡಿಕೆ ಇಟ್ಟಿದ್ದರು. ಪೂರ್ವ ನಿಗದಿಯಂತೆ ಜೇವರ್ಗಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ವೇಳೆ ಶಿವರಾಯ ಹಣದ ಸಮೇತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಲೋಕಾಯುಕ್ತ ಪೊಲೀಸರು ಬೆನ್ನಟ್ಟಿ ಆತನನ್ನು ಬಂಧಿಸಿದ್ದಾರೆ.

ಸಿನಿಮೀಯ ರೀತಿಯ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಬಿದ್ದು ಚಿಕ್ಕ-ಪುಟ್ಟ ಗಾಯಗಳಾಗಿವೆ. ಇನ್ನು ಶಿವರಾಯನನ್ನು ವಶಕ್ಕೆ ಪಡೆದ ಲೋಕಾಯುಕ್ತರು ವಿಚಾರಣೆ ನಡೆಸಿದಾಗ ಇನ್ಸಪೆಕ್ಟರ್, ಹಾಗೂ ಅವರ ವಾಹನ ಚಾಲಕನ ಪಾಲು ಇರುವುದನ್ನು ಹೇಳಿದ್ದಾನೆ. ಆಗ ಶಿವರಾಯನಿಂದಲೇ ಇನ್ಸ್ ಪೆಕ್ಟರ್‌ಗೆ ಕರೆ ಮಾಡಿಸಿ ಲಂಚದ ಹಣ ಪಡೆಯಲು ಬರುವಂತೆ ತಿಳಿಸಿದ್ದಾರೆ. ಇನ್ಸ್ ಪೆಕ್ಟರ್ ಶಿವಪ್ರಸಾದ ಹಾಗೂ ಚಾಲಕ ಅವ್ವಣ್ಣ ಕಲಬುರಗಿಯಿಂದ ಜೇವರ್ಗಿ ಕಡೆಗೆ ಬರುವಾಗ ನಂದಿಕೂರ ಬಳಿ‌ ಲೋಕಾಯುಕ್ತ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ