ಆ್ಯಪ್ನಗರ

ಗುವಿವಿ ಪ್ರಭಾರ ಕುಲಪತಿಯಾಗಿ ರಾಜನಾಳಕರ ನೇಮಕ

ಇಲ್ಲಿನ ಗುಲ್ಬರ್ಗ ವಿವಿಯ ನೂತನ ಪ್ರಭಾರ ಕುಲಪತಿಯಾಗಿ ವಾಣಿಜ್ಯ ವಿಭಾಗದ ಡೀನ್‌ ಪ್ರೊ. ಲಕ್ಷ್ಮಣ ರಾಜನಾಳಕರ್‌ ಅವರನ್ನು ಮಂಗಳವಾರ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

Vijaya Karnataka 6 Dec 2019, 4:04 pm
ಕಲಬುರಗಿ :ಇಲ್ಲಿನ ಗುಲ್ಬರ್ಗ ವಿವಿಯ ನೂತನ ಪ್ರಭಾರ ಕುಲಪತಿಯಾಗಿ ವಾಣಿಜ್ಯ ವಿಭಾಗದ ಡೀನ್‌ ಪ್ರೊ. ಲಕ್ಷ್ಮಣ ರಾಜನಾಳಕರ್‌ ಅವರನ್ನು ಮಂಗಳವಾರ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
Vijaya Karnataka Web appointment of guvvi prabhara chancellor of the rajnalakar
ಗುವಿವಿ ಪ್ರಭಾರ ಕುಲಪತಿಯಾಗಿ ರಾಜನಾಳಕರ ನೇಮಕ


ನಿಕಟಪೂರ್ವ ಪ್ರಭಾರಿ ಕುಲಪತಿ ಪ್ರೊ. ಪರಿಮಳಾ ಅಂಬೇಕರ್‌ ಅವರಿಂದ ಅಧಿಕಾರ ವಹಿಸಿಕೊಂಡರು. ಈ ವೇಳೆಯಲ್ಲಿಆಡಳಿತ ಕುಲಸಚಿವ ಪ್ರೊ. ಸಿ.ಸೋಮಶೇಖರ, ಹಣಕಾಸು ಅಧಿಕಾರಿ ಪ್ರೊ. ಬಿ.ವಿಜಯ, ವಿವಿ ಅಧಿಕಾರಿಗಳು ಇತರರು ಇದ್ದರು.

ಈ ಕುರಿತು 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ಸಣ್ಣ ಅವಧಿಗೆ ಅಧಿಕಾರ ಸಿಕ್ಕಿದೆ. ಸಿಕ್ಕಿರುವ ಅಧಿಕಾರವನ್ನು ತುಂಬಾ ಪ್ರಾಮಾಣಿಕವಾಗಿ ಮತ್ತು ಸಮಗ್ರ ಅಭ್ಯುದಯಕ್ಕೆ ಬಳಕೆ ಮಾಡುವುದಾಗಿ ಹೇಳಿದರು.

ವಿವಿಯಲ್ಲಿಪರೀಕ್ಷಾ ವಿಭಾಗದ ಆಡಳಿತದಲ್ಲಿಒಂದಷ್ಟು ವೇಗ ತರುವ ಮತ್ತು ಸಮಯಕ್ಕೆ ಸರಿಯಾಗಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲು ನಾನು ಹೆಚ್ಚಿನ ಒತ್ತು ನೀಡುತ್ತೇನೆ. ಫಲಿತಾಂಶ ತಡವಾಗಿ ಪ್ರಕಟವಾಗುವುದರಿಂದ ಮತ್ತು ಪರೀಕ್ಷೆಗಳಲ್ಲಿಏರುಪೇರಾಗುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿಶ್ರಮವಹಿಸುವುದಾಗಿ ಹೇಳಿದರು.

ಪ್ರೊ.ರಾಜನಾಳಕರ್‌ ಅವರು, 3 ಬಾರಿಗೆ ವಾಣಿಜ್ಯ ವಿಭಾಗದ ಡೀನ್‌ ಆಗಿ 7 ವರ್ಷ ವಿವಿ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ನಾನು ಒಂದು ತಿಂಗಳಲ್ಲಿಎಷ್ಟು ಸಾಧ್ಯವೋ ಅಷ್ಟು ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವ ಮತ್ತು ಈಗ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಸಂಪೂರ್ಣ ಮಾಡಿ ಅವುಗಳ ಉಪಯೋಗ ವಿದ್ಯಾರ್ಥಿಗಳಿಗೆ ದೊರಕಿಸಲು ಶ್ರಮಿಸುತ್ತೇನೆ. ಸರಕಾರ ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಲು ಕೆಲಸ ಮಾಡುತ್ತೇನೆ.

- ಪ್ರೊ. ಲಕ್ಷ್ಮಣ ರಾಜನಾಳಕರ್‌, ನೂತನ ಪ್ರಭಾರ ವಿ.ಸಿ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ