ಆ್ಯಪ್ನಗರ

ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ

ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಜೈಲು ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಿದೆ. ಮಹ್ಮದ್‌ ಇಸ್ಮಾಯಿಲ್‌ ನದಾಫ್‌ ಶಿಕ್ಷೆಗೆ ಗುರಿಯಾದವ.

ವಿಕ ಸುದ್ದಿಲೋಕ 5 Oct 2016, 4:04 pm

ಕಲಬುರಗಿ: ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಜೈಲು ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಿದೆ. ಮಹ್ಮದ್‌ ಇಸ್ಮಾಯಿಲ್‌ ನದಾಫ್‌ ಶಿಕ್ಷೆಗೆ ಗುರಿಯಾದವ.

ಘಟನೆ ವಿವರ:

ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯ ಡಬರಾಬಾದ್‌ ಪ್ರದೇಶದ ರಾಣೇಸ್‌ ಪೀರ್‌ ದರ್ಗಾ ಹಿಂದಿನ ಪಂಡಿತ ದೀನ ದಯಾಳ್‌ ಕಾಲೊನಿಯ 6 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಮಹ್ಮದ್‌ ಇಸ್ಮಾಯಿಲ್‌ 2014ರ ಮಾರ್ಚ್‌ 30ರಂದು ಸಂಜೆ ಚಾಕಲೇಟು ಕೊಡುವುದಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದ. ಮುಂದೆ ಇದೇ ಬಾಲಕಿಯನ್ನು 2014ರ ಏಪ್ರಿಲ್‌ 22ರಂದು ಸಂಜೆ 6ರ ಸುಮಾರಿಗೆ ಮನೆಯ ಬಳಿ ಆಡುತ್ತಿದ್ದಾಗ ಆರೋಪಿ ಪುನಃ ಚಾಕೊಲೇಟ್‌ ಕೊಡಿಸುವುದಾಗಿ ಕೈ ಹಿಡಿದು ಕರೆದಾಗ ಬಾಲಕಿ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ.

ಘಟನೆಯಿಂದ ಆಘಾತಗೊಂಡ ಪೋಷಕರು ತಕ್ಷಣ ಕಲಬುರಗಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಪಿಐ ಡಿ.ಜಿ. ರಾಜಣ್ಣ ತನಿಖೆ ಕೈಗೊಂಡು ಆರೋಪಿ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ. ಪ್ರೇಮಾವತಿ ಅವರು ಆರೋಪಿ ಮಹ್ಮದ್‌ ಇಸ್ಮಾಯಿಲ್‌ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರಕಾರದ ಪರವಾಗಿ (ಪೋಕ್ಸೋ) ವಿಶೇಷ ಸರಕಾರಿ ಅಭಿಯೋಜಕ ಎಲ್‌.ವಿ. ಚಟ್ನಾಳಕರ್‌ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ