ಆ್ಯಪ್ನಗರ

ಸೋನಿಯಾ, ದೇವೇಗೌಡರ ವಿರುದ್ಧ ಗೃಹ ಸಚಿವ ಬೊಮ್ಮಾಯಿ ಕಟುಟೀಕೆ

ತಿಹಾರ್ ಜೈಲಿನಲ್ಲಿರುವ ಮಾಜಿ ಗೃಹ ಸಚಿವ ಚಿದಂಬರಂ ಅವರನ್ನು ಭೇಟಿಯಾಗಿರುವುದು ಸೋನಿಯಾ ಗಾಂಧಿ ಅವರ ಮನಃಸ್ಥಿತಿ ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಟಾಂಗ್‌ ನೀಡಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಟೀಕೆಗಳಿಗೂ ತಿರುಗೇಟು ನೀಡಿದ್ದಾರೆ.

Vijaya Karnataka Web 23 Sep 2019, 1:22 pm
ಕಲಬುರಗಿ: ತಿಹಾರ್ ಜೈಲಿನಲ್ಲಿರುವ ಮಾಜಿ ಗೃಹ ಸಚಿವ ಚಿದಂಬರಂ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಿರುವುದು ಅವರ ನೈತಿಕ ಪ್ರಜ್ಞೆಯ ಸ್ಥಿತಿ ಎಂಥದ್ದು ಎಂಬುದನ್ನು ತಿಳಿಸುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
Vijaya Karnataka Web basavaraj bommai


ಇಲ್ಲಿನ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಜೈಲಿಗೆ ಹೋಗಿರುವ ವ್ಯಕ್ತಿಯನ್ನು ಭೇಟಿ ಮಾಡುವ ಹಕ್ಕು ಎಲ್ಲರಿಗೂ ಇದೆ. ಅಂತಹ ಹಕ್ಕು ಸೋನಿಯಾ ಅವರಿಗೂ ಇದೆ. ಆದರೆ, ಚಿದಂಬರಂ ಗಂಭೀರ ಆಥಿ೯ಕ ಪ್ರಕರಣದಲ್ಲಿ ಆರೋಪಿ ಎಂಬುದು ಗೊತ್ತಿದ್ದಾಗ್ಯೂ ಅವರನ್ನು ಭೇಟಿ ಮಾಡಿರುವುದು ಸೋನಿಯಾ ಅವರ ನೈತಿಕ ಸ್ಥಿತಿ ಎಂಥದ್ದು ಎಂಬುದನ್ನು ಬಿಂಬಿಸುತ್ತದೆ ಎಂದರು.

ರಾಜ್ಯದ 14 ಪೊಲೀಸ್ ತರಬೇತಿ ಶಾಲೆಗಳ ಉನ್ನತೀಕರಣ: ಬಸವರಾಜ್ ಬೊಮ್ಮಾಯಿ

ನೆರೆ ಪರಿಹಾರ ನೀಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಹೋದಲ್ಲಿ ಬಂದಲ್ಲಿ ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ, ರಾಜಕೀಯವಾಗಿ ಸಂಪೂಣ೯ವಾಗಿ ಹಿನ್ನಡೆ ಅನುಭವಿಸಿರುವ ದೇವೇಗೌಡರು ಹತಾಶರಾಗಿ ಮಾತನಾಡುತ್ತಿದ್ದಾರೆ. ಅವರು ಹಿರಿಯರು ಹೀಗಾಗಿ ಇಷ್ಟು ಮಾತ್ರ ಹೇಳಬಲ್ಲೆ ಎಂದರು.

2 ವರ್ಷಗಳಲ್ಲಿ 16 ಸಾವಿರ ಪೊಲೀಸ್ ಪೇದೆ, 650 ಪಿಎಸ್‌ಐ ನೇಮಕ: ಗೃಹ ಸಚಿವ ಬೊಮ್ಮಾಯಿ

ನೆರೆ ಪರಿಹಾರ ಘೋಷಿಸುವ ಅಧಿಕಾರ ಕೇಂದ್ರ ಗೃಹ ಸಚಿವರಿಗೆ ಇರುತ್ತದೆ. ಈಗಾಗಲೆ ರಾಜ್ಯಕ್ಕೆ ಕೇಂದ್ರ ಭೇಟಿ ನೀಡಿ ನೆರೆಯ ಪ್ರಮಾಣ ಕುರಿತು ವರದಿ ಸಂಗ್ರಹಿಸಿಕೊಂಡು ಹೋಗಿದೆ. ಮೇಲಾಗಿ ಸಿಎಂ ಹಾಗೂ ತಮ್ಮನ್ನೂ ಒಳಗೊಂಡಂತೆ ಕೆಲವು ಪ್ರಮುಖ ನಾಯಕರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಚಚಿ೯ಸಿದ್ದೇವೆ. ಮುಂದಿನ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರ ತನ್ನ ಪಾಲಿನ ನೆರೆ ಪರಿಹಾರ ಘೋಷಣೆ ಮಾಡಲಿದೆ ಎಂದರು. ಉಳ್ಳಾಲ ಶೂಟೌಟ್ ಕುರಿತು ಪ್ರಸ್ತಾಪಿಸಿದ ಗೃಹ ಸಚಿವ ಬೊಮ್ಮಾಯಿ, ತಪ್ಪಿತಸ್ಥರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ