ಆ್ಯಪ್ನಗರ

ಬಿಜೆಪಿ ಬರ ಅಧ್ಯಯನ ಡಿ.3 ರಿಂದ

ರಾಜ್ಯದ ಬರಪೀಡಿತ ತಾಲೂಕುಗಳ ಬಗ್ಗೆ ರಾಜ್ಯ ಸರಕಾರ ಕಾಳಜಿ ವಹಿಸದೆ ರಾಜಕೀಯದಲ್ಲಿ ತಲ್ಲೀನವಾಗಿರುವ ಕಾರಣ ಬಿಜೆಪಿ ಡಿ.3ರಿಂದ 5ರವರೆಗೆ ಬರ ಅಧ್ಯಯನ ನಡೆಸಲಿದೆ ಎಂದು ಪಕ್ಷದ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಇಂಗಿನ ತಿಳಿಸಿದರು.

Vijaya Karnataka 2 Dec 2018, 5:00 am
ಕಲಬುರಗಿ :ರಾಜ್ಯದ ಬರಪೀಡಿತ ತಾಲೂಕುಗಳ ಬಗ್ಗೆ ರಾಜ್ಯ ಸರಕಾರ ಕಾಳಜಿ ವಹಿಸದೆ ರಾಜಕೀಯದಲ್ಲಿ ತಲ್ಲೀನವಾಗಿರುವ ಕಾರಣ ಬಿಜೆಪಿ ಡಿ.3ರಿಂದ 5ರವರೆಗೆ ಬರ ಅಧ್ಯಯನ ನಡೆಸಲಿದೆ ಎಂದು ಪಕ್ಷದ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಇಂಗಿನ ತಿಳಿಸಿದರು.
Vijaya Karnataka Web bjp drought study from d3
ಬಿಜೆಪಿ ಬರ ಅಧ್ಯಯನ ಡಿ.3 ರಿಂದ


ಶನಿವಾರ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಆವರಿಸಿದೆ. ಪರಿಸ್ಥಿತಿ ಅವಲೋಕಿಸಲು ಬಿಜೆಪಿ ಮುಂದಾಗಿದ್ದು, ಡಿ.3ರಿಂದ ಮೂರು ದಿನಗಳ ಕಾಲ ಐದು ತಂಡಗಳು ಬರ ಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿವೆ. 6ನೇ ತಂಡ ಅತಿವೃಷ್ಟಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲಿದೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ ಹಾಗೂ ಪರಿಷತ್‌ನ ಪ್ರತಿಪಕ್ಷದ ನಾಯಕ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡ ಬರ ತಾಲೂಕುಗಳಲ್ಲಿ ಸಂಚರಿಸಲಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನೇತೃತ್ವದ ತಂಡ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ಕೊಡಲಿದೆ. ಡಿ.3ರಂದು ಈಶ್ವರಪ್ಪ ನೇತೃತ್ವದ ತಂಡ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಬರ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.

ಬರ ಪರಿಹಾರ ಕಾಮಗಾರಿ ನಿರ್ವಹಿಸುವಲ್ಲಿ ಸಮ್ಮಿಶ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಜನತೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಸಹ ಸಿಗದ ಪರಿಸ್ಥಿತಿ ಎದುರಾಗಿದೆ. ಮೇವು ಬ್ಯಾಂಕ್‌ಗಳನ್ನೂ ಸ್ಥಾಪಿಸಿಲ್ಲ. ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿಲ್ಲ. ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯಲ್ಲಿ ಬರ ಎಂದು ಘೋಷಿಸಿದ ತಾಲೂಕುಗಳಲ್ಲಿ ಶೇ.15ರಷ್ಟು ಮುಂಗಡ ಪರಿಹಾರ ಕೊಡಿಸಲು ಅವಕಾಶ ಇದೆ. ಆದರೆ, ಅದನ್ನೂ ಮಾಡದ ರಾಜ್ಯ ಸರಕಾರ ರೈತರ ಬಗ್ಗೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ ಎಂದು ಆರೋಸಿದರು.

ಮುಖಂಡರಾದ ಶಿವಾನಂದ ಉಪ್ಪಿನ್‌, ರಮೇಶ ಕುಸನೂರ, ರಾಜಶೇಖರ ಮಚಖೇಡ, ಭೀಮಾರಾವ ಇದ್ದರು.

ಬೆಳಗಾವಿಯಲ್ಲಿ ಪ್ರತಿಭಟನೆ ಡಿ.10ಕ್ಕೆ


ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇದುವರೆಗೂ ಎಫ್‌ಆರ್‌ಪಿ ಬೆಲೆ ಘೋಷಣೆ ಮಾಡಿಲ್ಲ. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವ ಸಂಬಂಧ ಸುಳ್ಳು ಹೇಳಿ ರೈತರನ್ನು ವಂಚಿಸುತ್ತಿದೆ ಎಂದು ದೂರಿದ ಅವರು, ರಾಜ್ಯದ ಸರಕಾರದ ವೈಫಲ್ಯ ಖಂಡಿಸಿ ಡಿ.10 ರಂದು ಬೆಳಗಾವಿಯ ಸುವರ್ಣಸೌಧದ ಎದುರು 1 ಲಕ್ಷ ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಸವರಾಜ್‌ ಇಂಗಿನ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ