ಆ್ಯಪ್ನಗರ

ಒಂದು ಜೀವಕ್ಕೆ ಕತ್ತಲು ಕವಿಸಿದ ಹುಣ್ಣಿಮೆ

ರೈತರ ಪಾಲಿನ ಕಾರ ಹುಣ್ಣಿಮೆ ಆಚರಣೆ ಈ ಬಾರಿ ಜಿಲ್ಲೆಯ ವಿವಿಧೆಡೆ ಹಲವು ಪ್ರಮಾದಗಳಿಗೆ ದಾರಿ ಮಾಡಿಕೊಟ್ಟಿದೆ. ಚಿಂಚೋಳಿ ತಾಲೂಕಿನ ಗಂಜಗೇರಾ ತಾಂಡಾದಲ್ಲಿ ಓರ್ವ ಯುವಕ ಎತ್ತಿನ ಬಂಡಿ ಮೇಲಿಂದ ಬಿದ್ದು ಮೃತಪಟ್ಟಿದ್ದರೆ, ಪ್ರತ್ಯೇಕ ಪ್ರಕರಣಗಳಲ್ಲಿ ಶಾಸಕ ಡಾ.ಉಮೇಶ ಜಾಧವ ಸೇರಿದಂತೆ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

Vijaya Karnataka 29 Jun 2018, 9:27 am
ಕಲಬುರಗಿ: ರೈತರ ಪಾಲಿನ ಕಾರ ಹುಣ್ಣಿಮೆ ಆಚರಣೆ ಈ ಬಾರಿ ಜಿಲ್ಲೆಯ ವಿವಿಧೆಡೆ ಹಲವು ಪ್ರಮಾದಗಳಿಗೆ ದಾರಿ ಮಾಡಿಕೊಟ್ಟಿದೆ. ಚಿಂಚೋಳಿ ತಾಲೂಕಿನ ಗಂಜಗೇರಾ ತಾಂಡಾದಲ್ಲಿ ಓರ್ವ ಯುವಕ ಎತ್ತಿನ ಬಂಡಿ ಮೇಲಿಂದ ಬಿದ್ದು ಮೃತಪಟ್ಟಿದ್ದರೆ, ಪ್ರತ್ಯೇಕ ಪ್ರಕರಣಗಳಲ್ಲಿ ಶಾಸಕ ಡಾ.ಉಮೇಶ ಜಾಧವ ಸೇರಿದಂತೆ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
Vijaya Karnataka Web Poornima


ಚಿಂಚೋಳಿ ತಾಲೂಕಿನ ಗಂಜಗೇರಾ ತಾಂಡಾದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಎತ್ತುಗಳ ಮೆರವಣಿಗೆ ಮತ್ತು ಎತ್ತಿನ ಬಂಡಿಗಳನ್ನು ಓಡಿಸುವ ಆಟ ನಡೆದಿತ್ತು. ಈ ವೇಳೆ, ಬಂಡಿಯ ಮೇಲಿದ್ದ ರಾಜು ಚವ್ಹಾಣ (35) ಎಂಬ ಆಯತಪ್ಪಿ ಕೆಳಗೆ ಬಿದ್ದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ, ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆತ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ನಡೆದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆ ವೇಳೆ ಎತ್ತು ಇರಿದ ಪರಿಣಾಮ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಶಾಸಕರ ಕಾಲಿನ ಮೇಲೆ ಹರಿದ ಎತ್ತಿನ ಬಂಡಿ


ಚಿಂಚೋಳಿಯಲ್ಲಿ ಗುರುವಾರ ಸಂಜೆ ಕಾರಹುಣ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ ಎತ್ತಿನ ಬಂಡಿಗಳ ಓಟದ ವೇಳೆ ಎತ್ತಿನ ಬಂಡಿಯ ಚಕ್ರ ಶಾಸಕ ಡಾ.ಉಮೇಶ ಜಾಧವ ಅವರ ಕಾಲಿನ ಹರಿದು ಹೋದ ಕಾರಣ ಅವರು ಗಾಯಗೊಂಡಿದ್ದಾರೆ. ಹೀಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಶಾಸಕರನ್ನು ಹೈದರಾಬಾದಿಗೆ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ