ಆ್ಯಪ್ನಗರ

ಬಾಲಕಾರ್ಮಿಕರ ಪತ್ತೆ: ಇಟ್ಟಂಗಿ ಭಟ್ಟಿ ಮೇಲೆ ದಾಳಿ

ತಹಸೀಲ್ದಾರ್‌ ನಿರ್ದೇಶನದನ್ವಯ ಬಾಲಕಾರ್ಮಿಕರ ಪತ್ತೆಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡವು ಮಂಗಳವಾರ ಕಲಬುರಗಿ ನಗರದ ಸೈಯದ್‌ ಚಿಂಚೋಳಿ ಗ್ರಾಮದಲ್ಲಿ ಇಟ್ಟಂಗಿ ಭಟ್ಟಿ ಮೇಲೆ ದಿಢೀರ್‌ ದಾಳಿ ನಡೆಸಿದೆ.

Vijaya Karnataka 28 Jul 2019, 10:00 pm
ಕಲಬುರಗಿ: ತಹಸೀಲ್ದಾರ್‌ ನಿರ್ದೇಶನದನ್ವಯ ಬಾಲಕಾರ್ಮಿಕರ ಪತ್ತೆಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡವು ಮಂಗಳವಾರ ಕಲಬುರಗಿ ನಗರದ ಸೈಯದ್‌ ಚಿಂಚೋಳಿ ಗ್ರಾಮದಲ್ಲಿ ಇಟ್ಟಂಗಿ ಭಟ್ಟಿ ಮೇಲೆ ದಿಢೀರ್‌ ದಾಳಿ ನಡೆಸಿದೆ.
Vijaya Karnataka Web child labor detection attacks on itangi bhatti
ಬಾಲಕಾರ್ಮಿಕರ ಪತ್ತೆ: ಇಟ್ಟಂಗಿ ಭಟ್ಟಿ ಮೇಲೆ ದಾಳಿ


ಈ ದಾಳಿ ಸಂದರ್ಭದಲ್ಲಿ ಇಟ್ಟಂಗಿ ಮಾಲೀಕರಿಗೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016 ರ ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು. ಈ ದಾಳಿ ಸಂದರ್ಭದಲ್ಲಿ ಕಲಬುರಗಿ ಕಾರ್ಮಿಕ ಇಲಾಖೆಯ 2ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ರಮೇಶ ಸುಂಬಡ, ಕಾರ್ಮಿಕ ಇಲಾಖೆಯ 3ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ, ವಲಯ ಸಂಪನ್ಮೂಲ ಉತ್ತರದ ಶಾಂತವೀರ ವೈದ್ಯ, ತಾಜ್‌ ಸುಲ್ತಾನಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೀತಾರಾಮ ಡಿ. ಚಿಂಚೋಳಿ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ್‌ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತೆ ಕಲಾವತಿ ಕೋಳಿ ಹಾಗೂ ಚೈಲ್ಡ್‌ ಲೈನ್‌ ಸಂಯೋಜಕ ಮಲ್ಲಯ ಗುತ್ತೇದಾರ ಉಪಸ್ಥಿತರಿದ್ದರು.

ದಾಳಿಯ ಸಂದರ್ಭದಲ್ಲಿ ಇಟ್ಟಂಗಿ ಭಟ್ಟಿಯಲ್ಲಿ ಬಾಲಕಾರ್ಮಿಕರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ