ಆ್ಯಪ್ನಗರ

ಜುಲೈ 31ರಂದು ಸಿಎನ್‌ಎಸ್‌- ವಿಎಫ್‌ಆರ್‌ ಅಳವಡಿಕೆ

ನಗರದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಕಲಬುರಗಿ ಏರ್‌ಪೋರ್ಟ್‌ನಿಂದ ನಾಗರಿಕ ವಿಮಾನ ಹಾರಾಟದ ಪ್ರಕ್ರಿಯೆ ಇನ್ನಷ್ಟು ತ್ವರಿತಗೊಂಡಿದ್ದು, ಹಾರಾಟ ಪ್ರಕ್ರಿಯೆಗೆ ಅಗತ್ಯವಾದ ಯಂತ್ರೋಪಕರಣಗಳಾದ ಸಿಎನ್‌ಎಸ್‌ ಮತ್ತು ವಿಎಫ್‌ಆರ್‌ ಅಳವಡಿಕೆ ಜುಲೈ 31ರಂದು ಕೈಗೊಳ್ಳಲು ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ (ಎಎಐ) ನಿರ್ಧರಿಸಿದೆ.

Vijaya Karnataka 11 Jul 2019, 9:24 pm
ಕಲಬುರಗಿ:ನಗರದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಕಲಬುರಗಿ ಏರ್‌ಪೋರ್ಟ್‌ನಿಂದ ನಾಗರಿಕ ವಿಮಾನ ಹಾರಾಟದ ಪ್ರಕ್ರಿಯೆ ಇನ್ನಷ್ಟು ತ್ವರಿತಗೊಂಡಿದ್ದು, ಹಾರಾಟ ಪ್ರಕ್ರಿಯೆಗೆ ಅಗತ್ಯವಾದ ಯಂತ್ರೋಪಕರಣಗಳಾದ ಸಿಎನ್‌ಎಸ್‌ ಮತ್ತು ವಿಎಫ್‌ಆರ್‌ ಅಳವಡಿಕೆ ಜುಲೈ 31ರಂದು ಕೈಗೊಳ್ಳಲು ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ (ಎಎಐ) ನಿರ್ಧರಿಸಿದೆ.
Vijaya Karnataka Web cns vfr implementation on july 31
ಜುಲೈ 31ರಂದು ಸಿಎನ್‌ಎಸ್‌- ವಿಎಫ್‌ಆರ್‌ ಅಳವಡಿಕೆ


ಈ ಬಗ್ಗೆ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ (ಐಡಿಡಿ) ಗೆ ಪತ್ರ ಬರೆದಿರುವ ಎಎಐ, ಅಗತ್ಯ ಸಹಕಾರ ನೀಡುವಂತೆ ಕೇಳಿಕೊಂಡಿದೆ.

ಜೂನ್‌ನಲ್ಲಿ ಐಡಿಡಿ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ ಅವರು ಎಎಐಗೆ ಪತ್ರ ಬರೆದು, ಕಲಬುರಗಿ ಏರ್‌ಪೋರ್ಟ್‌ ಅಭಿವೃದ್ಧಿ, ನಿರ್ವಹಣೆ ಮತ್ತು ಕಾರ್ಯಾಚರಣೆ ಕೈಗೊಳ್ಳುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಎಎಐ ಚೇರ್ಮನ್‌, ನಿಲ್ದಾಣದಲ್ಲಿ ಮೊದಲ ಹಂತದಲ್ಲಿ ವಿಎಫ್‌ಆರ್‌ ಕಾರ್ಯಾಚರಣೆ ಯಂತ್ರ ಅಳವಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ವಿಷ್ಯುವಲ್‌ ಫ್ಲೈಟ್‌ ರೂಲ್ಸ್‌ (ವಿಎಫ್‌ಆರ್‌) ವಿಮಾನ ಹಾರಿಸುವಾಗ ಅನುಸರಿಸಬೇಕಾದ ತಾಂತ್ರಿಕ ಅಂಶಗಳು, ಹವಾಮಾನದ ವಿವರ ತಿಳಿಯಬಹುದಾಗಿದೆ. ಕಮುನಿಕೇಶನ್‌, ನೇವಿಗೇಷನ್‌, ಸರ್ವಲನ್ಸ್‌ (ಸಿಎನ್‌ಎಸ್‌) ಯಂತ್ರವೂ ಅಳವಡಿಸಲಾಗುತ್ತದೆ. ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಜತೆಗೆ ಧ್ವನಿ ವಿನಿಯಮ, ದತ್ತಾಂಶಗಳ ಸಂಹವನ ಮಾಡಲು ಇದು ಅಗತ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ