ಆ್ಯಪ್ನಗರ

ದಲಿತರ ಬಗ್ಗೆ ದೋಸ್ತಿ ಸರಕಾರಕ್ಕೆ ದ್ವೇಷ: ಮಾಜಿ CS ಕೆ. ರತ್ನಪ್ರಭಾ

ಸಮ್ಮಿಶ್ರ ಸರಕಾರವು ದಲಿತರ ಪರ ತೋರಿಕೆ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ದಲಿತರ ಬಗ್ಗೆ ದ್ವೇಷವಿದೆ. ಇದಕ್ಕಾಗಿಯೇ ಮುಖ್ಯ ಕಾರ್ಯದರ್ಶಿ ಮಾಡಲು ತಡ ಮಾಡಿದರು ಎಂದಿದ್ದಾರೆ ರತ್ನಪ್ರಭಾ.

Vijaya Karnataka 11 Apr 2019, 12:43 pm
ಕಲಬುರಗಿ: ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಭಾಗಿದಾರ ಪಕ್ಷ ಗಳು ದಲಿತರ ಪರ ಕೇವಲ ತೋರಿಕೆ ರಾಜಕಾರಣ ಮಾಡುತ್ತಿದ್ದು, ನಿಜಾಂಶದಲ್ಲಿ ದಲಿತರ ಕಂಡರೆ ಎರಡು ಪಕ್ಷ ದ ನಾಯಕರ ಮನಸ್ಸಿನಲ್ಲಿ ದ್ವೇಷವಿದೆ ಎಂದು ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಗಂಭೀರ ಆರೋಪ ಮಾಡಿದರು.
Vijaya Karnataka Web Ratnaprabha


ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಧೋಳದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ದಲಿತರ ಸಮಾವೇಶದಲ್ಲಿ ಅವರು ಮಾತನಾಡಿದರು.

ನಾನು ದಲಿತೆ ಎನ್ನುವ ಕಾರಣಕ್ಕೆ ನನಗೆ ತುಳಿಯಲಾಗಿದೆ. 2014ರಲ್ಲಿಯೇ ನಾನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬೇಕಿತ್ತು. ಆದರೆ ನನಗೆ ಸುಳ್ಳು ಹೇಳಿ ಮೋಸ ಮಾಡಿ ಆ ಹುದ್ದೆ ನೀಡಲಿಲ್ಲ. ಕಾಟಾಚಾರ ಅನ್ನುವಂತೆ ಚುನಾವಣೆ ಇರುವಾಗ 4 ತಿಂಗಳ ಮಟ್ಟಿಗೆ ಸಿಎಸ್‌ ಹುದ್ದೆಗೆ ನೇಮಿಸಿದ್ದರು. ಈ ಮೂಲಕ ಹಿಂದಿನ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ