ಆ್ಯಪ್ನಗರ

ಪಾರಂಪರಿಕ ಜ್ಞಾನದ ಅವಗಣನೆ:ಪ್ರಸನ್ನ ಕಳವಳ

ಭಾರತವೂ ಒಳಗೊಂಡಂತೆ ಎಲ್ಲ ಶ್ರೀಮಂತ ರಾಷ್ಟ್ರಗಳು ತಮ್ಮ ಶ್ರೀಮಂತ ಪಾರಂಪರಿಕ ಜ್ಞಾನವನ್ನು ಮೂಲೆಗುಂಪು ಮಾಡಿರುವುದೇ ಪ್ರಸ್ತುತ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಚಕ್ರ ಸಂಸ್ಥೆಯ ಸಂಸ್ಥಾಪಕ ಹಾಗೂ ಖ್ಯಾತ ರಂಗಕರ್ಮಿ ಪ್ರಸನ್ನ ಅರ್ಥೈಸಿದರು.

Vijaya Karnataka 18 Apr 2018, 6:23 pm
ಕಲಬುರಗಿ : ಭಾರತವೂ ಒಳಗೊಂಡಂತೆ ಎಲ್ಲ ಶ್ರೀಮಂತ ರಾಷ್ಟ್ರಗಳು ತಮ್ಮ ಶ್ರೀಮಂತ ಪಾರಂಪರಿಕ ಜ್ಞಾನವನ್ನು ಮೂಲೆಗುಂಪು ಮಾಡಿರುವುದೇ ಪ್ರಸ್ತುತ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಚಕ್ರ ಸಂಸ್ಥೆಯ ಸಂಸ್ಥಾಪಕ ಹಾಗೂ ಖ್ಯಾತ ರಂಗಕರ್ಮಿ ಪ್ರಸನ್ನ ಅರ್ಥೈಸಿದರು.
Vijaya Karnataka Web conversation with farmers at karnataka central university
ಪಾರಂಪರಿಕ ಜ್ಞಾನದ ಅವಗಣನೆ:ಪ್ರಸನ್ನ ಕಳವಳ


ಇಲ್ಲಿಗೆ ಸಮೀಪದ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಂಪರಾಗತ ಜ್ಞಾನದ ಶ್ರೀಮಂತಿಕೆ ಇದ್ದಾಗ್ಯೂ ಅದರ ಬಳಕೆಗೆ ಒತ್ತು ನೀಡದೆ ಕೇವಲ ತಂತ್ರಜ್ಞಾನಕ್ಕೆ ಮಣೆ ಹಾಕಲಾಗುತ್ತಿದೆ. ನಿಸರ್ಗ ಮತ್ತು ನಾಗರೀಕತೆಯ ಮಧ್ಯೆ ನಿರಂತರ ತಿಕ್ಕಾಟ ನಡೆಯುತ್ತಲೇ ಇದೆ. ಪ್ರಕೃತಿ ಯಾವತ್ತೂ ಯಾರೊಂದಿಗೂ ತಾರತಮ್ಯ ಮತ್ತು ಸಾರ್ವಭೌಮತ್ವ ಸಾಧಿಸುವ ಯತ್ನ ಮಾಡುವುದಿಲ್ಲ. ಇನ್ನೊಂದೆಡೆ, ನಾಗೀಕತೆ ಈ ಎರಡೂ ಗುಣಗಳನ್ನು ತನ್ನೊಂದಿಗೆ ಅಳವಡಿಸಿಕೊಂಡು ಬಲಹೀನರನ್ನು ಶೋಷಿಸುವ ಕೆಲಸ ಮಾಡುತ್ತಿದೆ ಅವರು ವಿಷಾದಿಸಿದರು.

ನಾಗರೀಕತೆ ಇಂದು ಪ್ರಕೃತಿಯಿಂದ ಬಹುದೂರ ಸಾಗಿರುವುದರ ಜೊತೆಗೆ ಧರ್ಮದ ನೈಜ ವ್ಯಾಖ್ಯಾನ ಮರೆತು ಬದುಕುತ್ತಿದೆ. ಒಂದರ್ಥದಲ್ಲಿ ಧರ್ಮವೇ ಸತ್ತು ಹೋಗಿರುವ ಸ್ಥಿತಿಯಲ್ಲಿದೆ. ನಿಸರ್ಗ ಮತ್ತು ನಾಗರೀಕತೆಯ ಮಧ್ಯೆ ಮತ್ತೊಮ್ಮೆ ಬಾಂಧವ್ಯದ ಬೆಸುಗೆ ಏರ್ಪಡುವಂತೆ ಪ್ರೇರಣೆ ನೀಡುವ ಧರ್ಮ ಇಂದಿನ ಅಗತ್ಯವಾಗಿದೆ ಎಂದರು.

ಸಿಯುಕೆ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ, ಪ್ರೊ.ಪುಷ್ಪಾ ಎಂ.ಸವದತ್ತಿ, ಪ್ರೊ.ಎನ್‌.ನಾಗರಾಜು, ಪ್ರೊ.ಸುನಿತಾ ಮಂಜನಬೈಲು, ಪ್ರೊ.ಶಿವಗಂಗಾ ರುಮ್ಮಾ, ಪ್ರೊ.ಅಸ್ಲಂ, ಪ್ರೊ.ಚನ್ನವೀರ ಆರ್‌.ಎಂ., ಪ್ರೊ.ವಿಕ್ರಮ್‌ ವಿಸಾಜಿ ಸೇರಿದಂತೆ ವಿವಿಧ ನಿಕಾಯಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಾಜ-ಜ್ಞಾನ ಸಂಸ್ಥೆಗಳ ಮಧ್ಯೆ ಸೇತುವೆ ಅಗತ್ಯ

ಸಮಾಜ ಮತ್ತು ಜ್ಞಾನ ಸಂಸ್ಥೆಗಳ ಮಧ್ಯೆ ಸೇತುವೆ ಏರ್ಪಟ್ಟಾಗ ಪಾರಂಪರಿಕ ಜ್ಞಾನವನ್ನು ತಂತ್ರಜ್ಞಾನದೊಂದಿಗೆ ಸಮನ್ವಯಿಸಿಕೊಂಡು ಸುಸ್ಥಿರ ಪ್ರಗತಿ ಸಾಧ್ಯವಾಗುತ್ತದೆ ಎಂದು ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಪ್ರಸನ್ನ ಕಿವಿಮಾತು ಹೇಳಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಪಾರಂಪರಿಕ ಜ್ಞಾನ ಹೆಚ್ಚು ಶ್ರೀಮಂತಿಕೆ ಮೈಗೂಡಿಸಿಕೊಂಡಿದೆ. ಅದರಲ್ಲೂ ಶ್ರೀಮಂತ ಕೈಮಗ್ಗ ಪರಂಪರೆ ಇದ್ದರೂ ಅದನ್ನು ಮೂಲೆಗುಂಪು ಮಾಡಿರುವುದೇ ಈ ಭಾಗದ ಹಿಂದುಳಿಯುವಿಕೆಗೆ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ