ಆ್ಯಪ್ನಗರ

ಕಲಬುರಗಿ: ಕೊರೊನಾಗೆ 4 ಬಲಿ, 290 ಪಾಸಿಟಿವ್ ದಾಖಲು

ತೀವ್ರ ಉಸಿರಾಟ ತೊಂದರೆ ಸಮಸ್ಯೆಯಿಂದ‌ ಬಳಲುತ್ತಿದ್ದ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ 70 ವರ್ಷದ ವೃದ್ಧ ಏ.6 ರಂದು ಕೋವಿಡ್‌ನಿಂದಾಗಿ ಅಸ್ಪತ್ರೆಗೆ ದಾಖಲಾಗಿ ಏ.10 ರಂದು ನಿಧನ ಹೊಂದಿದ್ದಾರೆ.

Vijaya Karnataka Web 13 Apr 2021, 11:20 pm
ಕಲಬುರಗಿ: ಯುಗಾದಿಯ ದಿನವೂ ಕೊರೊನಾ ಅಟ್ಟಹಾಸ ಮೆರೆದಿದ್ದು 290 ಜನರಿಗೆ ಸೋಂಕು ತಗುಲಿದೆ.
Vijaya Karnataka Web ಕೊರೊನಾ ವೈರಸ್‌
ಕೊರೊನಾ ವೈರಸ್‌


ಇದೇ ವೇಳೆ ವೈರಸ್ ಉಪಟಳದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಮಂಗಳವಾರದ ಅರೋಗ್ಯ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ತೀವ್ರ ಉಸಿರಾಟ ತೊಂದರೆ ಸಮಸ್ಯೆಯಿಂದ‌ ಬಳಲುತ್ತಿದ್ದ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ 70 ವರ್ಷದ ವೃದ್ಧ ಏ.6 ರಂದು ಕೋವಿಡ್‌ನಿಂದಾಗಿ ಅಸ್ಪತ್ರೆಗೆ ದಾಖಲಾಗಿ ಏ.10 ರಂದು ನಿಧನ ಹೊಂದಿದ್ದಾರೆ.

ತೀವ್ರ ಉಸಿರಾಟ ತೊಂದರೆ ಅಧಿಕ ರಕ್ತದೊತ್ತಡ ಹಾಗೂ ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿ‌ ನಗರದ ಉಮರ್ ಕಾಲೊನಿಯ 60 ವರ್ಷದ ವೃದ್ಧ ಏ. 7 ರಂದು ಕೋವಿಡ್‌ನಿಂದಾಗಿ ಅಸ್ಪತ್ರೆಗೆ ದಾಖಲಾಗಿ, ಏ.9 ರಂದು ನಿಧನ ಹೊಂದಿದ್ದಾರೆ.

ತೀವ್ರ ಉಸಿರಾಟ ತೊಂದರೆ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ‌ ನಗರದ ಶಹಾಬಜಾರ ಪ್ರದೇಶದ 45 ವರ್ಷದ ಮಹಿಳೆ ಏ.9ರಂದು ಕೋವಿಡ್ ನಿಂದಾಗಿ ಅಸ್ಪತ್ರೆಗೆ ದಾಖಲಾಗಿ, ಏ.10 ರಂದು ನಿಧನ ಹೊಂದಿದ್ದಾರೆ.

ಆಳಂದ ತಾಲೂಕಿನ ದರ್ಗಶಿರೂರ ಗ್ರಾಮದ 45 ವರ್ಷದ ಪುರುಷ ಏ.9 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ, ಏ.10 ರಂದು ನಿಧನ ಹೊಂದಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲು 368 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ