ಆ್ಯಪ್ನಗರ

ಗ್ಯಾನ್‌ವಾಪಿ ಮಸೀದಿ ವಿವಾದ: ಸುಪ್ರೀಂ ಕೋರ್ಟ್ ನಿಲುವಿಗೆ ಬೃಂದಾ ಕಾರಟ್ ಬೇಸರ..

'ಅಯೋಧ್ಯೆ ಪ್ರಕರಣದಲ್ಲಿ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ - 1991 ರ ಅನ್ವಯ ದೇಶದ ಹಿತ ಕಾಪಾಡುವ ಕುರಿತು ಸುಪ್ರೀಂ ಕೋರ್ಟ್ ಮಾತನಾಡಿತ್ತು. ಆದರೆ, ಗ್ಯಾನ್‌ವಾಪಿ ಪ್ರಕರಣದಲ್ಲಿ ಆ ಕಾಯಿದೆಯ ಸಮರ್ಪಕ ಬಳಕೆಗೆ ಮುಂದಾಗದೆ ತಪ್ಪು ಸಂದೇಶ ನೀಡುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆ. ಗ್ಯಾನ್‌ವಾಪಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಅಗತ್ಯ ಇರಲಿಲ್ಲ. ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಬೇಕಾದವರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಿರುವುದು ಆತಂಕ ಮೂಡಿಸುವಂತಿದೆ. ನಮಗೆ ಸುಪ್ರೀಂ ಕೋರ್ಟ್‌ನಿಂದ ಅಪಾರ ನಿರೀಕ್ಷೆಯಿತ್ತು' - ಬೃಂದಾ ಕಾರಟ್

Authored byದಿಲೀಪ್ ಡಿ. ಆರ್. | Vijaya Karnataka Web 22 May 2022, 2:15 pm

ಹೈಲೈಟ್ಸ್‌:

  • ಐತಿಹಾಸಿಕ ತಪ್ಪುಗಳಿಗೆ ಆದ್ಯತೆ ನೀಡುವುದರಿಂದ ದೇಶದ ಆಂತರಿಕ ಭದ್ರತೆ ಮತ್ತು ಭಾವೈಕ್ಯತೆ ಹದಗೆಡಬಹುದು
  • ಈ ಕಾರಣಕ್ಕಾಗಿಯೇಮುಂದಾಲೋಚನೆಯಿಂದ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ - 1991 ಜಾರಿಗೆ ತರಲಾಗಿದೆ
  • ಗ್ಯಾನ್‌ವಾಪಿ ಪ್ರಕರಣದಲ್ಲಿ ಈ ಕಾಯಿದೆಯನ್ನು ಉಲ್ಲೇಖಿಸದೆ ಸುಪ್ರೀಂ ಕೋರ್ಟ್ ನಿರಾಶೆ ಮೂಡಿಸಿದೆ: ಬೃಂದಾ ಕಾರಟ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Brinda Karat
ಗ್ಯಾನ್‌ವಾಪಿ ಮಸೀದಿ ವಿವಾದ: ಸುಪ್ರೀಂ ಕೋರ್ಟ್ ನಿಲುವಿಗೆ ಬೃಂದಾ ಕಾರಟ್ ಬೇಸರ..
ಕಲಬುರಗಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇರುವ ಗ್ಯಾನ್‌ವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಳೆದಿರುವ ನಿಲುವು ಅಕ್ಷಮ್ಯ ಹಾಗೂ ದೇಶಕ್ಕೆ ತಪ್ಪು ಸಂದೇಶ ನೀಡುವಂತಿದೆ ಎಂದು, ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಬೇಸರ ವ್ಯಕ್ತಪಡಿಸಿದರು.

ಕಲಬುರಗಿಯ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಯೋಧ್ಯೆ ಪ್ರಕರಣದಲ್ಲಿ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ - 1991 ರ ಅನ್ವಯ ದೇಶದ ಹಿತ ಕಾಪಾಡುವ ಕುರಿತು ಸುಪ್ರೀಂ ಕೋರ್ಟ್ ಮಾತನಾಡಿತ್ತು. ಆದರೆ, ಗ್ಯಾನ್‌ವಾಪಿ ಪ್ರಕರಣದಲ್ಲಿ ಆ ಕಾಯಿದೆಯ ಸಮರ್ಪಕ ಬಳಕೆಗೆ ಮುಂದಾಗದೆ ತಪ್ಪು ಸಂದೇಶ ನೀಡುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆ ಎಂದು ಬೃಂದಾ ಕಾರಟ್ ವಿಶ್ಲೇಷಿಸಿದರು.

Gyanvapi Controversy: ‘ಗ್ಯಾನ್‌ವಾಪಿ’ ಎಂದರೇನು..? ಮಸೀದಿ ವಿವಾದ ಏನು..? ಇತಿಹಾಸವೇನು..?
ಗ್ಯಾನ್‌ವಾಪಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಅಗತ್ಯ ಇರಲಿಲ್ಲ. ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಬೇಕಾದವರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಿರುವುದು ಆತಂಕ ಮೂಡಿಸುವಂತಿದೆ. ನಮಗೆ ಸುಪ್ರೀಂ ಕೋರ್ಟ್‌ನಿಂದ ಅಪಾರ ನಿರೀಕ್ಷೆಯಿತ್ತು ಎಂದರು.


ಐತಿಹಾಸಿಕ ತಪ್ಪುಗಳಿಗೆ ಆದ್ಯತೆ ನೀಡುವುದರಿಂದ ದೇಶದ ಆಂತರಿಕ ಭದ್ರತೆ ಮತ್ತು ಭಾವೈಕ್ಯತೆ ಹದಗೆಡಬಹುದು ಎಂಬ ಮುಂದಾಲೋಚನೆಯಿಂದ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ - 1991 ಜಾರಿಗೆ ತರಲಾಗಿದೆ. ಗ್ಯಾನ್‌ವಾಪಿ ಪ್ರಕರಣದಲ್ಲಿ ಈ ಕಾಯಿದೆಯನ್ನು ಉಲ್ಲೇಖಿಸದೆ ಸುಪ್ರೀಂ ಕೋರ್ಟ್ ನಿರಾಶೆ ಮೂಡಿಸಿದೆ ಎಂದು ಬೃಂದಾ ಕಾರಟ್ ಹೇಳಿದರು.

The Places of Worship Act: 1991ರ 'ಪೂಜಾ ಸ್ಥಳ ಕಾಯ್ದೆ'ಯಲ್ಲಿ ಏನಿದೆ..? ಬಿಜೆಪಿ ಕೆಂಗಣ್ಣು ಏಕೆ..? ಗ್ಯಾನ್‌ವಾಪಿ ಶಿವಲಿಂಗಕ್ಕೆ ನಂಟೇನು..?
ಗ್ಯಾನ್‌ವಾಪಿ ಮಸೀದಿ ವಿವಾದದ ಬೆನ್ನಲ್ಲೇ ಮಥುರಾ ಶ್ರೀ ಕೃಷ್ಣ ದೇಗುಲದ ಪ್ರಕರಣವೂ ಮುನ್ನೆಲೆಗೆ ಬರುತ್ತಿದೆ. ಆ ಮೂಲಕ ರಾಜಕಾರಣಕ್ಕಾಗಿ ದೇಶಾದ್ಯಂತ ಅಶಾಂತಿ ಮೂಡಿಸುವ ಕೆಲಸವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಮಾಡುತ್ತಿವೆ ಎಂದು ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ತೀವ್ರ ಅಸಮಾಧಾನ ಹೊರ ಹಾಕಿದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ