ಆ್ಯಪ್ನಗರ

ಸಿದ್ದರಾಮಯ್ಯಗೆ ಸರಕಾರಿ ಸೌಲಭ್ಯ ನೀಡಲು ನಕಾರ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಲಬುರಗಿಯಲ್ಲಿ ಸರಕಾರಿ ಸೌಲಭ್ಯ ನೀಡಲು ನಿರಾಕರಿಸಲಾಗಿದೆ. ಶಿಷ್ಟಾಚಾರದ ಪ್ರಕಾರ, ಅಧಿಕೃತ ಕಾರ್ಯಕ್ರಮ ಇಲ್ಲದಿದ್ದರಿಂದ ಸಿದ್ದರಾಮಯ್ಯ ಅವರಿಗೆ ಸರಕಾರಿ ಗೆಸ್ಟ್ ಹೌಸ್, ಕಾರು ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.

Vijaya Karnataka Web 24 Feb 2020, 4:34 pm
ಕಲಬುರಗಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಲಬುರಗಿಯಲ್ಲಿ ಸರಕಾರಿ ಸೌಲಭ್ಯ ನೀಡಲು ನಿರಾಕರಿಸಲಾಗಿದೆ. ಶಿಷ್ಟಾಚಾರದ ಪ್ರಕಾರ, ಅಧಿಕೃತ ಕಾರ್ಯಕ್ರಮ ಇಲ್ಲದಿದ್ದರಿಂದ ಸಿದ್ದರಾಮಯ್ಯ ಅವರಿಗೆ ಸರಕಾರಿ ಗೆಸ್ಟ್ ಹೌಸ್, ಕಾರು ನೀಡಲು ಜಿಲ್ಲಾಡಳಿತ ನಿರಾಕರಿಸಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಖಾಸಗಿ ಹೋಟೆಲ್ ಮತ್ತು ಖಾಸಗಿ ಕಾರು ಬಳಸಿದ್ದಾರೆ.
Vijaya Karnataka Web siddaramaih


ಸಿದ್ದರಾಮಯ್ಯ ಅವರಿಗೆ ಸರಕಾರಿ ಸೌಲಭ್ಯ ನೀಡಲು ನಿರಾಕರಣೆ ಮಾಡಿದ್ದಕ್ಕಾಗಿ, ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಸಿದ್ದರಾಮಯ್ಯ ಹೆಸರಲ್ಲಿ ಬುಕ್ ಮಾಡಿದ್ದ ಕೋಣೆಯನ್ನು ನೀಡಿಲ್ಲ. ಐವಾನ್ ಇ ಶಾಹಿ ವಸತಿ ಗೃಹದಲ್ಲಿದ್ದ ಕೋಣೆ ರದ್ದುಗೊಳಿಸಿದ್ದಾರೆ. ಅವರಿಗೆ ಸರಕಾರಿ ಕಾರ್ ನೀಡಬೇಕಿತ್ತು. ಅದನ್ನು ಕೂಡಾ ನೀಡದೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಟ್ರಂಪ್ ಆಗಮನದಿಂದ ಭಾರತಕ್ಕೆ ಎಳ್ಳಷ್ಟೂ ಲಾಭವಿಲ್ಲ: ಸಿದ್ದರಾಮಯ್ಯ

ಸಿಎಎ ವಿರೋಧಿ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂಬ ಕಾರಣಕ್ಕೆ ವಸತಿ ಗೃಹ ಮತ್ತು ಕಾರು ನೀಡಲಾಗಿಲ್ಲ. ಯಡಿಯೂರಪ್ಪ ಅವರ ಕುಮ್ಮಕ್ಕಿನಿಂದ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ, ಎಂಎಲ್ ಸಿ ತಿಪ್ಪಣಪ್ಪ ಕಮಕನೂರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ