ಆ್ಯಪ್ನಗರ

ಡಾ.ಪಿ.ಎಸ್‌. ಶಂಕರ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಚಲುವರಾಜು

ಇಲ್ಲಿನ ಡಾ.ಪಿ.ಎಸ್‌. ಶಂಕರ ಪ್ರತಿಷ್ಠಾನವು ಕೊಡ ಮಾಡುವ ಡಾ. ಪಿ. ಎಸ್‌. ಶಂಕರ್‌ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಮೈಸೂರಿನ ಹಿರಿಯ ವೈದ್ಯ ಎಚ್‌.ಎಲ್‌. ಚಲುವರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ನರೇಂದ್ರ ಬಡಶೇಷಿ ತಿಳಿಸಿದ್ದಾರೆ.

Vijaya Karnataka 21 Dec 2019, 10:43 pm
ಕಲಬುರಗಿ:ಇಲ್ಲಿನ ಡಾ.ಪಿ.ಎಸ್‌. ಶಂಕರ ಪ್ರತಿಷ್ಠಾನವು ಕೊಡ ಮಾಡುವ ಡಾ. ಪಿ. ಎಸ್‌. ಶಂಕರ್‌ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಮೈಸೂರಿನ ಹಿರಿಯ ವೈದ್ಯ ಎಚ್‌.ಎಲ್‌. ಚಲುವರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ನರೇಂದ್ರ ಬಡಶೇಷಿ ತಿಳಿಸಿದ್ದಾರೆ.
Vijaya Karnataka Web dr p s shankara wins outstanding physician award chalukraju of mysore
ಡಾ.ಪಿ.ಎಸ್‌. ಶಂಕರ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಚಲುವರಾಜು


2020ರ ಜನವರಿ 1ರಂದು ಕಲಬುರಗಿಯಲ್ಲಿನಡೆಯಲಿರುವ ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವದಲ್ಲಿಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಐದು ಸಾವಿರ ರೂ. ನಗದು ಪುರಸ್ಕಾರ, ಪ್ರಶಸ್ತಿ ಪತ್ರ, ಸನ್ಮಾನ ಒಳಗೊಂಡಿದೆ. ಇದುವರೆಗೆ ಪ್ರತಿಷ್ಠಾನದಿಂದ 30 ಜನ ಲೇಖಕರಿಗೆ ಡಾ.ಪಿ.ಎಸ್‌. ಶಂಕರ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.

ಚಲುವರಾಜು ಅವರ 'ವೈದ್ಯಕೀಯ ಪ್ರಯೋಗಾಲಯ ದರ್ಶನ' ವೆಂಬ ಕೃತಿಗೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಸ್ತುತ ಕೃತಿಯು ಸುಮಾರು 750 ಪುಟಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ವೈದ್ಯಕೀಯ ಪ್ರಯೋಗಾಲಯಕ್ಕೆ ಸಂಬಂಧಿಸಿದಂತೆ ತುಂಬಾ ವಿಸ್ತಾರವಾಗಿ ಬರೆಯಲ್ಪಟ್ಟು ಕನ್ನಡದ ಮೊಟ್ಟ ಮೊದಲನೆಯ ಗ್ರಂಥವೆನ್ನಬಹುದು. ಚಲುವರಾಜು ಅವರ ಬರವಣಿಗೆಯ ಶೈಲಿಯು ತುಂಬ ಸರಳವೂ, ನೇರವೂ ಆಗಿದ್ದು; ನಿರೂಪಣೆಯಲ್ಲಿಸ್ಪಷ್ಟತೆಯು ಎದ್ದು ಕಾಣುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ