ಆ್ಯಪ್ನಗರ

ಚುನಾವಣೆ; ರೌಡಿಗಳ ಪೊಲೀಸ ಪರೇಡ್‌

ಕೊಲೆ, ದರೋಡೆ, ಮಹಿಳೆಯರ ಮೇಲೆ ಹಲ್ಲೆ, ಕಳ್ಳತನ ಸೇರಿದಂತೆ ಇತರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿನ್ನಲೆ ಇರುವ ರೌಡಿಗಳ ಪರೇಡ್‌ಎಸ್ಪಿ ಎನ್‌.ಶಶಿಕುಮಾರ ಸಮ್ಮುಖದಲ್ಲಿ ಇಲ್ಲಿನ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಬುಧವಾರ ನಡೆಯಿತು.

Vijaya Karnataka 5 Apr 2018, 5:16 pm
ಕಲಬುರಗಿ : ಕೊಲೆ, ದರೋಡೆ, ಮಹಿಳೆಯರ ಮೇಲೆ ಹಲ್ಲೆ, ಕಳ್ಳತನ ಸೇರಿದಂತೆ ಇತರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿನ್ನಲೆ ಇರುವ ರೌಡಿಗಳ ಪರೇಡ್‌ಎಸ್ಪಿ ಎನ್‌.ಶಶಿಕುಮಾರ ಸಮ್ಮುಖದಲ್ಲಿ ಇಲ್ಲಿನ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಬುಧವಾರ ನಡೆಯಿತು.
Vijaya Karnataka Web election rowdys police parade
ಚುನಾವಣೆ; ರೌಡಿಗಳ ಪೊಲೀಸ ಪರೇಡ್‌


ಪರೇಡ್‌ನಲ್ಲಿ 300ಕ್ಕೂ ಹೆಚ್ಚು ರೌಡಿಗಳ ಸದ್ಯದ ಚಟಿವಟಿಕೆಗಳನ್ನು ಎಸ್ಪಿ ಶಶಿಕುಮಾರ ವಿಚಾರಿಸಿದರು. ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಸಂದರ್ಭದಲ್ಲಿ ಯಾರಿಗಾದರೂ ಏನಾದರೂ ಮಾಡಿದರೆ ಮತ್ತು ಅಹಿತಕರ ಘಟನೆಗಳು, ಅಪರಾಧಗಳು ನಡೆದರೆ ಎಚ್ಚರಿಕೆ ನಿಮ್ಮನ್ನು ಕಾಯಂ ಜೈನಲ್ಲಿ ಇರುವಂತೆ ಮಾಡ್ತೇನೆ..ಹುಷಾರ್‌..ಹೆಚ್ಚು ಅಲ್ಲಿ ಇಲ್ಲಿ ಕಂಡರೆ, ರಾಜಕಾರಣಿಗಳ ಪರವಾಗಿ ಮತದಾರರ ಮೇಲೆ ಏನಾದರೂ ಪ್ರಭಾವ ಬೀರಿದರೆ.. ನಿಮ್ಮ ಬಾಲ ಕಟ್‌ ಮಾಡ್ತಿನಿ.. ಏನು.. ಏಯ್‌.. ನೆಟ್ಟಗೆ ನಿಲ್ಲು.. ಸೀದಾ ಇದ್ದರೆ ಸುಮ್ಮನಿರ್ತೇನೆ.. ಏನಾದರೂ ಮಾಡಿದ್ರೋ... ಏರೋಪ್ಲೇನ್‌.. ಗೊತ್ತಲ್ಲ.. ಎಂದು ಎಚ್ಚರಿಸಿದರು.

ಈ ವೇಳೆಯಲ್ಲಿ ನಗರದ ಅಶೋಕ ನಗರ, ರೋಜಾ, ಗ್ರಾಮೀಣ, ಆರ್‌ಜಿ ನಗರ, ಸ್ಟೇಷನ್‌ ಬಜಾರ್‌, ಎಂ.ಬಿ.ನಗರ, ಯುನಿವರಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರೌಡಿಗಳು, ಅಪರಾಧಿಕ ಹಿನ್ನಲೆ ಇರುವ ರಾಜಕೀಯ ಪುಡಾರಿಗಳು, ಮಹಾನಗರ ಪಾಲಿಕೆ ಸದಸ್ಯ ಪರೇಡ್‌ನಲ್ಲಿ ಪಾಲ್ಗೊಂಡಿದ್ದರು.

ಪರೇಡ್‌ನಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ, ಎಎಸ್ಪಿ ಲೋಕೇಶ, ಪ್ರೋಬೇಷನರಿ ಅಧಿಕಾರಿಗಳಾದ ಮಿಥುನ್‌, ಸುಮಿತ್‌, ವಿ.ಲಕ್ಷ್ಮಿ ಸೇರಿದಂತೆ ಸಿಪಿಐಗಳು ಹಾಗೂ ಆಯಾ ಪೊಲೀಸ್‌ ಠಾಣೆಯ ಪಿಎಸ್‌ಐಗಳು ಹಾಜರಿದ್ದರು.

ಕಳ್ಳತನ, ಕೊಲೆ ಮಾಡಿ ತಿರುಪತಿಗೆ ಮುಡಿಪು ಕಡ್ತೀರಿ...

ರೋಜಾ ಪೊಲೀಸ್‌ ಠಾಣೆಯ ಅಪರಾಧ ಚಟುವಟಿಕೆಯಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಯೊಬ್ಬನನ್ನು ಗಡ್ಡ.. ತಲೆ ಕೂದಲು ಬಿಡಲು ಕಾರಣ ಏನು ಎಂದು ಶಶಿಕುಮಾರ್‌ ಕೇಳಿದರು. ಆತ.. ''ತಿರುಪತಿ ತಿಮ್ಮಪ್ಪನಿಗೆ ಮುಡಿಪು ಕೊಡುವುದಿತ್ತು,'' ಎಂದಾಗ, ಏಕಾಏಕಿ ಸಿಟ್ಟಿಗೇರಿದ ಎಸ್ಪಿ ಶಶಿಕುಮಾರ.. ಅಲ್ರೋ.. ಕಳ್ಳರು, ದಗಾಕೋರರು, ಕೊಲೆ ಪಾತಕರು ಮಾಡೋದನ್ನು ಮಾಡಿ ದೇವರಿಗೆ ತಲೆ ಕೂದಲು ಕೊಡ್ತಿನಿ.. ಗಡ್ಡ ಕೊಡ್ತೀನಿ ಎಂದರೆ ದೇವರು ಮಾಫಿ ಮಾಡುತ್ತಾನಾ.. ಎಂದು ಆವಾಜ್‌ ಹಾಕಿದರು. ಅಲ್ಲದೆ, ಲಾಠಿಯಿಂದ ಒಂದೆರಡು ಬಾರಿಸಿ.. ಒಳ್ಳೆತನದಿಂದ ಜೀವನ ಮಾಡಿ ಇಲ್ಲದಿದ್ದರೆ ಸುಮ್ಮನೆ ಬಿಡಲ್ಲ ಎಂದರು.

ತಲೆ ಬೋಳಿಸಿದರು.. ಹಿಗ್ಗಾಮುಗ್ಗಾ ಬಾರಿಸಿದ್ರು

ಕೆಲವರು ರೌಡಿಗಳಂತೂ ಸಿನಿಮಾದಲ್ಲಿನ ಖಳನಾಯಕರಂತೆ ಉದ್ದ ತಲೆಗೂದಲು, ಗಡ್ಡ, ಕೈಗಳಲ್ಲಿ ಕಡಗ ಹಾಕಿಕೊಂಡಿರುವುದನ್ನು ಪ್ರಶ್ನಿಸಿದ ಎಸ್ಪಿ, ಅಲ್ರೋ.. ರೌಡಿಸಂ ಮಾಡುತ್ತಿರೀ.. ಇದೆಲ್ಲಾ ಬೇಕಾ ಎಂದು ಪ್ರಶ್ನಿಸಿ ಕೂದಲು ಹಿಡಿದು ಹಿಗ್ಗಾಮುಗ್ಗಾ ಬಾರಿಸಿದರು. ಅಲ್ಲದೆ, ಪೊಲೀಸ್‌ ಸಿಬ್ಬಂದಿಯನ್ನು ಕರೆಸಿ ಕೂದಲು ಕಟ್‌ ಮಾಡಿ ಮತ್ತು ಸೇವಿಂಗ್‌ ಮಾಡುವಂತೆ ಸೂಚನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ