ಆ್ಯಪ್ನಗರ

ಕೆಆರ್‌ಐಡಿಎಲ್‌ ಅಭಿಯಂತರರ ವಿರುದ್ಧ ಮೊಕದ್ದಮೆ

ತಾಲೂಕಿನ ಸಾವಳಗಿ ರೈಲ್ವೆ ಹಳಿ ಹತ್ತಿರ ಮಾದರಸನಹಳ್ಳಿ ಜಿಡಿಎ ಲೇಔಟ್‌ನಲ್ಲಿನಿರ್ಮಾಣಗೊಳ್ಳುತ್ತಿರುವ ಇಂದಿರಾಗಾಂಧಿ ನರ್ಸಿಂಗ್‌ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿ ಕಳಪೆ ಆರೋಪದ ಹಿನ್ನೆಲೆಯಲ್ಲಿಕೆಆರ್‌ಡಿಐಎಲ್‌ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

Vijaya Karnataka 27 Dec 2019, 10:35 pm
ಕಲಬುರಗಿ :ತಾಲೂಕಿನ ಸಾವಳಗಿ ರೈಲ್ವೆ ಹಳಿ ಹತ್ತಿರ ಮಾದರಸನಹಳ್ಳಿ ಜಿಡಿಎ ಲೇಔಟ್‌ನಲ್ಲಿನಿರ್ಮಾಣಗೊಳ್ಳುತ್ತಿರುವ ಇಂದಿರಾಗಾಂಧಿ ನರ್ಸಿಂಗ್‌ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿ ಕಳಪೆ ಆರೋಪದ ಹಿನ್ನೆಲೆಯಲ್ಲಿಕೆಆರ್‌ಡಿಐಎಲ್‌ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
Vijaya Karnataka Web fir against kridl ee
ಕೆಆರ್‌ಐಡಿಎಲ್‌ ಅಭಿಯಂತರರ ವಿರುದ್ಧ ಮೊಕದ್ದಮೆ


ಕೆಆರ್‌ಡಿಐಎಲ್‌ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರ ಎಲ್‌.ಧನ್ಯಕುಮಾರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೆ.ಎಲ್‌.ಪಾಟೀಲ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಿಲ್ಲಾಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ ಸಂಗಾ ನೀಡಿದ ದೂರಿನ ಮೇಲೆ ಮೊಕದ್ದಮೆ ದಾಖಲಾಗಿದೆ.

ಸಂಗಾ ಅವರು ಕಾಮಗಾರಿ ವೀಕ್ಷಣೆ ಮಾಡಲು ಹೋದಾಗ ಕಳಪೆ ಕಾಮಗಾರಿ, ಹಣ ದುರ್ಬಳಕೆ ಕಂಡು ಬಂದಿದ್ದರಿಂದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಭ್ರಷ್ಟ ಎಂಜಿನಿಯರ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಕಾಮಗಾರಿ ಹೆಸರಲ್ಲಿ3.20 ಕೋಟಿ ರೂ. ದುರ್ಬಳಕೆಯಾಗಿದೆ ಎಂದು ದೂರಿನಲ್ಲಿವಿವರಿಸಲಾಗಿದೆ.

ಘಟನೆ ವಿವರ

ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದ್ದು, ಕೂಡಲೇ ಈ ನಿಟ್ಟಿನಲ್ಲಿತನಿಖೆ ಕೈಗೊಂಡು ವರದಿ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಾಜ್ಯ ಕಾರ್ಯದರ್ಶಿಗಳು ಕಲಬುರಗಿ ಪ್ರವಾಸದ ವೇಳೆ ಸೂಚನೆ ನೀಡಿದ್ದರು.

ಬಳಿಕ ಸಂಗಾ ಅವರು ಕಟ್ಟಡ ತಪಾಸಣೆ ಮಾಡಿದರು. ಈ ವೇಳೆ ಕಟ್ಟಡಕ್ಕೆ ಬಳಕೆ ಮಾಡಿರುವ ಸಿಮೆಂಟ್‌ ಸೇರಿದಂತೆ ಇತರೆ ಎಲ್ಲವಸ್ತುಗಳು ಕಳಪೆಯಾಗಿವೆ. ಉತ್ತಮ ಗುಣಮಟ್ಟದ ಕಾಮಗಾರಿ ಆಗಿಲ್ಲಎನ್ನವುದು ಕಂಡು ಬಂದಿತ್ತು.

ಈ ಕುರಿತು ಆಡಿಟ್‌ನಲ್ಲೂ ಪ್ರಸ್ತಾಪಿಸಿ, ಕಳಪೆ ಕಾಮಗಾರಿ, ಕಟ್ಟಡ ಬಿರುಕು ಮತ್ತು ಕ್ಯೂರಿಂಗ್‌ ಆಗದೇ ಇರುವುದರ ಕುರಿತು ವರದಿ ಸಲ್ಲಿಸಲಾಗಿತ್ತು. ಇದೆಲ್ಲವನ್ನು ಆಧಾರವಾಗಿಟ್ಟುಕೊಂಡು ಇಬ್ಬರು ಎಂಜಿನಿಯರ್‌ಗಳ ವಿರುದ್ಧ ಕಲಬುರಗಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲು ಮಾಡಲಾಗಿದೆ.

ಕಳಪೆ ಕಾಮಗಾರಿಗೆ ಶಾಸ್ತಿ
ಹಾಸ್ಟೆಲ್‌ ಕಾಮಗಾರಿ ಕಳಪೆಯಾಗಿರುವುದು ತಪಾಸಣೆ ವೇಳೆ ದೃಢಪಟ್ಟಿದೆ. ಇದು ಅವ್ಯವಹಾರ ನಡೆಸಿರುವುದಕ್ಕೆ ಸ್ಪಷ್ಟ ನಿದರ್ಶನ. ಈ ತಪ್ಪಿಗಾಗಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸೇರಿ ಇಬ್ಬರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗಿದೆ.

-ರಮೇಶ್‌ ಸಂಗಾ, ಜಿಲ್ಲಾಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ