ಆ್ಯಪ್ನಗರ

ಸರಕಾರದ ಕ್ರಮ ಪ್ರಜಾತಂತ್ರ ವಿರೋಧಿ

ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್‌ ಅವರ ಜೀವನ ಸಾಧನೆ ಕುರಿತ ಪಠ್ಯ ತೆಗೆದು ಹಾಕುವ ಸರಕಾರದ ಕ್ರಮ ಪ್ರಜಾತಂತ್ರ ವಿರೋಧಿ ಎಂದು ಜಿಲ್ಲಾಧ್ಯಕ್ಷ ಹಣಮಂತ ಎಸ್‌.ಎಚ್‌ ಬೇಸರ ವ್ಯಕ್ತಪಡಿಸಿದ್ದಾರೆ.

Vijaya Karnataka 1 Nov 2019, 10:04 pm
ಕಲಬುರಗಿ:ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್‌ ಅವರ ಜೀವನ ಸಾಧನೆ ಕುರಿತ ಪಠ್ಯ ತೆಗೆದು ಹಾಕುವ ಸರಕಾರದ ಕ್ರಮ ಪ್ರಜಾತಂತ್ರ ವಿರೋಧಿ ಎಂದು ಜಿಲ್ಲಾಧ್ಯಕ್ಷ ಹಣಮಂತ ಎಸ್‌.ಎಚ್‌ ಬೇಸರ ವ್ಯಕ್ತಪಡಿಸಿದ್ದಾರೆ.
Vijaya Karnataka Web government action is anti democratic
ಸರಕಾರದ ಕ್ರಮ ಪ್ರಜಾತಂತ್ರ ವಿರೋಧಿ


ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನ್‌ ಕುರಿತ ಪಠ್ಯವನ್ನು ಇತಿಹಾಸದ ಪಠ್ಯ ಪುಸ್ತಕದಿಂದ ತೆಗೆದು ಹಾಕುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳಲ್ಲಿಇತಿಹಾಸದ ಕುರಿತಾದ ಜ್ಞಾನ ಬೆಳೆಸಬೇಕಾದ ಜವಾಬ್ದಾರಿ ಮರೆತು ಸರಕಾರವೇ ಜಾತಿ-ಧರ್ಮದ ಹೆಸರಿನಲ್ಲಿಮಕ್ಕಳಲ್ಲಿಇತಿಹಾಸಶೂನ್ಯ ಮನಸ್ಥಿತಿ ರೂಪಿಸಲು ಮುಂದಾಗಿರುವುದು ಖಂಡನೀಯ ಎಂದಿದ್ದಾರೆ.

ಟಿಪ್ಪು ಸುಲ್ತಾನ್‌ ಕುರಿತು ಪಠ್ಯದಲ್ಲಿಬಿಂಬಿಸುವಾಗ ಆತನÜನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಚಿತ್ರಿಸಿಲ್ಲ. ಬ್ರಿಟಿಷರ ವಿರುದ್ಧ ತನ್ನ ರಾಜ್ಯದ ಘನತೆ ಉಳಿಸಿಕೊಳ್ಳಲು ರಾಜಿ ಇಲ್ಲದ ಹೋರಾಟ ಮಾಡಿದ್ದನ್ನು ಮಾತ್ರ ಪಠ್ಯದಲ್ಲಿದಾಖಲಿಸಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್‌ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಲ್ಲಎಂಬುದು ಸರಿಯಲ್ಲ. ಇಷ್ಟಕ್ಕೂ ಬ್ರಿಟಿಷರ ಅಟ್ಟಹಾಸದ ವಿರುದ್ಧ ಸಡ್ಡು ಹೊಡೆದು ತನ್ನ ಸ್ವಂತ ಮಕ್ಕಳನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದನ್ನು ವಿದ್ಯಾರ್ಥಿಗಳು ಇತಿಹಾಸದ ಭಾಗವಾಗಿ ಓದುವುದು ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಎಂದು ಅಧ್ಯಕ್ಷ ಹಣಮಂತ ಮತ್ತು ಜಿಲ್ಲಾಕಾರ್ಯದರ್ಶಿ ಈರಣ್ಣ ಇಸಬಾ ವ್ಯಾಖ್ಯಾನಿಸಿದ್ದಾರೆ.

ಒಂದು ವೇಳೆ ತನ್ನ ಪ್ರಮಾದ ಸರಿಪಡಿಸಿಕೊಂಡು ಟಿಪ್ಪು ಸುಲ್ತಾನ್‌ ಕುರಿತಾದ ಪಾಠವನ್ನು ಪಠ್ಯದಲ್ಲಿಉಳಿಸದೆ ಹೋದರೆ ಎಐಡಿಎಸ್‌ಒ ಮತ್ತು ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ