ಆ್ಯಪ್ನಗರ

ಕಲಬುರಗಿಯಿಂದ ಕಿತ್ತುಕೊಂಡು ಬೀದರ್‌ಗೆ ಕೊಟ್ರು!

ಹೆಸರು ಕಾಳು ಖರೀದಿ ಮಿತಿ ಹೆಚ್ಚಿಸುವಂತೆ ರೈತ ಸಮುದಾಯದಿಂದ ಪ್ರಬಲ ಒತ್ತಾಯ ಕೇಳಿಬರುತ್ತಿರುವ ಮಧ್ಯೆಯೇ ರಾಜ್ಯ ಸರಕಾರ ಹೆಚ್ಚಳ ಮಾಡುವ ಬದಲು ಒಂದು ಜಿಲ್ಲೆಯ ಪ್ರಮಾಣ ಕಮ್ಮಿ ಮಾಡಿ ಇನ್ನೊಂದಕ್ಕೆ ಹಂಚಿಕೆ ಮಾಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

Vijaya Karnataka 10 Oct 2018, 4:22 pm
ಕಲಬುರಗಿ : ಹೆಸರು ಕಾಳು ಖರೀದಿ ಮಿತಿ ಹೆಚ್ಚಿಸುವಂತೆ ರೈತ ಸಮುದಾಯದಿಂದ ಪ್ರಬಲ ಒತ್ತಾಯ ಕೇಳಿಬರುತ್ತಿರುವ ಮಧ್ಯೆಯೇ ರಾಜ್ಯ ಸರಕಾರ ಹೆಚ್ಚಳ ಮಾಡುವ ಬದಲು ಒಂದು ಜಿಲ್ಲೆಯ ಪ್ರಮಾಣ ಕಮ್ಮಿ ಮಾಡಿ ಇನ್ನೊಂದಕ್ಕೆ ಹಂಚಿಕೆ ಮಾಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
Vijaya Karnataka Web governments order for controversy
ಕಲಬುರಗಿಯಿಂದ ಕಿತ್ತುಕೊಂಡು ಬೀದರ್‌ಗೆ ಕೊಟ್ರು!


ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ವಿ. ರತ್ನಮ್ಮ ಪ್ರಕಾರ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಿಗೆ ಹೆಸರು ಕಾಳು ಹೆಚ್ಚುವರಿ ಖರೀದಿಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಗೆ ನಿಗದಿಪಡಿಸಿದ್ದ 23,690 ಕ್ವಿಂಟಾಲ್‌ಗಳಲ್ಲಿ 8,948 ಕ್ವಿಂಟಾಲ್‌ ಅನ್ನು ಮತ್ತು ಬೆಳಗಾವಿ ಜಿಲ್ಲೆಗೆ ನಿಗದಿಪಡಿಸಿರುವ 29,850 ಕ್ವಿಂಟಾಲ್‌ಗಳಲ್ಲಿ 1,052 ಕ್ವಿಂಟಾಲ್‌ ಅನ್ನು ತಾತ್ಕಾಲಿಕವಾಗಿ ಹಿಂಪಡೆದು ಯಾದಗಿರಿ ಜಿಲ್ಲೆಗೆ ಒಟ್ಟು 10 ಸಾವಿರ ಕ್ವಿಂಟಾಲ್‌ ಹೆಚ್ಚುವರಿಯಾಗಿ ಖರೀದಿಸಲು ಅನುಮತಿ ನೀಡಲಾಗಿದೆ.

ಧಾರವಾಡ ಜಿಲ್ಲೆಗೆ ನಿಗದಿಪಡಿಸಿದ 49,930 ಕ್ವಿಂಟಾಲ್‌ ಮತ್ತು ಕಲಬುರಗಿ ಜಿಲ್ಲೆಗೆ ನಿಗದಿಪಡಿಸಿರುವ 47,390 ಕ್ವಿಂಟಾಲ್‌ಗಳಲ್ಲಿ 10 ಸಾವಿರ ಕ್ವಿಂಟಾಲ್‌ ತಾತ್ಕಾಲಿಕವಾಗಿ ಹಿಂಪಡೆದು ಬೀದರ್‌ ಜಿಲ್ಲೆಗೆ ಒಟ್ಟು 20 ಸಾವಿರ ಕ್ವಿಂಟಾಲ್‌ ಹೆಚ್ಚುವರಿಯಾಗಿ ಖರೀದಿಸಲು ಅನುಮತಿ ನೀಡಲಾಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆ ಅಡಿ 23,250 ಮೆಟ್ರಿಕ್‌ ಟನ್‌ ಹೆಸರು ಖರೀದಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್‌ಗೆ 6,975ರಂತೆ ಪ್ರತಿ ರೈತರಿಂದ 4 ಕ್ವಿಂಟಾಲ್‌ ಪ್ರಮಾಣದಲ್ಲಿ ಖರೀದಿಸಲು ಅಕ್ಟೋಬರ್‌ 8ರತನಕ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ