ಆ್ಯಪ್ನಗರ

ಭೀಮಾ ಅಬ್ಬರಕ್ಕೆ ಕಲಬುರಗಿ ತತ್ತರ..! 10ಕ್ಕೂ ಹೆಚ್ಚು ಗ್ರಾಮ ಜಲಾವೃತ , 8 ಸಾವಿರ ಜನರ ಸ್ಥಳಾಂತರ

ಭೀಮಾ ನದಿ ಅಬ್ಬರಕ್ಕೆ ಕಲಬುರಗಿ ಜಿಲ್ಲೆ ನಲುಗಿದ್ದು, ನದಿ ಪಾತ್ರದಲ್ಲಿರುವ 148 ಗ್ರಾಮಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ 8 ಸಾವಿರ ಜನರನ್ನು ಸ್ಥಳಾಂತರಿಸಿಲಾಗಿದ್ದು, 50ಕ್ಕೂ ಹೆಚ್ಚು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

Vijaya Karnataka Web 15 Oct 2020, 6:41 pm
ಕಲಬುರಗಿ: ಜಿಲ್ಲೆಯ ಪ್ರಮುಖ ಭೀಮಾ ನದಿಯಲ್ಲಿ ಪ್ರವಾಹ ಎದುರಾಗಿದೆ. ಈಗಾಗಲೇ ನದಿ ಪಾತ್ರದಲ್ಲಿರುವ ಗ್ರಾಮಗಳ 8 ಸಾವಿರ ಜನರ ರಕ್ಷಣೆ ಮಾಡಿ ಸ್ಥಳಾಂತರಿಸಿ ಅವರಿಗೆ ಕಾಳಜಿ ಕೇಂದ್ರದಲ್ಲಿ ಉಪಚರಿಸಲಾಗುತ್ತಿದೆ. ನೆರೆ ಭೀತಿ ಇರುವ ಗ್ರಾಮಗಳನ್ನು ಕೂಡಲೇ ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಹೇಳಿದ್ದಾರೆ.
Vijaya Karnataka Web heavy rains flood situation in kalaburagi more than 10 villages were flooded
ಭೀಮಾ ಅಬ್ಬರಕ್ಕೆ ಕಲಬುರಗಿ ತತ್ತರ..! 10ಕ್ಕೂ ಹೆಚ್ಚು ಗ್ರಾಮ ಜಲಾವೃತ , 8 ಸಾವಿರ ಜನರ ಸ್ಥಳಾಂತರ


ಪ್ರಮುಖವಾಗಿ ಅಫಜಲಪುರ, ಚಿತ್ತಾಪುರ, ಜೇವರ್ಗಿ ತಾಲೂಕಿನ ಜನರು ನದಿ ಪಾತ್ರಕ್ಕೆ ಹೋಗಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದು, ಪ್ರವಾಹದಲ್ಲಿ ಸಿಲುಕುವ ಜನ, ಜಾನುವಾರು ರಕ್ಷಣೆಗಾಗಿ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ಅವರು ಯುದ್ಧೋಪಾದಿಯಲ್ಲಿ ಈಗಾಗಲೆ 150ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ, ರಕ್ಷಣಕ್ಕೆ ಅಪಾಯ ಇರುವ ಹಲವು ಗ್ರಾಮಗಳನ್ನು ಕೂಡಲೇ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುವುದು. ಜನರು ಸಹಕಾರ ನೀಡಬೇಕು. ಜಿಲ್ಲಾಡಳಿತ ಎಲ್ಲ ರೀತಿಯಿಂದ ಸನ್ನದ್ಧವಾಗಿದ್ದು, ಪ್ರವಾಹ ಭೀತಿ ಎದುರಿಸಲಿದೆ ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಭೀಮಾ ನದಿಗೆ 5.11 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ..! ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಭೀತಿ

ಜಿಲ್ಲೆಯ ಭೀಮಾ ನದಿ ಪಾತ್ರದ 148 ಗ್ರಾಮಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದ ಜಲಾಶಯಗಳಿಂದ 7.50 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡುವ ಸಾಧ್ಯತೆ ಎಂದರು. ಜೇವರ್ಗಿ, ಚಿತ್ತಾಪುರ, ಅಫ್ಜಲ್‌ಪುರ ಹಾಗೂ ಸೇಡಂ ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೊನ್ನಾ ಬ್ಯಾರೇಜಿನಿಂದ 5.11 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿ ತೀರದ ಹಾಗೂ ಹಿನ್ನೀರಿನ ಜನತೆ ಸುರಕ್ಷಿತವಾಗಿರುವ ಎತ್ತರದ ಪ್ರದೇಶಕ್ಕೆ ತೆರಳಲು ಸಲಹೆ ನೀಡಲಾಗಿದೆ.

ಕಲಬುರಗಿ: ಸತತ 10 ಗಂಟೆಗಳಿಂದ ಮಳೆರಾಯನ ಅಬ್ಬರ, ಜನಜೀವನ ಅಸ್ತವ್ಯಸ್ತ; ಹಲವೆಡೆ ಸಂಪರ್ಕ ಕಡಿತ!

ಗ್ರಾಮಗಳು ಜಲಾವೃತ
ಈಗಾಗಲೇ ಕಾಗಿಣಾ, ಬೆಣ್ಣೆತೊರಾ ನೀರಿನಿಂದ ಕಾಳಗಿ ತಾಲೂಕಿನ ಹೆಬ್ಬಾಳ ಮತ್ತು ಹಳೆ ಹೆಬ್ಬಾಳ ನಡುಗಡ್ಡೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ರಾತ್ರಿಯಿಂದ ಇದುವರೆಗೂ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದರಿಂದ ಭೀಮಾ ನದಿ, ಬೋರಿ ಹಳ್ಳ ಅಪಾಯದ ಮಟ್ಟಕ್ಕೆ ತಲುಪಿವೆ.

ಕಲಬುರಗಿ: ಮಹಾ ಮಳೆ, ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ