ಆ್ಯಪ್ನಗರ

ತೊಗರಿ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ರೈತರಿಗೆ ಸಹಾಯಧನ ನೀಡುವ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್‌ ಯೋಜನೆ ಜತೆಯಲ್ಲಿರಾಜ್ಯ ಸರಕಾರದ ಪಾಲು ಸೇರಿದಂತೆ ಈಗಾಗಲೇ ಮೊದಲ ಕಂತಿನ 2 ಸಾವಿರ ರೂ. ರೈತರ ಖಾತೆಗೆ ಜಮಾ ಮಾಡಿದ್ದು, 2ನೇ ಕಂತಿನ ಹಣ ಡಿಸೆಂಬರ್‌ನಲ್ಲಿಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Vijaya Karnataka 24 Nov 2019, 4:21 pm
ಕಲಬುರಗಿ :ಪ್ರಧಾನಿ ನರೇಂದ್ರ ಮೋದಿ ಅವರ ರೈತರಿಗೆ ಸಹಾಯಧನ ನೀಡುವ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್‌ ಯೋಜನೆ ಜತೆಯಲ್ಲಿರಾಜ್ಯ ಸರಕಾರದ ಪಾಲು ಸೇರಿದಂತೆ ಈಗಾಗಲೇ ಮೊದಲ ಕಂತಿನ 2 ಸಾವಿರ ರೂ. ರೈತರ ಖಾತೆಗೆ ಜಮಾ ಮಾಡಿದ್ದು, 2ನೇ ಕಂತಿನ ಹಣ ಡಿಸೆಂಬರ್‌ನಲ್ಲಿಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Vijaya Karnataka Web Yaddi-new3


ತಾಲೂಕಿನ ಶ್ರೀನಿವಾಸ ಸರಡಗಿ ಬಳಿಯಲ್ಲಿನಿರ್ಮಾಣಗೊಂಡಿರುವ ನೂತನ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿ ಸಾರ್ವಜನಿಕ ಸಮಾರಂಭದಲ್ಲಿಅವರು ಮಾತನಾಡಿದರು.

ರಾಜ್ಯದಲ್ಲಿದೊಡ್ಡ ಪ್ರಮಾಣದಲ್ಲಿಪ್ರವಾಹ ಬಂದು ಜನಜೀವನವನ್ನೇ ಅಸ್ತವ್ಯಸ್ತ ಮಾಡಿತ್ತು. ಅದನ್ನು ನಿಭಾಯಿಸುವಲ್ಲಿಇಡೀ ಸರಕಾರ ಕೆಲಸ ಮಾಡುವ ಸಂದರ್ಭದಲ್ಲಿಸ್ವಲ್ಪ ತಡವಾಗಿದೆ. ಪ್ರಧಾನಿ ಆಶಯದಂತೆ ರೈತರಿಗೆ ನಮ್ಮ ಸರಕಾರ ಕೂಡ ಅಗತ್ಯ ನೆರವುಗಳನ್ನು ನೀಡುವ ನಿಟ್ಟಿನಲ್ಲಿ2ನೇ ಕಂತಿನ 2 ಸಾವಿರ ಹಣ ಶೀಘ್ರವೇ ಜಮೆ ಆಗಲಿದೆ ಎಂದರು.

ಇನ್ಮುಂದೆ ತೊಗರಿ ನಾಡು ಜಗತ್ತಿನ ಸಂಪರ್ಕಕ್ಕೆ ನೇರವಾಗಿ ಮುಖಾಮುಖಿ ಆಗುವುದರಿಂದ ಇಲ್ಲಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಅದರಂತೆ ಕೃಷಿ ಕ್ಷೇತ್ರದಲ್ಲೂವಿಕಾಸಕ್ಕೆ ಸಾಕಷ್ಟು ಅವಕಾಶವಿದೆ. ಇದರಿಂದ ಕೃಷಿ ಕ್ಷೇತ್ರದಲ್ಲೂಹೂಡಿಕೆದಾರರು ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿಸರಕಾರವೂ ಅವರನ್ನು ಸೆಳೆಯುವ ಪ್ರಯತ್ನ ಮಾಡಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ