ಆ್ಯಪ್ನಗರ

ಕೇಂದ್ರ ಸರಕಾರದಲ್ಲಿ ಹೈಕಕ್ಕೆ ಮಂತ್ರಿ ಸ್ಥಾನ ಸಿಗಲಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2 ಸರಕಾರದಲ್ಲಿ ನಮ್ಮ ಹೈದ್ರಾಬಾದ ಕರ್ನಾಟಕಕ್ಕೆ ಈಬಾರಿ ಆದರೂ ಪ್ರಮುಖ ಸಚಿವ ಸ್ಥಾನವನ್ನು ನೀಡಬೇಕು ಎಂದು ಹೈಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

Vijaya Karnataka 29 May 2019, 5:00 am
ಕಲಬುರಗಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2 ಸರಕಾರದಲ್ಲಿ ನಮ್ಮ ಹೈದ್ರಾಬಾದ ಕರ್ನಾಟಕಕ್ಕೆ ಈಬಾರಿ ಆದರೂ ಪ್ರಮುಖ ಸಚಿವ ಸ್ಥಾನವನ್ನು ನೀಡಬೇಕು ಎಂದು ಹೈಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
Vijaya Karnataka Web hikaka should be made minister in the central government
ಕೇಂದ್ರ ಸರಕಾರದಲ್ಲಿ ಹೈಕಕ್ಕೆ ಮಂತ್ರಿ ಸ್ಥಾನ ಸಿಗಲಿ


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕೊಪ್ಪಳ, ರಾಯಚೂರು, ಕಲಬುರಗಿ ಮತ್ತು ಬೀದರ್‌, ಬಳ್ಳಾರಿಯಲ್ಲಿ ಎಲ್ಲರೂ ಬಿಜೆಪಿಯ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಎಲ್ಲರೂ ಅನುಭವಸ್ಥರೇ ಇದ್ದಾರೆ. ಖಾತೆಗಳನ್ನು ನಿಭಾಯಿಸುವ ಸಾಮರ್ಥ್ಯ‌ ಅವರಿಗೆ ಇದೆ. ಆದ್ದರಿಂದ ನಾಲ್ವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ನಿರಾಸೆ ಮಾಡಬೇಡಿ

2014ರಿಂದ 2019ರವರೆಗೆ ಹೈಕದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ರಾಷ್ಟ್ರ ಮಟ್ಟದಲ್ಲಿ ಘೋಷಣೆ ಮಾಡಿದ ಯೋಜನೆಗಳ ಗುಣಗಾನ ನಡೆಯಿತೇ ವಿನಃ ಹೊಸ ಯೋಜನೆಗಳು ನಮ್ಮ ಭಾಗಕ್ಕೆ ಬರಲಿಲ್ಲ. ಈ ಹಿಂದೆ ಖರ್ಗೆ ಅವರು ರೈಲ್ವೆ ಮಂತ್ರಿಯಾಗಿದ್ದಾಗ ಘೋಷಣೆ ಮಾಡಿರುವ ಯೋಜನೆಗಳು ಸ್ಥಗಿತಗೊಂಡಿವೆ. ರೈಲ್ವೆ ವಿಭಾಗವಂತೂ ಮೂಗಿನ ಮೇಲಿನ ತುಪ್ಪದಂತಾಗಿದೆ. ಹೊಸ ರೈಲ್ವೆ ಮಾರ್ಗಗಳ ಘೋಷಣೆ ಇಲ್ಲ. ಆದ ಮಾರ್ಗಗಳ ಕೆಲಸ ಪೂರ್ಣಗೊಂಡಿಲ್ಲ. ಹೈಕದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮಾರ್ಗವಾಗಿ ಹೊಸ ರೈಲಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು:

ಹೆಚ್‌ಕೆಆರ್‌ಡಿಬಿಗೆ ವಿಶೇಷ ಪ್ಯಾಕೇಜ್‌ ಕೊಡಬೇಕು, ಕಲಬುರಗಿಯಲ್ಲಿ ಉದ್ಯೋಗ ಸೃಷ್ಟಿ ಮಾಡಲು ನಿಜಾಮ ರಾಜರು ಸ್ಥಾಪನೆ ಮಾಡಿರುವ ಎಂ.ಎಸ್‌.ಕೆ.ಮಿಲ್‌ ಮಾದರಿಯಲ್ಲಿ ಕನಿಷ್ಠ 10ಸಾವಿರ ಜನ ಕೆಲಸ ಮಾಡುವಂತಹ ಬೃಹತ್‌ ಕಾರ್ಖಾನೆಯನ್ನು ಸ್ಥಾಪನೆ ಮಾಡಬೇಕು, ಇಎಸ್‌ಐ ಆಸ್ಪತ್ರೆಗೆ ಏಮ್ಸ್‌ ಎಂದು ಪರಿವರ್ತಿಸಿ ಸಹಸ್ರಾರು ಜನರಿಗೆ ಉದ್ಯೋಗ ಮತ್ತು ಲಕ್ಷಾಂತರ ಜನರಿಗೆ ಆರೋಗ್ಯ ಸೇವೆ ನೀಡಬೇಕು. ಕುಡಿಯುವ ನೀರಿನ ಮೂಲಭೂತ ಸೌಕರ್ಯವನ್ನು ಇನ್ನಷ್ಟು ವಿಸ್ತರಣೆ ಮಾಡಬೇಕು, ಕಲಬುರಗಿಯಲ್ಲಿ ನಿಮ್ಜ್‌ ಸ್ಥಾಪನೆ ಮಾಡಬೇಕು. ಕಲಬುರಗಿಯ 2ನೇ ರಿಂಗ್‌ ರಸ್ತೆ ನಿರ್ಮಾಣ ಕಾಮಗಾರಿ ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮನೀಷ್‌ ಜಾಜು, ಡಾ. ಮಾಜೀದ್‌ ದಾಗಿ, ಶಿವಲಿಂಗಪ್ಪ ಬಂಡಕ, ಅಸ್ಲಂಚಂಗೆ ಇದ್ದರು.

ಹೈಕದ ಪ್ರಮುಖ ಕೇಂದ್ರವಾದ ಕಲಬುರಗಿಯಲ್ಲಿ ಆರಂಭಿಸಲು ಯೋಜಿಸಿರುವ ರೈಲ್ವೆ ವಿಭಾಗೀಯ ಕಚೇರಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂಪೂರ್ಣವಾಗಿ ನೆನಗುದಿಗೆ ಬೀಳುವಂತೆ ಮಾಡಿದರು. ಈಗಲಾದರೂ ಅದಕ್ಕೆ ಕಾಯಕಲ್ಪ ನೀಡಿ. ಈ ಭಾಗದ ಜನರಿಗೆ ಬಹುದಿನಗಳ ಕನಸು ಈಡೇರಿಸಬೇಕು. ಅದಕ್ಕೆ ನಮ್ಮ ನೂತನ ಸಂಸದರು ಕಾಳಜಿ ತೋರಿಸಬೇಕು.

- ಲಕ್ಷ್ಮಣ ದಸ್ತಿ, ಸಂಸ್ಥಾಪಕ, ಹೈಕಜಸಂಸ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ