ಆ್ಯಪ್ನಗರ

ಕಬ್ಬಿನ ಬಾಕಿ ಕೊಡದಿದ್ದರೆ ಕ್ರಿಮಿನಲ್‌ ಕೇಸು

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಜೂನ್‌ ತಿಂಗಳ 15ರೊಳಗೆ ಕಬ್ಬಿನ ಬಾಕಿ ಇರುವ ಹಣವನ್ನು ರೈತರಿಗೆ ಪಾವತಿ ಮಾಡದೆ ಇದ್ದರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್‌ ಕೇಸು ದಾಖಲು ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಎಚ್ಚರಿಕೆ ನೀಡಿದರು.

Vijaya Karnataka 2 Jun 2018, 5:24 pm
ಕಲಬುರಗಿ : ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಜೂನ್‌ ತಿಂಗಳ 15ರೊಳಗೆ ಕಬ್ಬಿನ ಬಾಕಿ ಇರುವ ಹಣವನ್ನು ರೈತರಿಗೆ ಪಾವತಿ ಮಾಡದೆ ಇದ್ದರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್‌ ಕೇಸು ದಾಖಲು ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಎಚ್ಚರಿಕೆ ನೀಡಿದರು.
Vijaya Karnataka Web if sugar can not be dumped then criminal casedc
ಕಬ್ಬಿನ ಬಾಕಿ ಕೊಡದಿದ್ದರೆ ಕ್ರಿಮಿನಲ್‌ ಕೇಸು


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಹಲವಾರು ಬಾರಿ ಕಾರ್ಖಾನೆಗಳಿಗೆ ಸೂಚನೆಗಳನ್ನು ನೀಡಿದರು ರೈತರಿಗೆ ಬಾಕಿ ಹಣವನ್ನು ನೀಡಲು ಕಾರ್ಖಾನೆಗಳು ಮೀನಮೇಷ ಎಣಿಸುತ್ತಿವೆ. ನಿಮ್ಮ ಸಮಸ್ಯೆಗಳು ಏನಿವೆಯೋ ಆದನ್ನು ವ್ಯಾವಹಾರಿಕವಾಗಿ ಬಗೆ ಹರಿಸಿಕೊಳ್ಳಬೇಕು. ಆದರೆ, ರೈತರ ಬಾಕಿ ನೀಡುವಲ್ಲಿ ಕುಂಟು ನೆಪಗಳನ್ನು ಹೇಳುವುದು ಬೇಡ ಎಂದು ಎಚ್ಚರಿಕೆ ನೀಡಿದರು.

ಕಬ್ಬು ಪೂರೈಕೆ ಮಾಡಿ 4-5 ತಿಂಗಳು ಕಳೆದಿವೆ. ಇನ್ನೂ ಬಾಕಿ ನೀಡಿದೆ ಇದ್ದರೆ ರೈತರ ಗತಿ ಏನು? ಅವರ ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ಈಗ ಮುಂಗಾರು ಆರಂಭವಾಗುತ್ತಿದೆ. ಬಿತ್ತನೆಗೂ ಅವರಿಗೆ ಹಣ ಬೇಕಾಗುತ್ತದೆ. ಇದನ್ನು ಕಾರ್ಖಾನೆಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ರೈತರ ಪರವಾಗಿ ಕಲಬುರಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ್‌ ರಾಜಾಪುರ ಮಾತನಾಡಿ, ಕಬ್ಬು ಪೂರೈಕೆ ಮಾಡಿ 5 ತಿಂಗಳು ಗತಿಸಿವೆ. ರೈತರ ಕುಟುಂಬಗಳಲ್ಲಿ ಭಾರಿ ಸಂಕಷ್ಟಗಳು ಎದುರಾಗಿವೆ. ಜೂನ್‌ ತಿಂಗಳಾದ್ದರಿಂದ ಕಾಲೇಜು, ಶಾಲೆಗಳು ಪುನರಾಂಭಗೊಂಡಿವೆ. ಈಗ ಶೈಕ್ಷಣಿಕ ಖರ್ಚುಗಳು ಸೇರಿದಂತೆ ಇತರೆ ಖರ್ಚುಗಳಿಗೆ ತೊಂದರೆ ಎದುರಾಗಿದೆ. ಆದ್ದರಿಂದ ಕಾರ್ಖಾನೆಗಳು ತಕ್ಷಣ ಬಾಕಿ ಪಾವತಿ ಮಾಡುವಂತೆ ಆಗ್ರಹಿಸಿದರು.

ಕಳೆದ ಮೂರು ತಿಂಗಳಿಂದ ಕಾರ್ಖಾನೆ ಹಾಗೂ ರೈತರ ಸಭೆ ಕರೆಯುವಂತೆ ಕೇಳಿಕೊಂಡರೂ ಸಾಧ್ಯವಾಗಿರಲಿಲ್ಲ. ಈಗ ಸಭೆ ನಡೆಯುತ್ತಿದೆ. ಕಾರ್ಖಾನೆಗಳು ಬಾಕಿ ಹಣವನ್ನು ಕೂಡಲೇ ಪಾವತಿ ಮಾಡಬೇಕು ಎಂದ ಅವರು, ಕಾರ್ಖಾನೆಗಳು ಬಾಕಿ ಹಣವನ್ನು ಕಂತುಗಳಲ್ಲಿ ನೀಡುವುದು ಸರಿಯಲ್ಲ. ಮೊದಲು 1500 ರೂ. ನಂತರ ಉಳಿದ ಹಣವನ್ನು ಹಾಕುವ ಕಾರ್ಖಾನೆಗಳ ನಿರ್ಧಾರ ವಿರೋಧಿಸಿದರು.

ಸಭೆಯಲ್ಲಿ ರೇಣುಕಾ ಶುಗರ್ಸ್‌, ಉಗಾರ್‌ ಶುಗರ್ಸ್‌, ಎನ್‌ಎಸ್‌ಎನ್‌ಎಲ್‌ ಶುಗರ್ಸ್‌, ಕೋರ್‌ ಗ್ರೀನ್‌ ಶುಗರ್ಸ್‌ ಕಾರ್ಖಾನೆಗಳ ಪ್ರತಿನಿಧಿಗಳು ಆಗಮಿಸಿದ್ದರು. ಸಭೆಯಲ್ಲಿ ಕಲ್ಲೂರ್‌ ಬ್ಯಾರೇಜ್‌ನಿಂದ ನೀರು ಬಿಡುವ ಕುರಿತು ಚರ್ಚಿಸಲಾಯಿತು. ರೈತರ ಸಾಲ ಮನ್ನಾ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರ ಬ್ಯಾಂಕುಗಳಿಗೆ ಅನ್ವಯ ಆಗುವ ಎಲ್ಲ ಸವಲತ್ತುಗಳನ್ನು ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌ ಮತ್ತು ಐಸಿಐಸಿಐ ಬ್ಯಾಂಕುಗಳಿಗೂ ಅನ್ವಯ ಆಗುವಂತೆ ಮಾಡಬೇಕು ಎಂದು ರೈತರು ಮನವಿ ಸಲ್ಲಿಸಿದರು.

ಸಭೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ದತ್ತಾತ್ರೇಯ ಕುಲಕರ್ಣಿ, ಶರಣಕುಮಾರ ಬಿಲ್ಲಾಡ, ರಮೇಶ ಹೂಗಾರ, ನಾಗೇಂದ್ರರಾವ್‌ ದೇಶಮುಖ, ಶಾಂತವೀರಪ್ಪಾ ಕಲಬುರಗಿ, ಶಾಂತವೀರ ಪಾಟೀಲ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ