Please enable javascript.Kalaburagi,ಕಲಬುರಗಿ ಪಾಲಿಕೆ ಚುನಾವಣೆ: ಮತದಾರನ ಅತಂತ್ರ ತೀರ್ಪಿನಿಂದಾಗಿ ಜೆಡಿಎಸ್ ಕಿಂಗ್ ಮೇಕರ್..! - kalaburagi corporation election: jds become king maker because of congress and bjp not reached magic number - Vijay Karnataka

ಕಲಬುರಗಿ ಪಾಲಿಕೆ ಚುನಾವಣೆ: ಮತದಾರನ ಅತಂತ್ರ ತೀರ್ಪಿನಿಂದಾಗಿ ಜೆಡಿಎಸ್ ಕಿಂಗ್ ಮೇಕರ್..!

Vijaya Karnataka Web 6 Sep 2021, 4:30 pm
Subscribe

​​ಈ ಬಾರಿ ಪಾಲಿಕೆ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನವು ಒಬಿಸಿಗೆ ನಿಗದಿಯಾಗಿದೆ. ಈ ಅರ್ಹತೆ ಇರುವ ಅಭ್ಯರ್ಥಿಗಳು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಲ್ಲಿ ಇದ್ದಾರೆ.

ಹೈಲೈಟ್ಸ್‌:

  • ಕಾಂಗ್ರೆಸ್ ಭದ್ರ ಕೋಟೆ ಕಲಬುರಗಿಯಲ್ಲಿ ಕಮಲದ ಕಮಾಲ್
  • ಆದ್ರೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಿಗದ ಸ್ಪಷ್ಟ ಬಹುಮತ
  • ಜೆಡಿಎಸ್ ಪಕ್ಷದ ಒಲವು ಯಾರ ಕಡೆಗೆ ಅನ್ನೋದೇ ಸಸ್ಪೆನ್ಸ್..
kalaburagi
ಕಲಬುರಗಿ ಪಾಲಿಕೆ ಚುನಾವಣೆ: ಮತದಾರನ ಅತಂತ್ರ ತೀರ್ಪಿನಿಂದಾಗಿ ಜೆಡಿಎಸ್ ಕಿಂಗ್ ಮೇಕರ್..!
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕಾಂಗ್ರೆಸ್ ಭದ್ರಕೊಟೆಯನ್ನು ಒಡೆದಿದೆ. ಬಿರುಸಿನ ಪೈಪೋಟಿ ನೀಡುವಲ್ಲಿ ಕಮಲ ಪಾಳಯ ಯಶಸ್ವಿಯಾಗಿದೆ. ಆದರೆ, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
55 ವಾರ್ಡ್‌ ಗಳ ಬಲ ಹೊಂದಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ, ಕಾಂಗ್ರೆಸ್ ಪಕ್ಷದ 27 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಬಿಜೆಪಿ 23 ಸ್ಥಾನಗಳಲ್ಲಿ ವಿಜಯದ ಪತಾಕೆ ಹಾರಿಸಿದೆ. ಒಟ್ಟು 55 ಸದಸ್ಯ ಬಲದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಯಾವುದೇ ಒಂದು ಪಕ್ಷ 28 ಸದಸ್ಯ ಬಲ ಹೊಂದಿರಬೇಕು. ಆದ್ರೆ, ಈ ಮ್ಯಾಜಿಕ್ ನಂಬರ್ ತಲುಪುವಲ್ಲಿ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್‌ಗೆ 1 ಸದಸ್ಯಬಲದ ಕೊರತೆ ಇದೆ.

ಸ್ವಂತ ಬಲದಿಂದ ಕಾಂಗ್ರೆಸ್ ಅಥವಾ ಬಿಜೆಪಿ ಮಹಾನಗರ ಪಾಲಿಕೆ ಮೇಯರ್ ಗದ್ದುಗೆ ಹಿಡಿಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ, 4 ಸ್ಥಾನ ಪಡೆದಿರುವ ಜೆಡಿಎಸ್ ಪಕ್ಷವು ಕಿಂಗ್ ಮೇಕರ್ ಆಗಲಿದೆ.

ಈ ಬಾರಿ ಪಾಲಿಕೆ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನವು ಒಬಿಸಿಗೆ ನಿಗದಿಯಾಗಿದೆ. ಈ ಅರ್ಹತೆ ಇರುವ ಅಭ್ಯರ್ಥಿಗಳು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಲ್ಲಿ ಇದ್ದಾರೆ. ಹೀಗಾಗಿ, ಅಧಿಕಾರದ ಗದ್ದುಗೆ ಹಿಡಿಯಲು ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಜಂಗಿಕುಸ್ತಿ ನಡೆಯುವುದು ಬಹುತೇಕ ಖಚಿತವಾಗಿದೆ.

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: ಮತದಾನಕ್ಕೆ ಶುರುವಾಗಿದೆ ಕ್ಷಣಗಣನೆ..!
23 ಸದಸ್ಯ ಬಲ ಹೊಂದಿರುವ ಬಿಜೆಪಿ ಪಕ್ಷವು ಜೆಡಿಎಸ್‌ನ 4 ಹಾಗೂ ಒಂದು ಎಂಪಿ, ಮೂವರು ಎಂ. ಎಲ್. ಎ ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರ ಬಲದೊಂದಿಗೆ ಅಧಿಕಾರ ರಚನೆಗೆ ಕಸರತ್ತು ನಡೆಸಲಿದೆ. ಒಂದು ವೇಳೆ ಜೆಡಿಎಸ್ ತನ್ನ ನಾಲ್ಕು ಸದಸ್ಯ ಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ರೆ, ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲ 31 ಏರಿಕೆ ಆಗುತ್ತದೆ. ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ರಚನೆ ಮಾಡಲಿದೆ. ಆದ್ರೆ ಜೆಡಿಎಸ್ ಬೆಂಬಲ ಯಾರಿಗೆ ಸಿಗಲಿದೆ ಎಂದು ಕಾದು ನೋಡಬೇಕಿದೆ.

ಸದ್ಯಕ್ಕೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲವಾದ್ದರಿಂದ, ಜೆಡಿಎಸ್ ನಡೆ ಬಹು ಪ್ರಮುಖ್ಯತೆ ಪಡೆಯಲಿದೆ. ಇನ್ನು ಕಳೆದ 40 ವರ್ಷಗಳಿಂದ ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆಯನ್ನು ಕಾಂಗ್ರೆಸ್ ಅಲಂಕರಿಸಿತ್ತು. ಈ ನಡುವೆ ಒಮ್ಮೆ ಮಾತ್ರ ಕಾಂಗ್ರೆಸ್‌ ಪಕ್ಷದ ಆಂತರಿಕ ಕಲಹದ ಲಾಭ ಪಡೆದು ಬಿಜೆಪಿ ಮೇಯರ್ ಗದ್ದುಗೆ ಹಿಡಿದಿತ್ತು.

ಕೈ, ಕಮಲ ಓಟಕ್ಕೆ ದಳ, ಎಂಐಎಂ ಅಡ್ಡಿ: ತೊಗರಿ ಕಣಜ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ!
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ದಿವಂಗತ ಖಮರುಲ್ ಇಸ್ಲಾಂ ಹಾಗೂ ಮಾಜಿ ಸಿಎಂ ಧರ್ಮಸಿಂಗ್ ಮಹತ್ವದ ಪಾತ್ರ ವಹಿಸುತ್ತಿದ್ದರು‌. ಈ ಇಬ್ಬರೂ ನಾಯಕರ ನಿಧನದಿಂದ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪ್ರಥಮ ಬಾರಿಗೆ ಪಾಲಿಕೆ ಚುನಾವಣೆ ಎದುರಿಸಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.

ಈ ಬಾರಿ ಬಿಜೆಪಿ ನಾಯಕ ರವಿ ಕುಮಾರ್ ಅವರ ರಾಜಕೀಯ ರಣತಂತ್ರ ಮತ್ತೆ ವರ್ಕೌಟ್ ಆಗಿದೆ. ಸದ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, ಜೆಡಿಎಸ್ ನಿರ್ಣಾಯಕ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಯಾವ ಪಕ್ಷದ ನಡೆ ಯಾವ ಕಡೆಗೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ