ಆ್ಯಪ್ನಗರ

'ಡಿಸಿಎಂ ಹುದ್ದೆ ತೆಗೆಯಲ್ಲ, ಬಿಎಸ್‌ವೈ ಪವರ್ ಕಮ್ಮಿ ಆಗಲ್ಲ'! ಶೀಘ್ರದಲ್ಲೇ ಸಂಪುಟ ವಿಸ್ತರಣೆ ಎಂದ ಕಾರಜೋಳ

'ಶಾಸಕರು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗದೆ ಇದ್ದ ಕಾರಣ ಜೆಡಿಎಸ್‌-ಕಾಂಗ್ರೆಸ್‌ ಸರಕಾರ ಬಿದ್ದು ಹೋಗಿದೆ. ಶಾಸಕರ ಸಮಸ್ಯೆಗೆ ಸ್ಪಂದಿಸದೆ ಇದ್ದ ಕಾರಣ 17 ಶಾಸಕರು ರಾಜೀನಾಮೆ ನೀಡಿದ್ದರು' - ಡಿಸಿಎಂ ಕಾರಜೋಳ

Vijaya Karnataka Web 12 Dec 2019, 8:26 pm
ಕಲಬುರಗಿ: ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿಯೇ ಪಕ್ಷದ ವರಿಷ್ಠರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರ ಮಟ್ಟದ ಮುಖಂಡರೊಂದಿಗೆ ಚರ್ಚೆ ಬಳಿಕ ಎಲ್ಲವೂ ಅಂತಿಮವಾಗಲಿದೆ ಎಂದರು.
Vijaya Karnataka Web ಡಿಸಿಎಂ ಹುದ್ದೆ ತೆಗೆಯಲ್ಲ, ಬಿಎಸ್‌ವೈ ಪವರ್ ಕಮ್ಮಿ ಆಗಲ್ಲ! ಶೀಘ್ರದಲ್ಲೇ ಸಂಪುಟ ವಿಸ್ತರಣೆ ಎಂದ ಕಾರಜೋಳ


ಯಡಿಯೂರಪ್ಪ ಅವರನ್ನು ಪಕ್ಷದ ವರಿಷ್ಠರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ವಿರೋಧ ಪಕ್ಷದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದ ಕಾರಜೋಳ, ಅನರ್ಹ ಶಾಸಕರ ವಿರುದ್ಧ ಚುನಾವಣೆಯಲ್ಲಿ ಆರೋಪ ಮಾಡುತ್ತಿದ್ದ ವಿರೋಧ ಪಕ್ಷಗಳನ್ನು ಜನರೇ ಅನರ್ಹ ಮಾಡಿದ್ದಾರೆ ಎಂದು ಟಾಂಗ್‌ ನೀಡಿದರು.

ಮೂವರು ಡಿಸಿಎಂಗಳ ಹುದ್ದೆ ತೆಗೆಯಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ ಎಂದರು. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಗಮನಿಸಲಾಗಿದೆ ಎಂದ ಡಿಸಿಎಂ ಕಾರಜೋಳ, ನನಗೆ ಡಿಸಿಎಂ ಹುದ್ದೆ ಕೊಡುತ್ತಾರೆಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ ಎಂದರು.

'ದತ್ತಪೀಠ ವಿವಾದ ಪರಿಹಾರಕ್ಕೆ ಸಂಧಾನಕ್ಕೂ ಸಿದ್ಧ, ಹೋರಾಟಕ್ಕೂ ಬದ್ಧ'! ಸಿದ್ದುಗೆ ಗುದ್ದು ಕೊಟ್ಟ ಸಿಟಿ ರವಿ

ಶಾಸಕರು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗದೆ ಇದ್ದ ಕಾರಣ ಜೆಡಿಎಸ್‌-ಕಾಂಗ್ರೆಸ್‌ ಸರಕಾರ ಬಿದ್ದು ಹೋಗಿದೆ. ಶಾಸಕರ ಸಮಸ್ಯೆಗೆ ಸ್ಪಂದಿಸದೆ ಇದ್ದ ಕಾರಣ 17 ಶಾಸಕರು ರಾಜೀನಾಮೆ ನೀಡಿದ್ದರು. ಉಪ ಚುನಾವಣೆ ಯಾರಿಗೂ ಬೇಕಿರಲಿಲ್ಲ. ಇದಕ್ಕೆ ಹಿಂದಿನ ಸರಕಾರವೇ ಹೊಣೆ ಎಂದು ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ವಿಡಿಯೋ: ಸಿಎಂ ಜೊತೆ ಆಸ್ಪತ್ರೆಗೆ ಹೋದಾಗಲೂ ಸಿದ್ದು ಕಾಲೆಳೆದ ಈಶ್ವರಪ್ಪ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ