ಆ್ಯಪ್ನಗರ

ಗುಜರಾತ್‌ನಲ್ಲಿ ಬಿಜೆಪಿ ಗೆದ್ಧಿಲ್ಲ, ಕಾಂಗ್ರೆಸ್‌ ಸೋತಿಲ್ಲ: ಖರ್ಗೆ

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿಲ್ಲ, ಕಾಂಗ್ರೆಸ್ ಸೋತಿಲ್ಲ ಹೀಗಾಗಿ ಮುಂದೆ ಬರಲಿರುವ ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ಚುನಾವಣೆ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Vijaya Karnataka Web 23 Dec 2017, 5:08 pm
ಕಲಬುರಗಿ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿಲ್ಲ, ಕಾಂಗ್ರೆಸ್ ಸೋತಿಲ್ಲ ಹೀಗಾಗಿ ಮುಂದೆ ಬರಲಿರುವ ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ಚುನಾವಣೆ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Vijaya Karnataka Web kharge spoke about gujarat election
ಗುಜರಾತ್‌ನಲ್ಲಿ ಬಿಜೆಪಿ ಗೆದ್ಧಿಲ್ಲ, ಕಾಂಗ್ರೆಸ್‌ ಸೋತಿಲ್ಲ: ಖರ್ಗೆ


ಕಲಬುರಗಿಯಲ್ಲಿ ಶನಿವಾರ ಮಾತನಾಡಿದ ಖರ್ಗೆ, ಗುಜರಾತ್‌ ಚುನಾವಣೆಯಲ್ಲಿ ನಾವು ಕೇವಲ ಹದಿನೈದು ಸ್ಥಾನಗಳಲ್ಲಿ ಕೆಲವೇ ಮತಗಳಿಂದ ಸೋತಿದ್ದೇವೆ ಹೀಗಾಗಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿಲ್ಲ, ಕಾಂಗ್ರೆಸ್ ಸೋತಿಲ್ಲ ಎಂದು ಖರ್ಗೆ ನುಡಿದಿದ್ದಾರೆ.

ಓರ್ವ ಪ್ರಧಾನಿಯಾಗಿ ಮೋದಿ 35 ದಿನ ಗುಜರಾತ್‌ನಲ್ಲಿ ಠಿಕಾಣಿ ಹೂಡಿದ್ದಾರೆ, ಬಿಜೆಪಿ ಆಡಳಿತವಿರುವ ಸಿಎಂಗಳು‌, ಸಚಿವರುಗಳು ಶ್ರಮಿಸಿದ್ದಾರೆ. ಆದರೆ ಕಾಂಗ್ರೆಸ್ ಮುಕ್ತ ಮಾಡಲು ಯಾರಿಂದಲು ಸಾಧ್ಯವಿಲ್ಲ. ಕೈ ವಿರುದ್ದ ನರೇಂದ್ರ ಮೋದಿ ಸಿಕ್ಕಾಪಟ್ಟೆ ಅಪಪ್ರಚಾರ ಮಾಡಿದ್ದಾರೆ. ಗುಜರಾತ್‌ನಲ್ಲೆ ಕೈ ಮುಕ್ತ ಮಾಡೋಕೆ ಇವರಿಗೆ ಆಗಲ್ಲ ಎಂದು ಖರ್ಗೆ ಹೇಳಿದರು.

ಇದೇ ವೇಳೆ ಇವಿಎಮ್ ಬಳಕೆಗೆ ವಿರೋಧ ವ್ಯಕ್ತ ಪಡಿಸಿದ ಖರ್ಗೆ, ಇವಿಎಮ್ ಬಳಸುವುದರಿಂದ ತಂತ್ರಜ್ಞಾನದಲ್ಲಿ ನಾವೇ‌ ಶ್ರೇಷ್ಠ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಅಮೇರಿಕ ಸೇರಿದಂತೆ ಅನೇಕ ದೇಶಗಳು ಬ್ಯಾಲೆಟ್ ಪೇಪರ್ ಬಳಸುತ್ತಿವೆ. ಪಾರದರ್ಶಕತೆ‌ ಚುನಾವಣೆ ನಡೆಸಲು ನಮ್ಮಲ್ಲಿ ಬ್ಯಾಲೆಟ್ ಪೇಪರ್ ಬಳಸಬೇಕು. ಇವಿಎಮ್ ಚಿಪ್ ಆಳವಡಿಕೆಯಲ್ಲಿ ಅಪನಂಬಿಕೆಗಳು ಹುಟ್ಟಿಕೊಂಡಿವೆ. ಅನುಮಾನ ದೂರವಾಗಬೇಕಾದರೆ ಇವಿಎಂ ಯಂತ್ರ ಪರಿಶೀಲನೆ ಅಗತ್ಯವಿದೆ ಎಂದು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ