ಆ್ಯಪ್ನಗರ

ಪಡಿತರ ಅಕ್ಕಿ ಕಳ್ಳ ದಾಸ್ತಾನು ಪತ್ತೆ

ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿರುವ ಎರಡು ಗೋದಾಮುಗಳಲ್ಲಿಪಡಿತರ ವ್ಯವಸ್ಥೆಯಲ್ಲಿಹಂಚಲಾಗುವ ನೂರಾರು ಅಕ್ಕಿ ತುಂಬಿದ ಚೀಲಗಳು ಶನಿವಾರ ಪತ್ತೆಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ನಡೆಸಿದ ಕಾರ್ಯಾಚರಣೆಯಲ್ಲಿಈ ಅಕ್ರಮ ಬಯಲಾಗಿದೆ

Vijaya Karnataka 10 May 2020, 9:04 pm
ಕಲಬುರಗಿ:ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿರುವ ಎರಡು ಗೋದಾಮುಗಳಲ್ಲಿಪಡಿತರ ವ್ಯವಸ್ಥೆಯಲ್ಲಿಹಂಚಲಾಗುವ ನೂರಾರು ಅಕ್ಕಿ ತುಂಬಿದ ಚೀಲಗಳು ಶನಿವಾರ ಪತ್ತೆಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ನಡೆಸಿದ ಕಾರ್ಯಾಚರಣೆಯಲ್ಲಿಈ ಅಕ್ರಮ ಬಯಲಾಗಿದೆ.
Vijaya Karnataka Web located ration rice thief
ಪಡಿತರ ಅಕ್ಕಿ ಕಳ್ಳ ದಾಸ್ತಾನು ಪತ್ತೆ


ಶನಿವಾರ ಮಧ್ಯಾಹ್ನದ ಹೊತ್ತಿಗೆ ಎಪಿಎಂಸಿ ಯಾರ್ಡ್‌ನಲ್ಲಿರುವ ಹತ್ತಿ ಗೋದಾಮು ಮತ್ತು ರಸಗೊಬ್ಬರ ಚೀಲಗಳನ್ನು ತುಂಬಿಡುವ ಗೋದಾಮಿನಲ್ಲಿನೂರಾರು ಅಕ್ಕಿ ಚೀಲಗಳನ್ನು ಬಚ್ಚಿಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಈ ಮಾಹಿತಿ ಬೆನ್ನು ಹತ್ತಿ ಹೋದ ಉಪ ನಿರ್ದೇಶಕ (ಪ್ರಭಾರ) ಡಿ.ಎಂ.ಪಾಣಿ ಹಾಗೂ ಅಧಿಕಾರಿಗಳ ತಂಡ ಎಪಿಎಂಸಿ ಅಧಿಕಾರಿ ಕೃಷ್ಣಾ ಅವರ ಸಮ್ಮುಖದಲ್ಲಿಗೋದಾಮುಗಳ ಶಟರ್‌ ತೆರೆಸಿ ನೋಡಿದಾಗ ಕಾಳಸಂತೆಯಲ್ಲಿಮಾರಾಟ ಮಾಡಲು ಅಕ್ಕಿ ಬಚ್ಚಿಟ್ಟಿರುವುದು ಗಮನಕ್ಕೆ ಬಂದಿದೆ. ಇಷ್ಟಕ್ಕೂ ಹೀಗೆ ಪಡಿತರ ವ್ಯವಸ್ಥೆ ಅಕ್ಕಿಯನ್ನು ಮುಚ್ಚಿಟ್ಟ ವ್ಯಕ್ತಿ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ