ಆ್ಯಪ್ನಗರ

ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ತಾಯಿ ಮಗು ಸಾವು! ಕುಟುಂಬಸ್ಥರಿಂದ ಪ್ರತಿಭಟನೆ

ಗುರುವಾರ ತಡ ರಾತ್ರಿ ಹನ್ನೊಂದು ಗಂಟೆಯ ಹೊತ್ತಿನಲ್ಲಿ ಕನ್ಯಾಕುಮಾರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ತುಂಬಾ ಗಂಭೀರ ಸ್ಥಿತಿಯಲ್ಲಿ ನೋವು ಕಾಣಿಸಿಕೊಂಡಿದ್ದು ಪರೀಕ್ಷೆ ಮಾಡಿದಾಗ ಗರ್ಭದಲ್ಲಿಯೇ ಮಗು ಸತ್ತಿರುವುದು (ಎಕ್ಲಾಂಸ್ಸಿಯಾ) ಪತ್ತೆಯಾಯಿತು. ಸರ್ಜರಿ ಮೂಲಕ ಗರ್ಭದಲ್ಲಿರುವ ಮಗುವನ್ನು ಹೊರತೆಗೆದ ಬಳಿಕ ಹೆಚ್ಚು ರಕ್ತ ಸ್ರಾವ ಆಗಿ ಅಲ್ಲದೆ ಹೃದಯ ಸ್ತಂಭನಕ್ಕೊಳಗಾಗಿ (ಎಂಬಾಲಿಸಮ್) ತಾಯಿ ಕನ್ಯಾಕುಮಾರಿ ಕೂಡ ಸಾವನ್ನಪ್ಪಿದ್ದಾಳೆ ಎಂದು ಜಿಮ್ಸ್ ಮೂಲಗಳು ತಿಳಿಸಿವೆ.

Vijaya Karnataka Web 25 Sep 2021, 11:05 am
ಕಲಬುರಗಿ: ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಕ್ಲಿಷ್ಟತೆ ಉಂಟಾಗಿ ಮಗು ಮತ್ತು ತಾಯಿಯ ಸಾವು ಸಂಭವಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
Vijaya Karnataka Web pregnant
Representative image


ಮೃತಪಟ್ಟ ತಾಯಿಯನ್ನು ಕಲಬುರ್ಗಿ ತಾಲೂಕಿನ ಎಸ್ ಪಟ್ಟಣ ಗ್ರಾಮದ ಕನ್ಯಾಕುಮಾರಿ ಹಾಗೂ ಆಕೆಯ ನವಜಾತ ಶಿಶು ಸಾವನ್ನಪ್ಪಿದೆ ಎಂದು ಜಿಮ್ಸ್ ಮೂಲಗಳು ಖಾತ್ರಿಪಡಿಸಿವೆ. ಗುರುವಾರ ತಡ ರಾತ್ರಿ ಹನ್ನೊಂದು ಗಂಟೆಯ ಹೊತ್ತಿನಲ್ಲಿ ಕನ್ಯಾಕುಮಾರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ತುಂಬಾ ಗಂಭೀರ ಸ್ಥಿತಿಯಲ್ಲಿ ನೋವು ಕಾಣಿಸಿಕೊಂಡಿದ್ದು ಪರೀಕ್ಷೆ ಮಾಡಿದಾಗ ಗರ್ಭದಲ್ಲಿಯೇ ಮಗು ಸತ್ತಿರುವುದು (ಎಕ್ಲಾಂಸ್ಸಿಯಾ) ಪತ್ತೆಯಾಯಿತು. ಸರ್ಜರಿ ಮೂಲಕ ಗರ್ಭದಲ್ಲಿರುವ ಮಗುವನ್ನು ಹೊರತೆಗೆದ ಬಳಿಕ ಹೆಚ್ಚು ರಕ್ತ ಸ್ರಾವ ಆಗಿ ಅಲ್ಲದೆ ಹೃದಯ ಸ್ತಂಭನಕ್ಕೊಳಗಾಗಿ (ಎಂಬಾಲಿಸಮ್) ತಾಯಿ ಕನ್ಯಾಕುಮಾರಿ ಕೂಡ ಸಾವನ್ನಪ್ಪಿದ್ದಾಳೆ ಎಂದು ಜಿಮ್ಸ್ ಮೂಲಗಳು ತಿಳಿಸಿವೆ.
ಕುಣಿಗಲ್‌ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ: ಆಸ್ಪತ್ರೆ ಪೀಠೋಪಕರಣ ಧ್ವಂಸ
ವೈದ್ಯರ ನಿರ್ಲಕ್ಷ್ಯ
ಆದರೆ ಕನ್ಯಾಕುಮಾರಿಯ ಕುಟುಂಬ ಸದಸ್ಯರು ವೈದ್ಯರು ಹಾಗೂ ನರ್ಸ್‌ಗಳ ನಿರ್ಲಕ್ಷ್ಯದಿಂದಾಗಿ ತಾಯಿ ಮತ್ತು ಮಗು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ. ರಾತ್ರಿ 9.30 ಕ್ಕೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣ ಪಟ್ಟಣ ಗ್ರಾಮದಿಂದ ಜಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಕನ್ಯಾಕುಮಾರಿಯನ್ನು ತಂದು ದಾಖಲು ಮಾಡಿದ್ದೇವೆ. ಈ ವೇಳೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ತಪಾಸಣೆ ಮಾಡಲಿಲ್ಲ ಮತ್ತು ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ ಗರ್ಭದಲ್ಲೇ ಮಗು ತೀರಿಕೊಂಡಿದೆ ಎಂದು ತಿಳಿಸಿದರು. ಹೆರಿಗೆಯ ಬಳಿಕವೂ ಸಮರ್ಪಕ ಚಿಕಿತ್ಸೆ ನೀಡಲಾಗಿಲ್ಲ. ನರ್ಸ್ ನೀಡಿದ ಮಾತ್ರೆಯ ಪರಿಣಾಮದಿಂದಾಗಿ ಕನ್ಯಾಕುಮಾರಿ ಸಾವನ್ನಪ್ಪಿದ್ದಾಳೆ ಎಂದು ದೂರಿ ಕುಟುಂಬ ಸದಸ್ಯರು ಕೆಲ ಹೊತ್ತು ಆಸ್ಪತ್ರೆಯ ಮುಂಭಾಗದಲ್ಲಿ ಆಡಳಿತಾಧಿಕಾರಿಗಳೊಂದಿಗೆ ವಾದಕ್ಕಿಳಿದ ಪ್ರಸಂಗವೂ ನಡೆಯಿತು.
ಇದ್ಯಾವ ಕಾಲದಲ್ಲಿದ್ದೇವೆ ಇನ್ನೂ? ದಲಿತರ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಗ್ರಾಮಸ್ಥರು!
ನಿರ್ಲಕ್ಷ ಆಗಿಲ್ಲಈ ಘಟನೆ ಕುರಿತಂತೆ ‘ವಿಜಯ ಕರ್ನಾಟಕ’ಕ್ಕೆ ಮಾಹಿತಿ ನೀಡಿದ ಜಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ಮೊಹಮ್ಮದ್ ಶಫಿಯುದ್ದೀನ್, ಈ ಘಟನೆಯಲ್ಲಿ ಗರ್ಭದಲ್ಲಿಯೇ ಮಗು ತೀರಿಕೊಂಡಿದೆ ಎಂದು ಕುಟುಂಬ ಸದಸ್ಯರಿಗೆ ಮೊದಲೇ ತಿಳಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿ ಮಗು ಹೊರತೆಗೆಯಲು ಕುಟುಂಬ ಸದಸ್ಯರು ದಾಖಲೆಗಳಿಗೆ ಸಹಿ ಕೂಡ ಮಾಡಿದ್ದಾರೆ. ಗರ್ಭದಿಂದ ಮಗುವನ್ನು ಹೊರತೆಗೆದ ಬಳಿಕ ಬಹಳ ಹೊತ್ತಿನ ನಂತರ ತಾಯಿಗೆ ಎಂಬಾಲಿಸಂ ಆಗಿ ಆಕೆ ಸಡನ್ನಾಗಿ ಸಾವನ್ನಪ್ಪಿರುವ ಸಾಧ್ಯತೆಯಿದೆ. ಈ ಕುರಿತು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ