ಆ್ಯಪ್ನಗರ

ನರ್ಸ್‌ಗಳಿಗಿಲ್ಲಎನ್‌.95 ಮಾಸ್ಕ್‌, ಸ್ಯಾನಿಟೈಸರ್‌!

ಕೊರೊನಾ ವೈರಸ್‌ನಿಂದ ಆರೋಗ್ಯ ವ್ಯವಸ್ಥೆ ತಲ್ಲಣಗೊಂಡಿದ್ದರೂ, ನರ್ಸ್‌ಗಳಿಗೆ, ಆಧಿಸ್ಪತ್ರೆ ಸ್ವಚ್ಛಗೊಳಿಸುವ ಡಿ ದರ್ಜೆ ಸಿಬ್ಬಂದಿಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ನೀಡುವಲ್ಲಿಸರಕಾರ ಮೀನಮೇಷ ಎಣಿಸುತ್ತಿರುವ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.

Vijaya Karnataka 17 Mar 2020, 5:00 am
ಸೂರ್ಯಕಾಂತ ಎಂ.ಜಮಾದಾರ್‌ ಕಲಬುರಗಿ:ಕೊರೊನಾ ವೈರಸ್‌ನಿಂದ ಆರೋಗ್ಯ ವ್ಯವಸ್ಥೆ ತಲ್ಲಣಗೊಂಡಿದ್ದರೂ, ನರ್ಸ್‌ಗಳಿಗೆ, ಆಧಿಸ್ಪತ್ರೆ ಸ್ವಚ್ಛಗೊಳಿಸುವ ಡಿ ದರ್ಜೆ ಸಿಬ್ಬಂದಿಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ನೀಡುವಲ್ಲಿಸರಕಾರ ಮೀನಮೇಷ ಎಣಿಸುತ್ತಿರುವ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.
Vijaya Karnataka Web no masks sanitizer
ನರ್ಸ್‌ಗಳಿಗಿಲ್ಲಎನ್‌.95 ಮಾಸ್ಕ್‌, ಸ್ಯಾನಿಟೈಸರ್‌!


ಜಿಮ್ಸ್‌ ವಾರ್ಡ್‌ಗಳಲ್ಲಿಮತ್ತು ಇಡೀ ಆಸ್ಪತ್ರೆ ಕಟ್ಟಡದಲ್ಲಿನಾನಾ ರೋಗಗಿಳ ಅತ್ಯಂತ ಸಮೀಪದಲ್ಲಿದ್ದುಕೊಂಡು ಕೆಲಸ ಮಾಡುವ ನರ್ಸ್‌ಗಳಿಗೆ ಎನ್‌.95 ಮಾಸ್ಕ್‌ ನೀಡಲು ಇಲಾಖೆ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಸ್ಟಾಕ್‌ ಇಲ್ಲ, ಡಾಕ್ಟರ್‌ಗಳಿಗೆ ಬೇಕು ಎನ್ನುವ ಧೋರಣೆಯಲ್ಲಿನರ್ಸ್‌ಗಳಿಗೆ ಎನ್‌.95 ಮಾಸ್ಕ್‌ ನೀಡಲು ಸಾಧ್ಯವಿಲ್ಲ. ಆದ್ದರಿಂದ ಡಿಸ್‌ಪೋಸಲ್‌ ಮಾಸ್ಕ್‌ ನೀಡುತ್ತೇವೆ ಎನ್ನುವ ಜಿಮ್ಸ್‌ ಅಧಿಕಾರಿಗಳ ಧೋರಣೆಗೆ ಬೇಡಿಕೆ ರಜಿಸ್ಟರ್‌ನಲ್ಲಿಅಧೀಕ್ಷಕರು ತೋರಿರುವ ಧಾಟಿಯೇ ಸಾಕ್ಷಿಯಾಗಿದೆ. ಇದರಿಂದ ಸಿಬ್ಬಂದಿಯಲ್ಲಿಆತಂಕ ಸೃಷ್ಟಿಯಾಧಿಗಿಧಿದೆ.

*ಡಾಕ್ಟರ್‌ಗಳಿಗೆ ಕೊಡ್ತಾರೆ
ಡಾಕ್ಟರ್‌ಗಳು ರೋಗಿಗಳ ತಪಾಸಣೆ ಮಾಡುತ್ತಾರೆ. ಅವರಿಗೆ ಅತ್ಯಂತ ಸುರಕ್ಷಿತ ಎನ್‌.95 ಮಾಸ್ಕ್‌ ಕೊಡಬೇಕು ಎನ್ನುವುದೇನೋ ಸರಿ. ಆದರೆ, ನರ್ಸ್‌ ಮತ್ತು ದರ್ಜೆ ಸಿಬ್ಬಂದಿಗೆ ಎನ್‌.95 ದರ್ಜೆಯ ಗುಣಮಟ್ಟದ ಮಾಸ್ಕ್‌ ಏಕೆ ನೀಡುತ್ತಿಲ್ಲ. ಡಾಕ್ಟರ್‌ಗಳದ್ದು ಜೀವ. ಉಳಿದವರದ್ದು ಅಲ್ಲವೇನು ಎಂದು ಪ್ರಶ್ನಿಸಲಾಗುತ್ತಿದೆ.

ತಾಲೂಕು ಕೇಂದ್ರಗಳಲ್ಲೂವಿದೇಶದಿಂದ ಬಂದ ವ್ಯಕ್ತಿಗಳಿಗೆ 14 ದಿನ ವಾರ್ಡ್‌ಗಳಲ್ಲಿನಿಗಾ ಇಡಬೇಕಾದ ಪರಿಸ್ಥಿತಿ ಇದೆ. ಅಲ್ಲೂಕೆಲಸ ಮಾಡುವ ಆರೋಗ್ಯ ಸಿಬ್ಬಂದಿಗೆ ಮಾಸ್ಕ್‌ ನೀಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಡಿಸ್‌ಪೋಸಲ್‌ ಮಾಸ್ಕ್‌ಗಳು ರೋಗಿಗಳ ಜತೆಗಿನ ತುರ್ತು ಸಂದರ್ಭ ಎದುರಿಸಲು ಸುರಕ್ಷಿತವಾಗಿಲ್ಲಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಎನ್‌.95 ಮಾಸ್ಕ್‌ ನೀಡುವ ಆಗ್ರಹ ಹೆಚ್ಚಾಗುತ್ತಿದೆ.

ನಿಜಕ್ಕೂ ಜಿಮ್ಸ್‌ ನಿರ್ದೇಶಕರಿಗೆ ಮತ್ತು ಅಧೀಕ್ಷಕರಿಗೆ ಆರೋಗ್ಯ ಸ್ನೇಹಿಯಾಗಿರಬೇಕು. ಡಾಕ್ಟರ್‌ಗಳಂತೆ ನರ್ಸ್‌, ಡಿ ದರ್ಜೆ ಸಿಬ್ಬಂದಿಗೆ ಎನ್‌.95 ಮಾಸ್ಕ್‌ಗಳನ್ನು ನೀಡಬೇಕು. ಇಲ್ಲದೆ ಹೋದರೆ ಹೋರಾಟ ಮಾಡಬೇಕಾಗುತ್ತದೆ.

- ಲಿಂಗರಾಜ್‌ ಸಿರಗಾಪುರ, ಸಂಸ್ಥಾಪಕ ಅಧ್ಯಕ್ಷರು, ಕನ್ನಡಭೂಮಿ ಜಾಗೃತ ಸಮಿತಿ

ನಾವು ಜೀವದ ಹಂಗು ತೊರೆದು 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಳ ಮಾಡುತ್ತಿದೆ. ಇದು ಯುದ್ಧೋಪಾದಿಯಲ್ಲಿಕೆಲಸ ಮಾಡುವ ಸಮಯ. ಆದರೆ, ನಮ್ಮ ನರ್ಸ್‌ಗಳಿಗೆ ಎನ್‌.95 ಮಾಸ್ಕ್‌ ಕೊಡಿ. ಡಾಕ್ಟರ್‌ಗಳಿಗೆ ನೀಡುವ ಈ ಮಾಸ್ಕ್‌ ನಮಗ್ಯಾಕೆ ಇಲ್ಲ.
- ಮಡಿವಾಳಪ್ಪ ನಾಗರಳ್ಳಿ ಅಧ್ಯಕ್ಷರು, ಜಿಲ್ಲಾಸರಕಾರಿ ಶುಶ್ರೂಷಕರ ಸಂಘ.

ನಮ್ಮ ಸರಕಾರಿ ಆಸ್ಪತ್ರೆಗಳಲ್ಲಿಮತ್ತು ಜಿಲ್ಲಾಆಸ್ಪತ್ರೆಯಲ್ಲಿಮಾಸ್ಕ್‌ ಮತ್ತು ಸ್ಯಾನಿಟೈಸರ್‌ ನೀಡಿಲ್ಲಎನ್ನುವ ವಿಷಯ ಈಗ ತಿಳಿದಿದೆ. ಈ ಕುರಿತು ಆದಷ್ಟು ಬೇಗ ನರ್ಸ್‌ ಮತ್ತು ಡಿ. ದರ್ಜೆ ನೌಕರರಿಗೆ ಮಾಸ್ಕ್‌ ನೀಡುವಂತೆ ಸೂಚನೆ ನೀಡಲಾಗುವುದು. ಆದಷ್ಟು ಬೇಗ ಎಲ್ಲಆಸ್ಪತ್ರೆಗಳಿಗೆ ವ್ಯವಸ್ಥೆ ಮಾಡಲಾಗುವುದು.
- ಡಾ.ಜಬ್ಬಾರ್‌ ಜಿಲ್ಲಾಆರೋಗ್ಯ ಅಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ