ಆ್ಯಪ್ನಗರ

ತೊಗರಿ ನಾಡಿನ ರಿಯಲ್‌ ಎಸ್ಟೇಟ್‌ ಲಾಕ್‌ ಓಪನ್‌

ರಾಜ್ಯ ಸರಕಾರ ನಗರ ಯೋಜನಾ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸುತ್ತಿರುವುದು ತೊಗರಿ ನಾಡು ಕಲಬುರಗಿಯ ರಿಯಲ್‌ ಎಸ್ಟೇಟ್‌ಗೆ ಹೊಸ ಬೂಸ್ಟ್‌ ಸಿಗಲಿದೆ.

Vijaya Karnataka 16 May 2020, 5:00 am
ವಿಕ ವಿಶೇಷ ಕಲಬುರಗಿ: ರಾಜ್ಯ ಸರಕಾರ ನಗರ ಯೋಜನಾ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸುತ್ತಿರುವುದು ತೊಗರಿ ನಾಡು ಕಲಬುರಗಿಯ ರಿಯಲ್‌ ಎಸ್ಟೇಟ್‌ಗೆ ಹೊಸ ಬೂಸ್ಟ್‌ ಸಿಗಲಿದೆ.
Vijaya Karnataka Web open real estate lock
ತೊಗರಿ ನಾಡಿನ ರಿಯಲ್‌ ಎಸ್ಟೇಟ್‌ ಲಾಕ್‌ ಓಪನ್‌


ಈ ಹಿಂದೆ ಲೇ ಔಟ್‌ನಲ್ಲಿಪೂರ್ಣ ಪ್ರಮಾಣದ ಮೂಲಸೌಕರ್ಯ ಕಲ್ಪಿಸಿದ ನಂತರವಷ್ಟೇ ನಿವೇಶನ ಮಾರಾಟ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ(ಕೆಡಿಎ)ದಿಂದ ಅನುಮತಿ ನೀಡಲಾಗುತ್ತಿತ್ತು. ಈ ಕಾನೂನು 2018ರಿಂದ ಜಾರಿಯಲ್ಲಿತ್ತು. ಇದರಿಂದ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಬಲವಾದ ಹೊಡೆತ ಬಿದ್ದಿತ್ತು. ಆದರೆ ಈಗ ಶೇ 40ರಷ್ಟು ಮೂಲಸೌಕರ್ಯ ಕಲ್ಪಿಸಿದರೂ ಸಾಕು ಮೊದಲ ಹಂತದ ನಿವೇಶನವನ್ನು ಬಿಡುಗಡೆ ಮಾಡುವ ಕಾನೂನು ಜಾರಿಯಾಗಲಿದೆ. ಇದು ಕೊರೊನಾದಿಂದ ತತ್ತರಿಸಿದ್ದ ಈ ಉದ್ಯಮಕ್ಕೆ ಬೂಸ್ಟ್‌ ಸಿಕ್ಕಂತಾಗಿದೆ.

ಬೂಸ್ಟ್‌ ಹೇಗೆ?:

2014ರ ಆದೇಶದ ಅನ್ವಯ, ಕೆಡಿಎ ಸಭೆಯಲ್ಲಿಅನುಮೋದಿಸಿದ ವಿನ್ಯಾಸ ನಕ್ಷೆಯಂತೆ ಅರ್ಜಿದಾರರು ರಸ್ತೆ, ಉದ್ಯಾನ, ಬಯಲು ಜಾಗ, ನಾಗರಿಕ ಸೌಲಭ್ಯದ ನಿವೇಶನಗಳನ್ನು ಸ್ಥಳದಲ್ಲಿಗುರುತಿಸಿದ ನಕ್ಷೆಯಲ್ಲಿಯುಜಿಡಿ, ನೀರು, ವಿದ್ಯುಚ್ಛಕ್ತಿ ಸಂಪರ್ಕ ತೋರಿಸುವ ನಕ್ಷೆಯೊಂದಿಗೆ ಅರ್ಜಿ ಸಲ್ಲಿಸಿದರೆ ಮೊದಲ ಹಂತದ ಶೇ 40ರಷ್ಟು ನಿವೇಶನಗಳನ್ನು ಬಿಡುಗಡೆಗೊಳಿಸಲಾಗುತ್ತಿತ್ತು.

ಆದರೆ 2018ರಲ್ಲಿಸಾರ್ವಜನಿಕ ದೂರುಗಳು ಬಂದ ಹಿನ್ನೆಲೆಯಲ್ಲಿಆದೇಶ ಮಾರ್ಪಡಿಸಿ ಲೇಔಟ್‌ನಲ್ಲಿಪೂರ್ಣ ಪ್ರಮಾಣದಲ್ಲಿಅಭಿವೃದ್ಧಿಪಡಿಸಿದ ಬಳಿಕವೇ ನಿವೇಶನ ಬಿಡುಗಡೆ ಮಾಡುವ ಆದೇಶ ಜಾರಿಗೊಳಿಸಲಾಗಿತ್ತು. ಇದರಿಂದ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ತೋವ್ರ ಹೊಡೆತ ಬಿದ್ದು, ಹೊಸ ಲೇ ಔಟ್‌ಗಳನ್ನು ಮಾಡಲು ಹೊಡೆತ ಬಿದ್ದಿತ್ತು.

ಪ್ರತಿ ವರ್ಷ ನೂರಾರು ಲೇಔಟ್‌ಗಳಿಗೆ ಅನುಮತಿ ನೀಡಲಾಗುತ್ತಿತ್ತು. ಆದರೆ ಈ ಕಾಯ್ದೆ ಬಂದು 2 ವರ್ಷಗಳಾದರೂ ಇಲ್ಲಿನ ಕೆಡಿಎನಲ್ಲಿಕೇವಲ 93 ವಿನ್ಯಾಸಗಳಿಗೆ ಅನುಮತಿ ಪಡೆದಿದ್ದರು. ಅಗತ್ಯ ಹಣ ಇಲ್ಲದೇ ಇದ್ದರಿಂದ ಹೊಸ ಲೇ ಔಟ್‌ಗಳ ನಿರ್ಮಾಣ ಆಮೆಗತಿಯಲ್ಲಿನಡೆದಿತ್ತು.

ಯಾರಿಗೆ ಅನುಕೂಲ?:

ಇದು ಅಭಿವೃದ್ಧಿಗೆ ಪ್ರೇರಕವಾಗಲಿದೆ.ಲಾಕ್‌ಡೌನ್‌ ಬಳಿಕ ನೆಲಕಚ್ಚಿದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಹೊಸ ಆಯಾಮ ಸಿಗಲಿದೆ. ಖಾಸಗಿ ಲೇ ಔಟ್‌ ಮಾಲೀಕರಿಗೆ ಹೆಚ್ಚು ಲಾಭವಾಗಲಿದೆ. ಇದರ ಜತೆಗೆ ಹೆಚ್ಚು ಹೆಚ್ಚು ಲೇ ಔಟ್‌ಗಳಿಗೆ ಮಂಜೂರಾತಿ ನೀಡುವುದರಿಂದ ಸರಕಾರದ ಅಂಗ ಸಂಸ್ಥೆಯಾದ ಕೆಡಿಎಗೂ ಹೆಚ್ಚು ಫೀ ಸಂಗ್ರವಾಗಲಿದೆ. ಆ ಮೂಲಕ ಸರಕಾರಿ ಸಂಸ್ಥೆಯೂ ಆರ್ಥಿಕವಾಗಿ ಬಲಗೊಳ್ಳಲಿದೆ. ಒಂದು ಲೇ ಔಟ್‌ ನಿವೇಶನ ಮಾರಿ ಈ ಹಣವನ್ನು ಇನ್ನೊಂದು ಲೇ ಔಟ್‌ ಡೆವಲಪ್‌ಮೆಂಟ್‌ಗೂ ಹಣ ಹೂಡಿಕೆ ಮಾಡಬಹುದು. ಹಂತ ಹಂತವಾಗಿ ಲೇ ಔಟ್‌ ಅಭಿವೃದ್ಧಿಪಡಿಸಬಹುದು. ಜತೆಗೆ ಚರಂಡಿ, ರಸ್ತೆ, ವಿದ್ಯುತ್‌ ಕಾಮಗಾರಿ ಸೇರಿ ಇತರ ಕೆಲಸಗಳಿಗೂ ಚಾಲನೆ ಸಿಕ್ಕು ಕಾರ್ಮಿಕರಿಗೆ ಕೆಲಸ ಸಿಗಲಿದೆ ಎನ್ನುತ್ತಾರೆ ಪ್ರಾಧಿಕಾರದ ಆಯುಕ್ತ ರಾಚಪ್ಪ.

ರಾಜ್ಯ ಸರಕಾರ ನಿರ್ಧಾರ ರಿಯಲ್‌ ಎಸ್ಟೇಟ್‌ಗೆ ಹೊಸ ಬೂಸ್ಟ್‌ ನೀಡಲಿದೆ. ಲಾಕ್‌ಡೌನ್‌ ಬಳಿಕ ಈ ಉದ್ಯಮದ ಮೇಲೆ ಬಿದ್ದಿರುವ ಕರಿಛಾಯೆ ದೂರವಾಗಲಿದೆ.

-ರಾಚಪ್ಪ, ಆಯುಕ್ತ, ಕೆಡಿಎ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ