ಆ್ಯಪ್ನಗರ

ಸರಕಾರಿ ಶಾಲೆಯಲ್ಲೇ ರಾತ್ರಿ ವಿದ್ಯಾಭ್ಯಾಸ !

ಮೆಟ್ರಿಕ್‌ ಫಲಿತಾಂಶ ಹೆಚ್ಚಿಸಲು ಜಿಲ್ಲೆಯ ಶಹಾಬಾದ ಬಳಿಯ ಭಂಕೂರ, ಕೊಲ್ಲೂರು ಮತ್ತು ಚಿತ್ತಾಪುರ ತಾಲೂಕಿನ ಕಾಳಗಿ ಸರಕಾರಿ ಪ್ರೌಢ ಶಾಲೆ ಶಿಕ್ಷಕರು ಬಡ ವಿದ್ಯಾರ್ಥಿಗಳಿಗೆ ರಾತ್ರಿಯೂ ವಿದ್ಯಾಭ್ಯಾಸ ಮಾಡಿಸಿ ಗಮನ ಸೆಳೆದಿದ್ದಾರೆ.

Vijaya Karnataka 26 Feb 2020, 10:36 pm
ಸೂರ್ಯಕಾಂತ ಎಂ.ಜಮಾದಾರ್‌ ಕಲಬುರಗಿ :ಮೆಟ್ರಿಕ್‌ ಫಲಿತಾಂಶ ಹೆಚ್ಚಿಸಲು ಜಿಲ್ಲೆಯ ಶಹಾಬಾದ ಬಳಿಯ ಭಂಕೂರ, ಕೊಲ್ಲೂರು ಮತ್ತು ಚಿತ್ತಾಪುರ ತಾಲೂಕಿನ ಕಾಳಗಿ ಸರಕಾರಿ ಪ್ರೌಢ ಶಾಲೆ ಶಿಕ್ಷಕರು ಬಡ ವಿದ್ಯಾರ್ಥಿಗಳಿಗೆ ರಾತ್ರಿಯೂ ವಿದ್ಯಾಭ್ಯಾಸ ಮಾಡಿ
ಸಿ ಗಮನ ಸೆಳೆದಿದ್ದಾರೆ.
Vijaya Karnataka Web overnight in government school
ಸರಕಾರಿ ಶಾಲೆಯಲ್ಲೇ ರಾತ್ರಿ ವಿದ್ಯಾಭ್ಯಾಸ !


ಮನೆಯಲ್ಲಿಓದಲು ಸ್ಥಳ ಇಲ್ಲದ ಬಡ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ. ಭಂಕೂರ, ಕೊಲ್ಲೂರು ಮತ್ತು ಕಾಳಗಿ ಗ್ರಾಮದ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ರಾತ್ರಿ ಸರಕಾರಿ ಶಾಲೆ ಕಟ್ಟಡದಲ್ಲಿಯೇ ತಂಗುತ್ತಿದ್ದಾರೆ. ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ರಾತ್ರಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುವು ಮಾಡಿ ಕೊಟ್ಟ ಬಳಿಕ ಮಕ್ಕಳಲ್ಲಿಮೆಟ್ರಿಕ್‌ ಪರೀಕ್ಷೆಯಲ್ಲಿಹೆಚ್ಚು ಅಂಕಗಳಿಸುವ ಆತ್ಮವಿಶ್ವಾಸ ಮಧಿಕ್ಕಧಿಳಲ್ಲಿಮೂಡಿದೆ.

ವಿಶೇಷ ವ್ಯವಸ್ಥೆ
ಶಾಲೆಯಲ್ಲಿಒಂದು ಕೊಠಡಿ ರೆಡಿ ಮಾಡಿ ಅಲ್ಲಿಕುಡಿವ ನೀರಿನ, ಬೆಳಕಿನ, ಕುರ್ಚಿ, ಟೇಬಲ್‌ ಜಮಖಾನೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ಹೋಗುವ ಮಕ್ಕಳು ಊಟ ಮಾಡಿ 7 ಗಂಟೆಯ ಬಳಿಕ ಪುನಃ ಶಾಲೆಗೆ ಬರುತ್ತಾರೆ. ರಾತ್ರಿ ಅಲ್ಲಿಯೇ ಇದ್ದು ಓದುತ್ತಾರೆ. ವಿದ್ಯುತ್‌ ಹೋದರೆ ಬ್ಯಾಟರಿ ವ್ಯವಸ್ಥೆ ಮಾಡಲಾಗಿದೆ. ಅವರ ಭದ್ರತೆಗಾಗಿ ಕಾವಲುಗಾರರನ್ನು ನಿಯೋಜಿಸಿ 2 ಸಾವಿರ ಸಂಬಳ ನೀಡಲಾಗುತ್ತಿದೆ. ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಖಾತರಿಪಡಿಸಿಕೊಳ್ಳಲು ಶಿಕ್ಷಕರು ರಾತ್ರಿ ಬಂದು ಹೋಗುತ್ತಾರೆ.

ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹೋಗಿ ಪಾಲಕರ ಮನವೊಲಿಸಲಾಗಿದೆ. ಆ ಶಿಕ್ಷಕರೇ ಭಂಕೂರು ಶಾಲೆ ಮುಖ್ಯಶಿಧಿಕ್ಷಕ ದತ್ತಪ್ಪ ಕೋಟನೂರು, ಕೊಲ್ಲೂರು ಶಾಲೆ ಮುಖ್ಯಶಿಧಿಕ್ಷಕ ಬಸವರಾಜ ಮತ್ತು ಕಾಳಗಿ ಶಾಲೆ ಮುಖ್ಯಶಿಧಿಕ್ಷಕ ಮಹೇಶಕುಮಾರ ಬಡಿಗೇರ್‌.

ಇದು ಹೊಸ ಪ್ರಯೋಗ. ತಾಲೂಕಿನಲ್ಲಿಎಲ್ಲಶಾಲೆಗಳಲ್ಲಿಮಾಡಲು ಯೋಜಿಸಲಾಗಿತ್ತು. ಆದರೆ, ಭಂಕೂರು, ಕೊಲ್ಲೂರು, ಕಾಳಗಿಯಲ್ಲಿರಾತ್ರಿ ಬಡ ಮಕ್ಕಳಿಗೆ ಓದುವ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಲ್ಲಿಆತ್ಮವಿಶ್ವಾಸ ಮೂಡಿದೆ. ಫಲಿತಾಂಶ ಹೆಚ್ಚಾಗುವ ನಿರೀಕ್ಷೆ ಇದೆ.
- ಶಂಕ್ರಮ್ಮ ಡವಳಗಿ ಬಿಇಒ ಚಿತ್ತಾಪುರ

ಬಡ ಮಕ್ಕಳಿಗೆ ಪ್ರತಿಭೆ ಇದ್ದರೂ ಅವರಿಗೆ ಓದಲು ಸ್ಥಳ ಮತ್ತು ಒಂದಷ್ಟು ವ್ಯವಸ್ಥೆ ಬೇಕಿತ್ತು. ಅದನ್ನು ನಾವು ಮಾಡಿದ್ದೇವೆ. ಮಕ್ಕಳು ಉತ್ತಮವಾಗಿ ಸ್ಪಂದಿಸುತ್ತಿವೆ. ರಾತ್ರಿ 11 ಗಂಟೆ ತನಕ ಓದಿ ಬೆಳಗ್ಗೆ 4ಗಂಟೆಗೆ ಎದ್ದು ಪುನಃ ಓದುತ್ತಾರೆ. ಗುಂಪು ಚರ್ಚೆ ಅವರಲ್ಲಿನ ಕ್ಷಮತೆ ಹೆಚ್ಚಿಸುತ್ತಿದೆ.
- ದತ್ತಪ್ಪ ಕೋಟನೂರು ಪ್ರಭಾರ ಮುಖ್ಯಶಿಧಿಕ್ಷಕ ಭಂಕೂರ ಶಾಲೆ.

ನಮ್ಮ ಮನೆಯಲ್ಲಿಸ್ಥಳ ಇಲ್ಲ. ಕೊಣೆ ಒಂದೇ ಅದರಲ್ಲಿಯೇ ಅಪ್ಪ, ಅಮ್ಮ, ಸಹೋದರ, ಸಹೋದರಿ ಮಲುಗುತ್ತಿದ್ದೇವೆ. ಈ ವೇಳೆ ಓದಲು ತುಂಬಾ ತೊಂದರೆ ಆಗಿತ್ತು. ಶಾಲೆಯಲ್ಲಿಯೇ ಈಗ ವ್ಯವಸ್ಥೆ ಮಾಡಿದ್ದರಿಂದ ರಾತ್ರಿ ಬಹಳ ಹೊತ್ತಿನ ತನಕ ಓದುತ್ತಿದ್ದೇವೆ. ಖಂಡಿತವಾಗಿ ಉತ್ತಮ ಅಂಕ ತೆಗಿತೇನೆ.
- ಶಿವಶರಣಪ್ಪ ಗಂಗಣ್ಣ, ವಿದ್ಯಾರ್ಥಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ