ಆ್ಯಪ್ನಗರ

ಏಕಾಗ್ರತೆಯಿಂದ ವ್ಯಕ್ತಿತ್ವ ವಿಕಾಸ :ಡಾ.ಸಿ.ಆರ್‌.ಚಂದ್ರಶೇಖರ

ಉತ್ತಮ ಹವ್ಯಾಸಗಳು, ಏಕಾಗ್ರತೆ ಮತ್ತು ಆಸಕ್ತಿ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿಯಾಗುತ್ತವೆ. ವಿದ್ಯಾರ್ಥಿಗಳು ಹದಿಹರೆಯದ ಮನೋದೈಹಿಕ ಸಮಸ್ಯೆಗಳಿಂದ ಹೊರಬಂದು ಶೈಕ್ಷಣಿಕ ಸಾಧನೆ ಕಡೆಗೆ ಗಮನಹರಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯಕಾಪಾಡಿಕೊಳ್ಳಬೇಕು ಎಂದು ಮನೋತಜ್ಞ ಡಾ.ಸಿ.ಆರ್‌.ಚಂದ್ರಶೇಖರ ಸಲಹೆ ನೀಡಿದರು.

Vijaya Karnataka 30 Dec 2018, 5:45 pm
ಕಲಬುರಗಿ :ವೈದ್ಯ ಸಾಹಿತಿ ದಿ.ಡಾ.ಲೀಲಾವತಿ ದೇವದಾಸ್‌ ಅವರ ಸಂಸ್ಮರಣೆಯ ಪ್ರಯುಕ್ತ ನಗರದ ಕಾಯಕ ಫೌಂಡೇಷನ್‌ಎಜುಕೇಷನ್‌ ಟ್ರಸ್ಟ್‌ ಮತ್ತು ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ ವತಿಯಿಂದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
Vijaya Karnataka Web personality evolution from concentration dr cr chandrashekhar
ಏಕಾಗ್ರತೆಯಿಂದ ವ್ಯಕ್ತಿತ್ವ ವಿಕಾಸ :ಡಾ.ಸಿ.ಆರ್‌.ಚಂದ್ರಶೇಖರ


ಮನೋತಜ್ಞ ಡಾ.ಸಿ.ಆರ್‌.ಚಂದ್ರಶೇಖರ ಅವರು ಮಾತನಾಡಿ, ಉತ್ತಮ ಹವ್ಯಾಸಗಳು, ಏಕಾಗ್ರತೆ ಮತ್ತು ಆಸಕ್ತಿ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿಯಾಗುತ್ತವೆ. ವಿದ್ಯಾರ್ಥಿಗಳು ಹದಿಹರೆಯದ ಮನೋದೈಹಿಕ ಸಮಸ್ಯೆಗಳಿಂದ ಹೊರಬಂದು ಶೈಕ್ಷಣಿಕ ಸಾಧನೆ ಕಡೆಗೆ ಗಮನಹರಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಖ್ಯಾತ ವೈದ್ಯೆ ಡಾ.ಇಂದಿರಾ ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದಿ.ಡಾ.ಲೀಲಾವತಿ ದೇವದಾಸ ಅವರ ಶ್ರದ್ಧೆ, ಕರ್ತವ್ಯ ಪ್ರಜ್ಞೆ, ಭೋಧನಾ ಶೈಲಿ, ಸಮಾಜಮುಖಿ ವ್ಯಕ್ತಿತ್ವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಯಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶಿವರಾಜ.ಟಿ.ಪಾಟೀಲ್‌, ಸ್ವಪ್ನ ರೆಡ್ಡಿ ಪಾಟೀಲ್‌, ಎಸ್‌.ಎಸ್‌.ಹಿರೇಮಠ, ಪ್ರಾಂಶುಪಾಲ ಡಾ.ಶಶಿಶೇಖರ ರೆಡ್ಡಿ, ಜಿ.ಎಂ. ಸಾಲಿಮಠ ವೇದಿಕೆಯಲ್ಲಿದ್ದರು. ರೋಷನಿ ಎನ್‌.ಘೋಟ್ಕೆ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ