ಆ್ಯಪ್ನಗರ

ರೋಗಿಗಳೇ ಇಲ್ಲ; ಆಪರೇಶನ್‌ ಎಲ್ಲಿಂದ?: ಸಚಿವ ಪ್ರಿಯಾಂಕ್‌

ರಾಜ್ಯದ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವುದು ಬಿಜೆಪಿ ಹೈಕಮಾಂಡ್‌ಗೂ ಇಷ್ಟವಿಲ್ಲ. ಆದರೆ ವಿರೋಧ ಪಕ್ಷದ ನಾಯಕ ಬಿ. ಎಸ್‌.ಯಡಿಯೂರಪ್ಪ ಮತ್ತು ಇನ್ನುಳಿದ ಇಬ್ಬರು ಪ್ರಮುಖ ವ್ಯಕ್ತಿಗಳ ಕುಟುಂಬದವರಿಗೆ ಮಾತ್ರ ಬೇಕಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.

Vijaya Karnataka 22 Sep 2018, 10:06 am
ಕಲಬುರಗಿ: ರಾಜ್ಯದ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವುದು ಬಿಜೆಪಿ ಹೈಕಮಾಂಡ್‌ಗೂ ಇಷ್ಟವಿಲ್ಲ. ಆದರೆ ವಿರೋಧ ಪಕ್ಷದ ನಾಯಕ ಬಿ. ಎಸ್‌.ಯಡಿಯೂರಪ್ಪ ಮತ್ತು ಇನ್ನುಳಿದ ಇಬ್ಬರು ಪ್ರಮುಖ ವ್ಯಕ್ತಿಗಳ ಕುಟುಂಬದವರಿಗೆ ಮಾತ್ರ ಬೇಕಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.
Vijaya Karnataka Web Priyanka Kharge


ಶುಕ್ರವಾರ ನಗರದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇದು ಬಿಜೆಪಿಗೆ ಕೊನೆಯ ಅವಕಾಶ. ಹೇಗಾದರೂ ಮಾಡಿ ಸರಕಾರ ರಚಿಸಬೇಕು ಎಂದು ಯಡಿಯೂರಪ್ಪ ಕನಸು ಕಾಣುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಕಾರವಾಗುವುದಿಲ್ಲ,'' ಎಂದರು.

''ಪೇಷಂಟ್‌ ರೆಡಿ ಇದೆ. ರೆಡಿಯಿದ್ರೆ ಅಪರೇಶನ್‌ ಮಾಡಲು ರೆಡಿ ಎಂಬ ಬಿಜೆಪಿ ಹೇಳಿಕೆ ಹಾಸ್ಯಾಸ್ಪದ. ಆದರೆ ಪೇಷಂಟ್‌ ಇಲ್ಲ. ಬಿಜೆಪಿಯವರೇ ರೆಡಿ ಮಾಡುತ್ತಿದ್ದಾರೆ. ಮುಂಬೈನಲ್ಲಿ 18 ಜನ ಶಾಸಕರು ಇದ್ದಾರೆ ಎಂದು ಬುರುಡೆ ಬಿಟ್ಟರು, ಎಲ್ಲಿದ್ದಾರೆ ತೋರಿಸಲಿ,'' ಎಂದು ಸವಾಲು ಹಾಕಿದರು.

''ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಐದು ವರ್ಷ ಮೈತ್ರಿ ಮಾಡಿಕೊಳ್ಳಲಾಗಿದೆ. ಆಡಳಿತದಲ್ಲಿ ಏರುಪೇರಾದರೆ ಅದಕ್ಕೊಂದು ಸಮನ್ವಯ ಸಮಿತಿ ಇದ್ದು, ಅದು ಬಗೆಹರಿಸುತ್ತದೆ. ಮನೆಯಲ್ಲಿ ಸಮಸ್ಯೆ ಇದ್ದರೆ, ಬಗೆಹರಿಸಿಕೊಳ್ಳಲಾಗುತ್ತದೆ. ಆದರೆ ಮನೆ ಬಿಟ್ಟು ಹೋಗಲು ಆಗುತ್ತದೆಯೇ?,'' ಎಂದು ಪ್ರಶ್ನಿಸಿದರು.

''ಸರಕಾರದ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಸಚಿವ ಜಾರಕಿಹೊಳಿ ಸಮಸ್ಯೆ ಬಗೆಹರಿದಿದೆ. ಬಿಜೆಪಿಯವರು ಮಾಧ್ಯಮಗಳ 'ಬಿ' ಟೀಮ್‌ ಆಗಿದೆ. ದಿನದ 24 ಗಂಟೆ ನ್ಯೂಸ್‌ ಮಾಧ್ಯಮದವರಿಗೂ ಬೇಕು, ಬಿಜೆಪಿಯವರೂ ಸದಾ ಸುದ್ದಿಯಲ್ಲಿರಬೇಕಂತ ಬಯಸುತ್ತಾರೆ. ಅದಕ್ಕೆ ಇದೆಲ್ಲ ನಡೆಯುತ್ತಿದೆ,'' ಎಂದರು.

ದಂಗೆ: ಸಿಎಂ ಹೇಳಿಕೆಗೆ ಅಪಾರ್ಥ

ಜನರನ್ನು ದಂಗೆ ಎಬ್ಬಿಸುತ್ತೇನೆ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌, ''ಸಿಎಂ ಅವರು ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿಕೆ ನೀಡಿಲ್ಲ. ಅವರು ಓರ್ವ ಜವಾಬ್ದಾರಿಯುತ ಸಿಎಂ. ಹೇಳಿಕೆ ನೀಡುವುದರಲ್ಲಿ ವ್ಯತ್ಯಾಸವಾಗಿದೆ ಅಷ್ಟೆ. ಬಿಜೆಪಿ ಕುತಂತ್ರ ರಾಜಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿ ಈ ತರಹ ಹೇಳಿದ್ದಾರೆ. ಸಿಎಂ ಈ ಹೇಳಿಕೆಗೆ ಕಾಂಗ್ರೆಸ್‌ ಅಸಮಾಧಾನಗೊಂಡಿದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿ,'' ಎಂದರು.

''ಮುಂಬಡ್ತಿ ವಿಚಾರದಲ್ಲಿ ನಮ್ಮದು ಸ್ಪಷ್ಟ ನಿಲುವಿದೆ. ಯಾವುದೇ ಅಸಮಾಧಾನವೂ ಇಲ್ಲ. ಈ ವಿಚಾರ ಸುಪ್ರೀಂ ಕೋಟ್‌ ರ್‍ನಲ್ಲಿ ಇರುವುದುರಿಂದ ಹೆಚ್ಚು ಕಮೆಂಟ್‌ ಮಾಡಲು ಆಗುವುದಿಲ್ಲ. ಮುಂಬಡ್ತಿ ವಿಚಾರದಲ್ಲಿ ಡಿಸಿಎಂ ಮತ್ತು ನಾನು ಸಚಿವ ಸಂಪುಟದಲ್ಲಿ ಸಿಎಂಗೆ ಮನವಿ ಮಾಡಲಾಗಿದೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ