ಆ್ಯಪ್ನಗರ

ರೈಲ್ವೆ ನಿಲ್ದಾಣ ಪಾರ್ಕಿಂಗ್‌: ಶುಲ್ಕ ಇಳಿಕೆಗೆ ಆಗ್ರಹ

ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿನ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್‌ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿ ಮುಖಂಡರು ಸೋಮವಾರ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ರೈಲ್ವೆ ಅಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 11 Dec 2018, 5:00 am
ಕಲಬುರಗಿ :ನಗರದ ರೈಲ್ವೆ ನಿಲ್ದಾಣದಲ್ಲಿನ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್‌ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿ ಮುಖಂಡರು ಸೋಮವಾರ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ರೈಲ್ವೆ ಅಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web railway station parking demand for a fee
ರೈಲ್ವೆ ನಿಲ್ದಾಣ ಪಾರ್ಕಿಂಗ್‌: ಶುಲ್ಕ ಇಳಿಕೆಗೆ ಆಗ್ರಹ


ದೇಶದ ರಾಜಧಾನಿ ಸೇರಿದಂತೆ ಮೆಟ್ರೋ ನಗರಗಳ ಪಾರ್ಕಿಂಗ್‌ ದರಗಳಿಗಿಂತಲೂ ಕಲಬುರಗಿ ನಿಲ್ದಾಣದ ಪಾರ್ಕಿಂಗ್‌ ದರವು ಅತಿ ಹೆಚ್ಚಾಗಿದೆ. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಕಡಿಮೆಯಿದೆ. ನಗರದಲ್ಲಿ ದ್ವಿಚಕ್ರವಾಹನವೊಂದಕ್ಕೆ ತಿಂಗಳಿಗೆ ರೂ.2 ಸಾವಿರ ವಿಧಿಸಲಾಗುತ್ತದೆ. ಸೊಲ್ಲಾಪುರ ನಿಲ್ದಾಣದಲ್ಲಿ ರೂ.500 ಶುಲ್ಕವಿದೆ. ನಮ್ಮಲ್ಲಿ ಮೂರು ಪಟ್ಟು ದರ ವಸೂಲಿ ಮಾಡುತ್ತಿರುವುದು ಹಗಲು ದರೋಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಸೊಲ್ಲಾಪುರ ರೈಲ್ವೆ ವಿಭಾಗೀಯ ಅಧಿಕಾರಿಗಳು ನಗರದ ರೈಲು ನಿಲ್ದಾಣದ ಶುಲ್ಕ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಸೊಲ್ಲಾಪುರ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‌ ದರಕ್ಕೆ ಹೋಲಿಸಿದರೆ, ನಗರದ ನಿಲ್ದಾಣದಲ್ಲಿನ ವಾಹನಗಳ ನಿಲುಗಡೆಗೆ ಹೆಚ್ಚು ಶುಲ್ಕ ಹೆಚ್ಚಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ವ್ಯಾಪಾರಿ ದೃಷ್ಟಿಕೋನದಿಂದ ದರ ಹೆಚ್ಚಳ ಮಾಡಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಆದ್ದರಿಂದ ಈಗಿರುವ ದರವನ್ನು ಕೂಡಲೇ ಇಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಿತಿಯ ಯುವ ಘಟಕದ ಅಧ್ಯಕ್ಷ ಆಕಾಶ ರಾಠೋಡ, ಸಂಚಾಲಕ ಗುರುರಾಜ ಭಂಡಾರಿ, ಶ್ರೀಕಾಂತ, ಸಂತೋಷ, ಸುನೀಲ, ಸಚಿನ್‌, ಕಿರಣ ಪವಾರ, ಸಂಜಯ, ಮಹೇಶ, ಶ್ರೀನಿವಾಸ, ರಘು, ಎಚ್‌.ಎನ್‌.ಹಾಜಿ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ