ಆ್ಯಪ್ನಗರ

ಓದುವುದು ಕೇವಲ ನೌಕರಿಗಾಗಿ ಅಲ್ಲ

ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನದ ತರಬೇತಿ ಶಿಬಿರ ಜರುಗಿತು.

Vijaya Karnataka 26 Jul 2019, 9:42 pm
ಕಲಬುರಗಿ :ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನದ ತರಬೇತಿ ಶಿಬಿರ ಜರುಗಿತು.
Vijaya Karnataka Web reading is not just for employees
ಓದುವುದು ಕೇವಲ ನೌಕರಿಗಾಗಿ ಅಲ್ಲ


ಸಂಪನ್ಮೂಲ ವ್ಯಕ್ತಿ ರಮೇಶ ಉಮ್ರಾಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳು ಅಂಕಗಳಿಕೆಗಾಗಿ, ನೌಕರಿಗಾಗಿ ಓದದೆ, ಸಾರ್ಥಕ ಬದುಕಿಗಾಗಿ ಓದಬೇಕು. ವಿಜ್ಞಾನ ಓದುವುದರ ಜೊತೆಗೆ ಆಧ್ಯಾತ್ಮಿಕ ಸಾಧನೆ ಮುಖ್ಯವಾಗಿದೆ ಎಂದರು.

ಶಿಕ್ಷ ಣದ ಉದ್ದೇಶ ಕೇವಲ ನೌಕರಿ ಹಿಡಿಯುದಕ್ಕಾಗಿ ಅಲ್ಲ. ಸರ್‌ ಎಂ. ವಿಶ್ವೇಶ್ವರಯ್ಯನವರಂತೆ ಮಹಾನ್‌ ವ್ಯಕ್ತಿಗಳಾಗುವುದಕ್ಕಾಗಿ ಶಿಕ್ಷ ಣ ಬೇಕು. ವ್ಯಕ್ತಿ ತನ್ನ ಶಕ್ತಿ ಸಾಮರ್ಥ್ಯ‌ಗಳನ್ನು ದುರುಪಯೋಗ ಮಾಡಿಕೊಂಡರೆ ಹಾಳಾಗುತ್ತಾನೆ. ಸದ್ಬಳಕೆ ಮಾಡಿಕೊಂಡರೆ ಮಹಾನ್‌ ವ್ಯಕ್ತಿಯಾಗುತ್ತಾನೆ. ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳು ಸದ್ಗುಣ ಕಲಿತರೆ ಜೀವನ ನಿರ್ಮಾಣವಾಗುತ್ತದೆ, ಇಲ್ಲವಾದರೆ ನಿರ್ನಾಮವಾಗುತ್ತದೆ. ಮನಸ್ಸಿದ್ದರೆ-ಮಾರ್ಗ ಎಂಬಂತೆ ಜೀವನದ ಸಾಧನೆಗೆ ಮನಸ್ಸು ಮಾಡಬೇಕು. ಶಿಕ್ಷ ಣ ಉದ್ಯೋಗಕ್ಕಾಗಿ ಅಲ್ಲ ಜೀವನದ ಉನ್ನತೀಕರಣಕ್ಕಾಗಿ, ಸಬಲೀಕರಣಕ್ಕಾಗಿ ಎಂದು ಹೇಳಿದರು.

ಓದುವ ಅವಕಾಶ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಯಾರಿಗೆ ಸಿಕ್ಕಿದೆ ಅವರು ಅದನ್ನು ಸದುಪಯೋಗ ಪಡೆದುಕೊಳ್ಳಬೇಕು, ಮನುಷ್ಯನಿಗೆ ಇಚ್ಛಾಶಕ್ತಿ ಬೇಕು, ಬೆಟ್ಟವನ್ನು ಪುಡಿ ಪುಡಿ ಮಾಡುವ ಸಮುದ್ರದ ನೀರೆಲ್ಲ ಆಪೋಶನ ಮಾಡುವ ಅದಮ್ಯ ಇಚ್ಛಾಶಕ್ತಿ -ಕ್ರಿಯಾಶಕ್ತಿ ಈ ಮೂರು ಶಕ್ತಿ ಮನುಷ್ಯನಿಗೆ ಬೇಕು. ವಿವೇಕಾನಂದ ಹೇಳುವಂತೆ ಈ ದೇಶವನ್ನು ಕಟ್ಟಲು ನನಗೆÜ ಉಕ್ಕಿನ ಶಕ್ತಿ ಹೊಂದಿದ ಯುವಕರು ಬೇಕು ಎಂಬಂತೆ ಮನುಷ್ಯ ಕನಸು ಕಾಣಬೇಕು. ಗುರಿ ಇಟ್ಟುಕೊಳ್ಳಬೇಕು. ಸೂರ್ಯನನ್ನು ಗುರಿಯಾಗಿಸಿದರೆ ತಾರೆಗಳಾದರೂ ಪಡೆದುಕೊಳ್ಳಬಹುದು ಎಂದು ವಿವರಿಸಿದರು.

ಪ್ರಾಚಾರ್ಯರು, ಬೋಧಕರು, ವಿದ್ಯಾರ್ಥಿಗಳು ಇದ್ದರು.

ಒಂದು ಗಂಟೆ ವ್ಯಾಯಾಮ ಮಾಡಿ

ಓದುವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬ್ರಹ್ಮಚರ್ಯ ಮುಖ್ಯ. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ದಿನಕ್ಕೆ ಒಂದು ಗಂಟೆಯಾದರು ವಿದ್ಯಾರ್ಥಿಗಳು ದೈಹಿಕ ವ್ಯಾಯಾಮದಲ್ಲಿ ಕಳೆಯಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಈ ಕ್ಷ ಣದಿಂದಲೆ ನಾವು ಸನ್ಮಾರ್ಗದೆಡೆಗೆ ಜೀವನದ ಪಯಣ ಹೊರಡಿಸಬೇಕು ಎಂದು ಉಮ್ರಾಣಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ