ಆ್ಯಪ್ನಗರ

ದಾಖಲೆ ಬರೆದ ಟಿಎಸ್‌3ಆರ್‌ ತೊಗರಿ ಬೀಜ ಉತ್ಪಾದನೆ

ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಶೋಧಿಸಿದ ನೆಟೆ ಮತ್ತು ಬರ ನಿರೋಧಕ ತಳಿಯಾದ ಟಿಎಸ್‌3ಆರ್‌ ಬೀಜ ಉತ್ಪಾದನೆಯಲ್ಲಿದಾಖಲೆ ಬರೆದು ಗಮನ ಸೆಳೆದಿದೆ.

Vijaya Karnataka 23 Feb 2020, 5:00 am
ದೇವಯ್ಯ ಗುತ್ತೇದಾರ್‌ ಕಲಬುರಗಿ:
Vijaya Karnataka Web recorded ts3r bark seed production
ದಾಖಲೆ ಬರೆದ ಟಿಎಸ್‌3ಆರ್‌ ತೊಗರಿ ಬೀಜ ಉತ್ಪಾದನೆ

ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಶೋಧಿಸಿದ ನೆಟೆ ಮತ್ತು ಬರ ನಿರೋಧಕ ತಳಿಯಾದ ಟಿಎಸ್‌3ಆರ್‌ ಬೀಜ ಉತ್ಪಾದನೆಯಲ್ಲಿದಾಖಲೆ ಬರೆದು ಗಮನ ಸೆಳೆದಿದೆ.

ಹತ್ತು ವರ್ಷಗಳಲ್ಲಿರಾಜ್ಯ ಸರಕಾರಕ್ಕೆ 2,458 ಕೋಟಿ ರೂ. ಆದಾಯ ತಂದು ಕೊಟ್ಟಿದೆ. ರಾಜ್ಯ ಬೀಜ ನಿಗಮಕ್ಕೆ 76 ಸಾವಿರ ಕ್ವಿಂಟಾಲ್‌ ಮತ್ತು ರೈತರಿಗೆ 29 ಸಾವಿರ ಕ್ವಿಂಟಾಲ್‌ ಬಿತ್ತನೆ ಬೀಜಗಳನ್ನು ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದಂತಾಗಿದೆ.

ತಳಿ ಅಭಿವೃದ್ಧಿ:ಈ ತಳಿಯನ್ನು ಯೋಜನಾ ನಿರ್ದೇಶಕರಾಗಿದ್ದ ಕೃಷಿ ವಿಜ್ಞಾನಿ ಡಾ. ಡಿ.ಎಂ. ಮಣ್ಣೂರ್‌ 2010 ರಲ್ಲಿಶೋಧಿಸಿದ್ದಾರೆ. ಹಲವು ವರ್ಷಗಳ ಕಾಲ ನಿರಂತರವಾದ ಪ್ರಯೋಗಗಳಿಂದ ಇದು ಸಾಧ್ಯವಾಗಿದೆ. ಆರಂಭದಲ್ಲಿ5 ನೂರು ಕ್ವಿಂಟಾಲ್‌ ಬೇಡಿಕೆ ಹೊಂದಿದ್ದ ಈ ಬೀಜ ಈಗ ದಾಖಲೆ ಬರೆದು ತೊಗರಿ ಕಣಜಕ್ಕೆ ಹಿರಿಮೆ ಮೂಡಿಸಿದೆ. ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ಈ ತಳಿ ಪ್ರೇರಣೆಯಾಗಿದ್ದು, ಕೃಷಿ ವಿಶ್ವವಿದ್ಯಾಲಯದಿಂದ ಲಭ್ಯವಾಗಿರುವ ಹತ್ತು ವರ್ಷಗಳ ಅಂಕಿ ಅಂಶಗಳೇ ಇದನ್ನು ದೃಢಪಡಿಸುತ್ತವೆ. ಈ ಬೀಜಗಳ ಬೇಡಿಕೆ ಹೆಚ್ಚಾಗಿರುವುದು ಅಮೋಘ ಸಾಧನೆಯಾಗಿದೆ. ಇಳುವರಿ ಹೆಚ್ಚಳವಾಗಿದ್ದರಿಂದ ತೊಗರಿ ಆಮದು ಪ್ರಮಾಣವೂ ಕಡಿಮೆಯಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ರೈತರ ಸಕಾಲದಲ್ಲಿಅಧಿಕ ಇಳುವರಿ ಕೊಡುವ ಬೀಜ ಇದಾಗುವ ಜತೆಗೆ ಕಲಬುರಗಿ ಜಿಲ್ಲೆಗೆ ರಾಷ್ಟ್ರ ಮಟ್ಟದಲ್ಲಿಗುರುತಿಸುವಂತಹ ಕೊಡುಗೆ ನೀಡಿದೆ. ಜಿ.ಐ ಮಾನ್ಯತೆ ಸಿಕ್ಕಿದೆ. ಆ ಮೂಲಕ ಮಾರುಕಟ್ಟೆಯಲ್ಲಿಕಲಬುರಗಿ ತೊಗರಿಗೆ ಬ್ರಾಂಡ್‌ ರೂಪಿಸಿದಂತಾಗಿದೆ. ಹೆಚ್ಚು ಇಳುವರಿ ಕೊಡುತ್ತಿರುವುದರಿಂದ ಬಿತ್ತನೆ ಕ್ಷೇತ್ರವೂ ವಿಸ್ತಾರಗೊಂಡಿದೆ. ಹಲವು ವರ್ಷಗಳಿಂದ 3-4 ಲಕ್ಷ ಹೆಕ್ಟೇರ್‌ನಷ್ಟಿರುತ್ತಿದ್ದ ತೊಗರಿ ಕ್ಷೇತ್ರ ಈ ಬಾರಿಯಂತೂ ದಾಖಲೆಯ 6 ಲಕ್ಷ ಹೆಕ್ಟೇರ್‌ವರೆಗೂ ವಿಸ್ತರಿಸಿದೆ. ಮಾರುಕಟ್ಟೆಯಲ್ಲಿರೈತರ ನಿರೀಕ್ಷೆಯಂತೆ ಬೆಲೆ ಸಿಗುತ್ತಿಲ್ಲ. ತೊಗರಿ ಮಾರುಕಟ್ಟೆಗೆ ಬರುವಾಗ ಸೂಕ್ತ ದರ ಸಿಕ್ಕರೆ ರೈತರಿಗೆ ಇನ್ನೂ ಹೆಚ್ಚು ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಿ. ಎಂ. ಮಣ್ಣೂರ್‌.

ಟಿಎಸ್‌3ಆರ್‌ ತಳಿ ಪ್ರತಿಕೂಲ ವಾತಾವರಣವನ್ನು ಸಮರ್ಥವಾಗಿ ಎದುರಿಸಬಲ್ಲದು. ಇಳುವರಿ ಹೆಚ್ಚಿಗೆ ಬರುವುದರಿಂದ ಹೆಚ್ಚು ರೈತರು ಇದನ್ನು ಬಿತ್ತನೆ ಮಾಡುತ್ತಿದ್ದಾರೆ. ಕ್ವಾಲಿಟಿ ಬೀಜದಿಂದಾಗಿ ರೈತರಿಗೂ ಅನುಕೂಲವಾಗಿದೆ. ಸರಕಾರಕ್ಕೂ ಹೆಚ್ಚು ಆದಾಯ ತಂದಿದೆ.

-ಡಾ. ಡಿ. ಎಂ. ಮಣ್ಣೂರ್‌, ನಿವೃತ್ತ ಕೃಷಿ ವಿಜ್ಞಾನಿ, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ