ಆ್ಯಪ್ನಗರ

ಧರ್ಮ: ಶಾಸಕರ ವಿರುದ್ಧ ವೀರಶೈವರ ನಡಿಗೆ

ಲಿಂಗಾಯತ ಸಮಾಜವನ್ನು ಒಡೆದು ಪ್ರತ್ಯೇಕ ಧರ್ಮ ಹೋರಾಟದಲ್ಲಿ ಪಾಲ್ಗೊಂಡ ಸಚಿವ ಡಾ.ಶರಣಪ್ರಕಾಶ ಪಾಟೀಲ್‌, ಶಾಸಕ ಬಿ.ಆರ್‌.ಪಾಟೀಲ್‌ ಅವರಿಗೆ ಮತ ನೀಡಬೇಡಿ ಎಂದು ಜನಜಾಗೃತಿ ಮೂಡಿಸಲು ಇಂದಿನಿಂದ ಆಳಂದ, ಸೇಡಂ ಕಡೆಗೆ ವೀರಶೈವರ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಅಧ್ಯಕ್ಷ ಕರಿಸಿದ್ದಪ್ಪಗೌಡ ಪಾಟೀಲ್‌ ಹೇಳಿದರು.

Vijaya Karnataka 2 May 2018, 5:40 pm
ಕಲಬುರಗಿ : ಲಿಂಗಾಯತ ಸಮಾಜವನ್ನು ಒಡೆದು ಪ್ರತ್ಯೇಕ ಧರ್ಮ ಹೋರಾಟದಲ್ಲಿ ಪಾಲ್ಗೊಂಡ ಸಚಿವ ಡಾ.ಶರಣಪ್ರಕಾಶ ಪಾಟೀಲ್‌, ಶಾಸಕ ಬಿ.ಆರ್‌.ಪಾಟೀಲ್‌ ಅವರಿಗೆ ಮತ ನೀಡಬೇಡಿ ಎಂದು ಜನಜಾಗೃತಿ ಮೂಡಿಸಲು ಇಂದಿನಿಂದ ಆಳಂದ, ಸೇಡಂ ಕಡೆಗೆ ವೀರಶೈವರ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಅಧ್ಯಕ್ಷ ಕರಿಸಿದ್ದಪ್ಪಗೌಡ ಪಾಟೀಲ್‌ ಹೇಳಿದರು.
Vijaya Karnataka Web religion veerashaivar walk against the legislators
ಧರ್ಮ: ಶಾಸಕರ ವಿರುದ್ಧ ವೀರಶೈವರ ನಡಿಗೆ


ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತ್ಯೇಕ ಧರ್ಮದಿಂದ ವೀರಶೈವ ಮತ್ತು ಲಿಂಗಾಯತ ಎಂದು ಒಡಕು ಉಂಟು ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ಗೊಂದಲ ಉಂಟಾಗಿದ್ದು, ಇದಕ್ಕೆ ಕಾಂಗ್ರೆಸ್‌ ಸರಕಾರವೇ ನೇರ ಕಾರಣವಾಗಿದೆ ಎಂದು ದೂರಿದರು.

ಧರ್ಮದಲ್ಲಿ ಹುಳಿ ಹಿಂಡುವ ರಾಜಕಾರಣಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ವೀರಶೈವ ಲಿಂಗಾಯತ ಸಮನ್ವಯ ಸಮಿತಿಯಿಂದ ಜನಜಾಗೃತಿ ಮೂಡಿಸಲಾಗುತ್ತಿದೆ. ಮೊದಲಿಗೆ ಆಳಂದ, ಸೇಡಂ, ಬಬಲೇಶ್ವರ, ಧಾರವಾಡದಲ್ಲಿ ಈ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಪಾಟೀಲ್‌ ನರಿಬೋಳ, ಜಿತಿಂದರ್‌ ಕೊರಳ್ಳಿ, ವೀರಭದ್ರಪ್ಪ ವರದಾನಿ, ಗುರುಲಿಂಗಪ್ಪ, ಜೆ.ಕೆ.ಪಾಟೀಲ್‌, ವೀರೇಂದ್ರ ಪಾಟೀಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ