ಆ್ಯಪ್ನಗರ

ಶಿವಸೇನೆಯಿಂದ ಸಿದ್ಧಲಿಂಗ ಸ್ವಾಮೀಜಿ ಸ್ಪರ್ಧೆ ಖಚಿತ

ತಾಲೂಕಿನ ಆಂದೋಲ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಈ ಬಾರಿ ಶಿವಸೇನೆಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

Vijaya Karnataka 11 Apr 2018, 5:41 pm
ಜೇವರ್ಗಿ : ತಾಲೂಕಿನ ಆಂದೋಲ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಈ ಬಾರಿ ಶಿವಸೇನೆಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.
Vijaya Karnataka Web siddhalinga swamiji contest from shiv sena
ಶಿವಸೇನೆಯಿಂದ ಸಿದ್ಧಲಿಂಗ ಸ್ವಾಮೀಜಿ ಸ್ಪರ್ಧೆ ಖಚಿತ


ಗ್ರಾಮದ ಕರುಣೇಶ್ವರ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರ, ಭಕ್ತರ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರ ಜತೆಗೆ ಚರ್ಚೆ ನಡೆಸಿ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜೇವರ್ಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತವೆಂದು ತಿಳಿದ ಬಿಜೆಪಿ ಮುಖಂಡರು, ರಾತೋರಾತ್ರಿ ನಮ್ಮ ಮಠಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದೆಂದು ಮಾತುಕತೆ ನಡೆಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಹಿನ್ನಡೆ ಆಗುತ್ತದೆ. ಅದಕ್ಕಾಗಿ ಚುನಾವಣೆಯಿಂದ ಹಿಂದೆ ಸರಿಯಬೇಕೆಂದು ಮನವಿ ಮಾಡಿದ್ದಾರೆ. ಆದರೆ ಯಾವ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸ್ವಾಮೀಜಿ ವಿಜಯ ಕರ್ನಾಟಕ್ಕೆ ತಿಳಿಸಿದ್ದಾರೆ.

ಸಭೆಯಲ್ಲಿ ಶರಣು ಕೋಳಕೂರ, ಪ್ರವೀಣ ಕುಂಟೋಜಿಮಠ, ಬಸವರಾಜ ಸುಗೂರ, ಮಲ್ಲಿಕಾರ್ಜುನ ಅದವಾನಿ, ಸಿದ್ದು ಗಜಾ, ರಾಜಶೇಖರ ಗುಡೂರ, ಆನಂದ ದೇಸಾಯಿ, ಮಲ್ಲಿಕರ್ಜುನ ಲಕಾಣಿ, ಶಿವುಕುಮಾರ, ದೇವಿಂದ್ರ ಪತ್ತಾರ, ವಿರೇಶ ಬಂದ್ರವಾಡ, ಶಾಂತಯ್ಯ ಹಿರೇಮಠ, ಅನೀಲ ಅವಂಟಿ, ವಿಜಯಕುಮಾರ ಬೆಲ್ಲದ, ನಿಂಗಣ್ಣಗೌಡ ರಾಸಣಗಿ, ಬಸವರಾಜ, ನಾಗರಾಜ ರಾಸಣಗಿ, ಮಲ್ಕಣ್ಣ ಪೂಜಾರಿ, ಸಿದ್ದಣ್ಣ ಪೂಜಾರಿ, ಅಂಬರೇಷ ಸೇರಿದಂತೆ ಇತರರು ಇದ್ದರು.

ಜೈಲಿಗೆ ಹೋಗಲು ಬಿಜೆಪಿ ಕಾರಣ!

ಈ ಹಿಂದೆ ಆಂದೋಲಾ ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ಬಿಜೆಪಿ ಮುಖಂಡರು ಯಾವುದೆ ಪ್ರತಿಕ್ರಿಯೆ ನೀಡದೆ ಸುಮ್ಮನ್ನೆ ಕುಳಿತುಕೊಂಡಿದ್ದರಿಂದ ನಮ್ಮ ಭಕ್ತರು ಹಾಗೂ ಹಿಂದೂ ಯುವಕರು ಸೇರಿದಂತೆ ನಾನು ಸಹ ಜೈಲಿಗೆ ಹೋಗಲು ಬಿಜೆಪಿ ಮುಖಂಡರ ಮೌನವೇ ಕಾರಣ. ನಾವೂ ಇಲ್ಲಿಯವರೆಗೂ ಬಿಜೆಪಿ ಬೆಂಬಲಕ್ಕೆ ನಿಂತಿದ್ದೇವೆ. ಆದರೆ ಬಿಜೆಪಿಯವರು ನಮ್ಮ ಬೆಂಬಲಕ್ಕೆ ಬರದೆ ಇರುವುದು ನಮ್ಮ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತು ಬಿಜೆಪಿ ಮುಖಂಡರು ತಾಲೂಕಿನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಯಾವತ್ತೂ ಮಾತನಾಡದೆ ಇರುವುದು ನಮಗೂ ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

ತಾಲೂಕಿನಲ್ಲಿ ಹಿಂದೂಗಳಿಗೆ ಅನ್ಯಾಯವಾದರೆ ಯಾವ ಪಕ್ಷ ದ ಮುಖಂಡರು ಸಹ ಹಿಂದೂಗಳ ಬೆಂಬಲಕ್ಕೆ ಬರುವುದಿಲ್ಲ. ಅಂಥ ಸಮಯದಲ್ಲಿ ಹಿಂದೂಗಳ ಪರವಾಗಿ ಬಂದು ಹೋರಾಟ ನಡೆಸಿ ನ್ಯಾಯ ಕೊಡಿಸುವವರು ಸಿದ್ಧಲಿಂಗ ಸ್ವಾಮಿಗಳು, ಇಂಥವರು ರಾಜಕೀಯಕ್ಕೆ ಬರುವುದರಿಂದ ಹಿಂದೂಗಳಿಗೆ ಒಬ್ಬ ಗಟ್ಟಿ ನಾಯಕ ಸಿಕ್ಕಂತಾಗುತ್ತದೆ. ಆದ್ದರಿಂದ ಸ್ವಾಮಿಗಳು ಶಿವಸೇನೆಯಿಂದ ಸ್ಪರ್ಧೆ ನಡೆಸಬೇಕನ್ನುವುದು ಪ್ರತಿಯೊಬ್ಬ ಹಿಂದೂಗಳ ಆಸೆಯಾಗಿದೆ.

-ಈಶ್ವರ ಹಿಪ್ಪರಗಿ, ಪ್ರಧಾನ ಕಾರ್ಯದರ್ಶಿ ಶ್ರೀರಾಮಸೇನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ