ಆ್ಯಪ್ನಗರ

ದೇವರ ಮೂರ್ತಿ ಕದಿಯುತ್ತಿದ್ದ ಮಹಿಳೆ ಬಂಧನ

ಒಂಟಿ ಮಹಿಳೆ ಇರುವ ಮನೆಗಳಲ್ಲಿಕುಡಿಯುವ ನೀರು, ರೊಟ್ಟಿ ಪಡೆಯುವುದಲ್ಲದೆ ಅದೇ ಮನೆಯ ದೇವರ ಜಗುಲಿಯಿಂದ ದೇವರ ಬೆಳ್ಳಿ ಮೂರ್ತಿಗಳನ್ನು ಕದಿಯುತ್ತಿದ್ದ ಮಹಿಳೆಯನ್ನು ಮಹಾತ್ಮಾ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ 5 ಕೆ.ಜಿ. 250 ಗ್ರಾಂ ತೂಕದ ಹಾಗೂ ರೂ.2.70 ಲಕ್ಷ ಮೌಲ್ಯದ ದೇವರ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 30 Sep 2019, 5:00 am
ಕಲಬುರಗಿ:ಒಂಟಿ ಮಹಿಳೆ ಇರುವ ಮನೆಗಳಲ್ಲಿಕುಡಿಯುವ ನೀರು, ರೊಟ್ಟಿ ಪಡೆಯುವುದಲ್ಲದೆ ಅದೇ ಮನೆಯ ದೇವರ ಜಗುಲಿಯಿಂದ ದೇವರ ಬೆಳ್ಳಿ ಮೂರ್ತಿಗಳನ್ನು ಕದಿಯುತ್ತಿದ್ದ ಮಹಿಳೆಯನ್ನು ಮಹಾತ್ಮಾ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ 5 ಕೆ.ಜಿ. 250 ಗ್ರಾಂ ತೂಕದ ಹಾಗೂ ರೂ.2.70 ಲಕ್ಷ ಮೌಲ್ಯದ ದೇವರ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web the arrest of a woman
ದೇವರ ಮೂರ್ತಿ ಕದಿಯುತ್ತಿದ್ದ ಮಹಿಳೆ ಬಂಧನ


ಈ ಕುರಿತು ಎಂ.ಬಿ.ನಗರ ಪೊಲೀಸ್‌ ಠಾಣೆಯಲ್ಲಿಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ್‌ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ನಗರದ ಜಗತ್‌ ವೃತ್ತದ ಹನುಮಾನ್‌ ಏರಿಯಾ ನಿವಾಸಿ ಬಸಮ್ಮ ಗಂಡ ಬಸವರಾಜ ನಂದಿಕೂರ ಬಂಧಿತ ಆರೋಪಿ. ಈಕೆ ಗುಬ್ಬಿ ಕಾಲೊನಿಯಲ್ಲಿಎರಡು ಮನೆಗಳು ಸೇರಿದಂತೆ ನಗರದ ವಿವಿಧೆಡೆ ಇದೇ ನಮೂನೆಯ ನಾಲ್ಕು ಪ್ರಕರಣಗಳಲ್ಲಿಭಾಗಿಯಾಗಿದ್ದಾಳೆ. ಈ ಕುರಿತು ಪ್ರತ್ಯೇಕ ಠಾಣೆಗಳಲ್ಲಿಪ್ರಕರಣಗಳು ದಾಖಲಾಗಿವೆ ಎಂದರು.

ಮನೆಯಲ್ಲಿರುವ ಒಂಟಿ ಮಹಿಳೆಯರನ್ನು ಮಾತ್ರ ಈಕೆ ಮಾತನಾಡಿಸುತ್ತಿದ್ದಳು. ತನಗೆ ಹಸಿವಾಗಿದ್ದು ಒಂದು ರೊಟ್ಟಿ ಮತ್ತು ಕುಡಿಯಲು ನೀರು ನೀಡುವಂತೆ ಅಂಗಲಾಚುತ್ತಿದ್ದಳು. ಈಕೆಯ ಭಿನ್ನಹಕ್ಕೆ ಮರುಗಿ ಮನೆಯೊಡತಿ ರೊಟ್ಟಿ-ನೀರು ತರಲು ಒಳಗೆ ಹೋದ ತಕ್ಷಣ ಈ ಮಹಿಳೆ ಮನೆಯೊಳಗಿನ ದೇವರ ಕೋಣೆಗೆ ನುಗ್ಗಿ ದೇವರ ವಿಗ್ರಹಗಳನ್ನು ಕದಿಯುತ್ತಿದ್ದಳು. ವಿಚಿತ್ರವೆಂದರೆ, ಬಳಿಕ ಮನೆಯೊಡತಿ ನೀಡುವ ರೊಟ್ಟಿ ಪಡೆದು ಆರಾಮವಾಗಿ ಅಲ್ಲಿಂದ ನಡೆದು ಹೋದರೂ ಆಕೆ ಕಳುವು ಮಾಡಿರುವುದು ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದಳು. ಮರುದಿನ ದೇವರ ಮನೆಯ ಜಗುಲಿಯಲ್ಲಿದೇವರ ಮೂರ್ತಿ ಕಾಣದಿದ್ದಾಗಲೇ ಕಳುವಾಗಿರುವ ಕುರಿತು ಮಹಿಳೆಗೆ ಗೊತ್ತಾಗುತ್ತಿತ್ತು. ಹೀಗಾಗಿ, ಕಳುವು ಮಾಡುತ್ತಿದ್ದ ಮಹಿಳೆ ಅನಾಯಾಸವಾಗಿ ಘಟನಾ ಸ್ಥಳದಿಂದ ಪರಾರಿಯಾಗುತ್ತಿದ್ದಳು ಎಂದು ಕಮಿನಷರ್‌ ತಿಳಿಸಿದರು.

ಕೇವಲ ದೇವರ ಬೆಳ್ಳಿ ಮೂರ್ತಿಗಳನ್ನು ಮಾತ್ರ ಕದಿಯುತ್ತಿದ್ದ ಮಹಿಳೆ ಮನೆಯಲ್ಲಿರುವ ಮತ್ತ್ಯಾವುದೇ ವಸ್ತುವಿಗೆ ಕೈ ಹಚ್ಚುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಈಕೆ ಒಬ್ಬ ಕಳ್ಳಿ ಎಂಬುದು ಸುಲಭಕ್ಕೆ ಗೊತ್ತಾಗುತ್ತಿರಲಿಲ್ಲಎಂದು ಸ್ವತಃ ಕಮಿಷನರ್‌ ನಾಗರಾಜ್‌ ಅಚ್ಚರಿ ವ್ಯಕ್ತಪಡಿಸಿದರು.

ಈ ಪ್ರಕರಣ ಬೇಧಿಸುವಲ್ಲಿಚಾಣಾಕ್ಷತನ ತೋರಿದ ಎಂ.ಬಿ.ನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರೂ.5000 ಬಹುಮಾನ ಘೋಷಿಸಿರುವುದಾಗಿ ಕಮಿಷನರ್‌ ಹೇಳಿದರು.

ತಾವು ಒಳಗೊಂಡಂತೆ ಡಿಸಿಪಿ ಕಿಶೋರ್‌ಬಾಬು, ಬಿ ಉಪವಿಭಾಗದ ಎಸಿಪಿ ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂಡದಲ್ಲಿಎಂ.ಬಿ.ನಗರ ಠಾಣೆಯ ಪಿಐ ದಿಲೀಪ್‌ ಸಾಗರ, ಸಿಸಿಬಿ ಘಟಕದ ಪಿಎಸ್‌ಐ ವಾಹಿದ್‌ ಎಚ್‌.ಕೊತ್ವಾಲ್‌ ಹಾಗೂ ಇತರ ಸಿಬ್ಬಂದಿ ಇದ್ದರು ಎಂದರು.

ಈ ಮಧ್ಯೆ, ನಗರದಲ್ಲಿಈ ಹಿಂದೆ ನಡೆದಿರುವ ಬಹಳಷ್ಟು ಕಳವು ಪ್ರಕರಣಗಳನ್ನು ಬೇಧಿಸುವಲ್ಲಿಪೊಲೀಸರು ವಿಫಲರಾಗಿದ್ದಾರೆ ಎಂಬ ಸುದ್ದಿಗಾರರ ಮಾತಿಗೆ ಪ್ರತಿಕ್ರಿಯಿಸಿದ ಕಮಿಷನರ್‌, ಡಿಸಿಪಿ ಕಿಶೋರ್‌ಬಾಬು ಹಾಗೂ ಆಯಾ ಉಪವಿಭಾಗದ ಎಸಿಪಿಗಳ ನೇತೃತ್ವದಲ್ಲಿತಕ್ಷಣ ವಿಶೇಷ ತಂಡ ಮಾಡಿ ಈ ಹಿಂದಿನ ಎಲ್ಲಕಳ್ಳತನ ಪ್ರಕರಣಗಳ ತನಿಖೆ ಕೈಗೊಳ್ಳುವಂತೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

'ಮೊಬೈಲ್‌' ಪ್ರಕರಣಗಳ ತನಿಖೆಗೆ ಒತ್ತು

ಮೊಬೈಲ್‌ ಕಳವು ಪ್ರಕರಣಗಳ ತನಿಖೆ ಕೈಗೊಳ್ಳುವಂತೆ ಎಲ್ಲಪೊಲೀಸ್‌ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ್‌ ಭರವಸೆ ನೀಡಿದರು.

ಕಲಬುರಗಿ ನಗರದಲ್ಲಿಮೊಬೈಲ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಕುರಿತು ಠಾಣೆಗಳಿಗೆ ದೂರು ನೀಡಲು ಹೋದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲಎಂಬ ಗಮನ ಸೆಳೆಯುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನು ಮುಂದೆ ಹಾಗೆ ಆಗಲು ಬಿಡುವುದಿಲ್ಲ. ಮೊಬೈಲ್‌ ಕಳ್ಳತನ ಆಗುವುದರಿಂದ ಜನರು ಎಷ್ಟು ತೊಂದರೆ ಅನುಭವಿಸುತ್ತಾರೆ ಎಂಬುದರ ಅರಿವು ತಮಗಿದೆ. ಹೀಗಾಗಿ, ಇನ್ನು ಮುಂದೆ ಈ ನಿಟ್ಟಿನಲ್ಲಿಆತಂಕ ಬೇಡ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ