ಆ್ಯಪ್ನಗರ

ನಮ್ಮೊಳಗಿರುವ ಆತ್ಮವೇ ಪರಮಾತ್ಮ

ಇಲ್ಲಿನ ಸೇಡಂ ರಸ್ತೆಯ ಗೀತಾ ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಅಮೃತ ಸರೋವರದ ರಿಟ್ರೀಟ್‌ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಾಕುಮಾರಿ ಪರಿವಾರ ಭೇಟಿ ಕಾರ್ಯಕ್ರಮ ಜರುಗಿತು.

Vijaya Karnataka 15 Jun 2019, 9:10 pm
ಕಲಬುರಗಿ:ಇಲ್ಲಿನ ಸೇಡಂ ರಸ್ತೆಯ ಗೀತಾ ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಅಮೃತ ಸರೋವರದ ರಿಟ್ರೀಟ್‌ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಾಕುಮಾರಿ ಪರಿವಾರ ಭೇಟಿ ಕಾರ್ಯಕ್ರಮ ಜರುಗಿತು.
Vijaya Karnataka Web the soul within us is paramatma
ನಮ್ಮೊಳಗಿರುವ ಆತ್ಮವೇ ಪರಮಾತ್ಮ


ಈ ವೇಳೆ ಮೌಂಟ್‌ ಅಬುವಿನ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಜಾನಕಿ ದಾದಿ ಮಾತನಾಡಿ, ನಮ್ಮೊಳಗಿರುವ ಆತ್ಮವೇ ಪರಮಾತ್ಮ. ಬ್ರಹ್ಮಾಕುಮಾರ ಹಾಗೂ ಕುಮಾರಿಯರು ಸಹಜ ಜೀವನ ನಡೆಸುತ್ತಿದ್ದಾರೆ. ಪ್ರೇಮ, ಅನುಕಂಪ, ಶಾಂತಿ, ಆನಂದ ಹಾಗೂ ಆತ್ಮಶಾಂತಿ ಈ ಐದು ಅಂಶಗಳು ಜೀವನದಲ್ಲಿ ಬಹಳ ಮುಖ್ಯ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೊ›.ಎಚ್‌.ಎಂ.ಮಹೇಶ್ವರಯ್ಯ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷ ಣ ಕೊಟ್ಟರೆ ಬ್ರಹ್ಮಾಕುಮಾರಿ ಸಂಸ್ಥೆಯು ಆಧ್ಯಾತ್ಮಿಕ ಶಿಕ್ಷಣ ನೀಡಿ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತದೆ. ಮಾನವ ಅಭ್ಯುದಯಕ್ಕೆ ಈ ಸಂಸ್ಥೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಸಮಾಜ ಸೇವಾ ವಿಭಾಗದ ರಾಷ್ಟ್ರೀಯ ಸಂಯೋಜಕಿ ರಾಜಯೋಗಿ ಬಿ.ಕೆ.ಪ್ರೇಮ್‌ ಬಾಯ್‌ ಮಾತನಾಡಿ, ಸರಳ ಜೀವನ, ಉತ್ತಮ ಯೋಚನೆ ಎನ್ನುವುದು ಪ್ರತಿ ಬ್ರಹ್ಮಾಕುಮಾರ ಹಾಗೂ ಬ್ರಹ್ಮಾಕುಮಾರಿಯರ ಜೀವನ ವಿಧಾನವಾಗಿದೆ ಎಂದು ನುಡಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಯಾವುದೇ ರಾಜಕೀಯ ಪಕ್ಷ ದೊಂದಿಗೆ ಗುರುತಿಸಿಕೊಳ್ಳದೆ ಪಕ್ಷಾತೀತವಾಗಿದೆ. ಈ ಸಂಸ್ಥೆಯಲ್ಲಿ ಜಾತಿಯತೆಗೆ ಸ್ಥಾನವಿಲ್ಲ. ಇಲ್ಲಿ ಎಲ್ಲರೂ ವಿದ್ಯಾರ್ಥಿಗಳು ಸರ್ವಶ್ರೇಷ್ಠವಾದ ಪರಮಾತ್ಮ ನಮಗೆಲ್ಲ ಶಿಕ್ಷ ಕ. ಹೀಗಾಗಿ ಜೀವನದುದ್ದಕ್ಕೂ ಕಲಿಯುವುದು ತುಂಬಾ ಇದೆ ಎಂದು ಹೇಳಿದರು.

ಕಲಬುರಗಿಯ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ.ವಿಜಯಾ ಬೆಹನ್‌, ರಾಜಯೋಗಿನಿಯರಾದ ಶಾರದಾ, ಲಕ್ಷ್ಮಿ, ಹಂಸಾ, ಜಾನಕಿ ದಾದಿ, ಹಂಸಾ ಬೆಹನ್‌, ಮಹಾದೇವಿ ಬೆಹನ್‌, ಡಾ.ಬಸವರಾಜ ರಾಜಋುಷಿ, ಸರೋಜಾ ಬೆಹನ್‌, ಶಾಸಕರಾದ ಎಂ.ವೈ. ಪಾಟೀಲ್‌, ಕನೀಜ್‌ ಫಾತಿಮಾ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ