ಆ್ಯಪ್ನಗರ

ಉತ್ತರಾದಿ ಮಠದಲ್ಲಿ ಹುಂಡಿ ದರೋಡೆ

ಮಳಖೇಡ ಗ್ರಾಮದ ಬಳಿ ಇರುವ ಉತ್ತರಾದಿ ಮಠದಲ್ಲಿ ದರೋಡೆ ನಡೆದಿದೆ.

Vijaya Karnataka Web 19 Jan 2018, 11:50 am
ಕಲಬುರಗಿ: ಮಳಖೇಡ ಗ್ರಾಮದ ಬಳಿ ಇರುವ ಉತ್ತರಾದಿ ಮಠದಲ್ಲಿ ದರೋಡೆ ನಡೆದಿದೆ. ಸೇಡಂ ತಾಲೂಕಿನ ಮಳಖೇಡ ಗ್ರಾಮದ ಮಠದಲ್ಲಿರುವ ಶಟರ್ ಮುರಿದು 30 ಕೆಜಿ ಬೆಳ್ಳಿ, ಹುಂಡಿಯಲ್ಲಿದ್ದ ನಗದು ಸೇರಿದಂತೆ 18 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳವಾಗಿವೆ.
Vijaya Karnataka Web theft in uttaradi mutt
ಉತ್ತರಾದಿ ಮಠದಲ್ಲಿ ಹುಂಡಿ ದರೋಡೆ


ಹಣ ಕಳವು ಮಾಡಿದ ಬಳಿಕ ಹುಂಡಿಯನ್ನು ತೆಗೆದುಕೊಂಡು‌ ಹೋಗಿ ನದಿಯಲ್ಲಿ ಬಿಸಾಡಿದ್ದಾರೆ. ಮೂರು ವರ್ಷಗಳ ಹಿಂದೆ ಇದೇ ಮಠದಲ್ಲಿ ದರೋಡೆಯಾಗಿತ್ತು. ಆದರೆ ಇದುವರೆಗೆ ಪ್ರಕರಣದ ಆರೋಪಿಗಳು ಪತ್ತೆಯಾಗಿರಲಿಲ್ಲ.

ಸ್ಥಳಕ್ಕೆ ಮಳಖೇಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ