ಆ್ಯಪ್ನಗರ

ತೊಗರಿ: ನೋಂದಣಿಗೆ 14ರವರೆಗೆ ಅವಕಾಶ

ಜಿಲ್ಲೆಯ ಎಲ್ಲ ರೈತರಿಂದ 2018-19 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌.ಎ.ಕ್ಯೂ. ಗುಣಮಟ್ಟದ ತೊಗರಿ ಕಾಳು ಖರೀದಿಸಲು ನೋಂದಣಿ ಕಾರ್ಯವನ್ನು ಜನವರಿ 14 ರವರೆಗೆ ಮುಂದುವರಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಸದಸ್ಯ ಹಾಗೂ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Vijaya Karnataka 3 Jan 2019, 5:00 am
ಕಲಬುರಗಿ :ಜಿಲ್ಲೆಯ ಎಲ್ಲ ರೈತರಿಂದ 2018-19 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌.ಎ.ಕ್ಯೂ. ಗುಣಮಟ್ಟದ ತೊಗರಿ ಕಾಳು ಖರೀದಿಸಲು ನೋಂದಣಿ ಕಾರ್ಯವನ್ನು ಜನವರಿ 14 ರವರೆಗೆ ಮುಂದುವರಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಸದಸ್ಯ ಹಾಗೂ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
Vijaya Karnataka Web toor allow up to 14 for registration
ತೊಗರಿ: ನೋಂದಣಿಗೆ 14ರವರೆಗೆ ಅವಕಾಶ

ರೈತರು ನೊಂದಣಿಗಾಗಿ ನೀಡಬೇಕಾದ ವಿವರ ಸಿಆಸು (ಇ-ಆಡಳಿತ) ಇಲಾಖೆಯು ಸಿದ್ಧಪಡಿಸಿರುವ ತಂತ್ರಾಂಶದೊಂದಿಗೆ ಭೂಮಿ, ಆಧಾರ, ಆಧಾರ್‌ ಕೇಂದ್ರ ಮತ್ತು ಬೆಳೆ ದರ್ಶಕ ದತ್ತಾಂಶದಲ್ಲಿ ತಾಳೆ ಮಾಡಿ ಪರಿಶೀಲಿಸಿದ ನಂತರವೇ ರೈತರ ನೋಂದಣಿ ಮಾಡಲಾಗುತ್ತದೆ. ಒಂದು ವೇಳೆ ದತ್ತಾಂಶದಲ್ಲಿ ತೊಗರಿ ಉತ್ಪನ್ನ ಬೆಳೆಯದೇ ಇರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಪರಿಶೀಲಿಸಿ ದೃಢಿಕರಿಸಿದ್ದಲ್ಲಿ ಅಂತಹ ರೈತರನ್ನು ನೊಂದಾಯಿಸಲಾಗುತ್ತದೆ.

ತೊಗರಿ ಬೆಳೆದ ರೈತರು ಪಹಣಿ ಪತ್ರಿಕೆ ಮತ್ತು ಆಧಾರ ದಾಖಲೆಗಳಲ್ಲಿ ಒಂದೇ ತರಹದ ಹೆಸರು ಇರಬೇಕಾಗುತ್ತದೆ ಹಾಗೂ ಆಧಾರ ಜೋಡಣೆಯಾದ ಬ್ಯಾಂಕ ಖಾತೆ ಹೊಂದಿರಬೇಕು. ಎಲ್ಲಾ ರೈತರು ಇದಕ್ಕೆ ಸಹಕರಿಸಬೇಕೆಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ