ಆ್ಯಪ್ನಗರ

ವಾಹನ ಡಿಕ್ಕಿ: ಅಪರಿಚಿತ ಮಹಿಳೆ ಸಾವು

ಹುಮನಾಬಾದ ರಸ್ತೆಯಲ್ಲಿರುವ ಸಿರಗಾಪುರ ಕ್ರಾಸ್‌ ಹತ್ತಿರ ಯಾವುದೋ ವಾಹನ ಡಿಕ್ಕಿ ಹೊಡೆದು ಬಿಕ್ಷುಕಿ ಮೃತಪಟ್ಟ ಘಟನೆ ನಡೆದಿದೆ.

ವಿಕ ಸುದ್ದಿಲೋಕ 23 Sep 2016, 5:25 pm

ಕಲಬುರಗಿ: ಹುಮನಾಬಾದ ರಸ್ತೆಯಲ್ಲಿರುವ ಸಿರಗಾಪುರ ಕ್ರಾಸ್‌ ಹತ್ತಿರ ಯಾವುದೋ ವಾಹನ ಡಿಕ್ಕಿ ಹೊಡೆದು ಬಿಕ್ಷುಕಿ ಮೃತಪಟ್ಟ ಘಟನೆ ನಡೆದಿದೆ.

Vijaya Karnataka Web vhana ikki aparicita mahie svu
ವಾಹನ ಡಿಕ್ಕಿ: ಅಪರಿಚಿತ ಮಹಿಳೆ ಸಾವು


ರಸ್ತೆ ದಾಡುವ ಹೊತ್ತಿನಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅದರ ಹಿಂದೆ ಹೋದ ಮತ್ತೊಂದು ವಾಹನ ಆಕೆಯ ಮೇಲೆ ಹರಿದಿದೆ. ಹೀಗಾಗಿ ಆಕೆಯ ತಲೆ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಗುರುತು ಸಹ ಸಿಗದಂತಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಜಪ್ತಿ: ವ್ಯಕ್ತಿ ಸೆರೆ

ಜೇವರ್ಗಿ ತಾಲೂಕಿನ ಅವರಾದ ಸೀಮಾಂತರದಲ್ಲಿ ಗಾಂಜಾ ಬೆಳೆಯಲಾಗಿದೆ ಎಂಬ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ 200 ಗ್ರಾಂ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳ್ಳಕ್ಕೆ ಪ್ರವಾಹ: ಊರಿಗೆ ಹೋಗದ ವಿದ್ಯಾರ್ಥಿಗಳು

ಧಾರಾಕಾರ ಮಳೆಯಿಂದ ಚಿಂಚೋಳಿ ತಾಲೂಕಿನ ಕಂಚನಾಳ ಗ್ರಾಮದ ಹತ್ತಿರವಿರುವ ಹಳ್ಳಕ್ಕೆ ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದಿದ್ದು, ಗ್ರಾಮಕ್ಕೆ ಹೋಗುವುದು ದುಃಸ್ಥರವಾಗಿದೆ.

ಕಂಚನಾಳ ಗ್ರಾಮದಿಂದ ಮಕ್ಕಳು ನಿತ್ಯ ಕಲಿಕೆಗಾಗಿ ಕೋಡ್ಲಿ ಗ್ರಾಮಕ್ಕೆ ವಾಹನದಲ್ಲಿ ಬಂದು ಹೋಗುತ್ತಾರೆ. ಎಂದಿನಂತೆ ಗುರುವಾರ ಬಂದಿದ್ದಾರೆ. ಶಾಲೆ ಮುಗಿಸಿಕೊಂಡು ಊರಿಗೆ ಹೋಗುವಷ್ಟರಲ್ಲಿ ಹಳ್ಳದಲ್ಲಿ ಭಾರಿ ಪ್ರವಾಹ ಕಾಣಿಸಿಕೊಂಡಿದ್ದರಿಂದ ಶಾಲಾ ವಾಹನ ಚಾಲಕ ವಾಹನವನ್ನು ಅಲ್ಲಿಯೇ ನಿಲ್ಲಿಸಿದ್ದಾರೆ.

ಸುಮಾರು ಹೊತ್ತು ನಿಂತರೂ ಪ್ರವಾಹ ತಗ್ಗದ ಕಾರಣ ಮಕ್ಕಳನ್ನು ರೇವಣಸಿದ್ದೇಶ್ವರ ಗುಡಿಯಲ್ಲಿ ಉಳಿದುಕೊಳ್ಳಲು ಜನರು ಹೇಳಿದ್ದರು. ಇದನ್ನು ಅರಿತ ಪÜರಿವರ್ತನಾ ಸಂಸ್ಥೆಯ ಅಧ್ಯಕ್ಷ ರೇವಣಸಿದ್ದಪ್ಪ ಬಡಾ ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಿದ್ದಾರೆ.

ಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಹಲವು ಸಲ ಮನವಿ ಕೊಟ್ಟರೂ ಪ್ರಯೋಜವಾಗಿಲ್ಲ, ಹೀಗಾಗಿಯೇ ವಿದ್ಯಾರ್ಥಿಗಳು ತಮ್ಮ ಊರು, ಮನೆ ಬಿಟ್ಟು ಹೊರಗೆ ಉಳಿಯಂತ ಸ್ಥಿತಿ ಎದುರಾಗಿದೆ ಎಂದು ಜನರು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ