ಆ್ಯಪ್ನಗರ

ಮಹಿಳೆಯರ ವಿರುದ್ಧ ದೌರ್ಜನ್ಯ, ಗಲ್ಲುಶಿಕ್ಷೆಗೆ ಆಗ್ರಹ

ದೇಶದ ಎಲ್ಲೆಡೆ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಹೀಗಾಗಿ, ಇಂತಹ ಕೃತ್ಯಗಳಲ್ಲಿತೊಡಗುವ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಸೇನೆ ಕಾರ್ಯಕರ್ತರು ನಗರದಲ್ಲಿಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 6 Dec 2019, 3:48 pm
ಕಲಬುರಗಿ:ದೇಶದ ಎಲ್ಲೆಡೆ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಹೀಗಾಗಿ, ಇಂತಹ ಕೃತ್ಯಗಳಲ್ಲಿತೊಡಗುವ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಸೇನೆ ಕಾರ್ಯಕರ್ತರು ನಗರದಲ್ಲಿಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web violence against women
ಮಹಿಳೆಯರ ವಿರುದ್ಧ ದೌರ್ಜನ್ಯ, ಗಲ್ಲುಶಿಕ್ಷೆಗೆ ಆಗ್ರಹ


ದೇಶದಲ್ಲಿಮಹಿಳೆಯರು ಮತ್ತು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಸೇನೆ ಕಾರ್ಯಕರ್ತರು ಕಲಬುರಗಿ ನಗರದಲ್ಲಿಗುರುವಾರ ಪ್ರತಿಭಟನೆ ನಡೆಸಿದರು. ದತ್ತು ಹಯ್ಯಾಳಕರ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮಹಿಳೆಯರು ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅದರಲ್ಲೂಮುಖ್ಯವಾಗಿ ಅಪರಾಧಿಗಳಿಗೆ ಸಾರ್ವಜನಿಕರ ಎದುರಲ್ಲೇ ಗಲ್ಲುಶಿಕ್ಷೆಗೆ ಗುರಿ ಪಡಿಸುವುದರಿಂದ ಇನ್ನು ಮುಂದೆ ಇಂತಹ ಹೀನ ಕೃತ್ಯಗಳಲ್ಲಿತೊಡಗುವವರಿಗೆ ಸಂದೇಶ ರವಾನಿಸಿದಂತಾಗುತ್ತದೆ ಎಂದು ಪ್ರತಿಭಟನಾಕಾರರು ಸಲಹೆ ನೀಡಿದರು.

ಸಂಸ್ಥಾಪಕ ದತ್ತು ಹಯ್ಯಾಳಕರ್‌, ಸಂಗಮೇಶ ಮಹಗಾಂವಕರ್‌, ನವೀನ್‌ ಆಲೆಗಾಂವ್‌, ಶರಣು ಡಿ.ಎಲ್‌., ಶ್ರೀದೇವಿ ಮುತ್ತಂಗಿ, ಸಂತೋಷ್‌ ಹಾವನೂರ್‌, ರಾಜು ಕಣಸೂರ, ಶ್ರೀಮತಿ ಗುರಂಪಳ್ಳಿ, ನೀಲಮ್ಮ, ಕಾವೇರಿ, ಇರ್ಫಾನ್‌, ಗೋವಿಂದ, ಯಲ್ಲೇಶ, ಕಾಳೇಶ ಪೂಜಾರಿ, ಬಸವರಾಜ, ಪ್ರೇಮ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಪ್ರಧಾನಮಂತ್ರಿಗಳ ಕಚೇರಿಗೆ ತಲುಪುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ