ಆ್ಯಪ್ನಗರ

ಯಾನಾಗುಂದಿ ಆಶ್ರಮಕ್ಕೆ ಡಿಸಿ ಭೇಟಿ

ಸೇಡಂ ತಾಲೂಕಿನ ಯಾನಗುಂದಿಯ ಸದ್ಗುರು ಯೋಗೇಶ್ವರ ವೀರ ಧರ್ಮಜ ಆಶ್ರಮದ ಮಾತಾ ಮಾಣಿಕೇಶ್ವರಿ ತಾಯಿಯ ಆರೋಗ್ಯ ಕುರಿತು ವರದಿ ನೀಡಬೇಕೆಂದು ಕಲಬುರ್ಗಿ ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಮತ್ತು ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರು ಯಾನಗುಂದಿಯ ಆಶ್ರಮಕ್ಕೆ ಭೇಟಿ ನೀಡಿ ಮಾತೆ ಮಾಣಿಕೇಶ್ವರಿ ಅವರ ಆರೋಗ್ಯ ವಿಚಾರಿಸಿದರು.

Vijaya Karnataka 1 Jun 2019, 5:00 am
ಕಲಬುರಗಿ:ಸೇಡಂ ತಾಲೂಕಿನ ಯಾನಗುಂದಿಯ ಸದ್ಗುರು ಯೋಗೇಶ್ವರ ವೀರ ಧರ್ಮಜ ಆಶ್ರಮದ ಮಾತಾ ಮಾಣಿಕೇಶ್ವರಿ ತಾಯಿಯ ಆರೋಗ್ಯ ಕುರಿತು ವರದಿ ನೀಡಬೇಕೆಂದು ಕಲಬುರ್ಗಿ ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಮತ್ತು ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರು ಯಾನಗುಂದಿಯ ಆಶ್ರಮಕ್ಕೆ ಭೇಟಿ ನೀಡಿ ಮಾತೆ ಮಾಣಿಕೇಶ್ವರಿ ಅವರ ಆರೋಗ್ಯ ವಿಚಾರಿಸಿದರು.
Vijaya Karnataka Web visit dc to yanagundi ashram
ಯಾನಾಗುಂದಿ ಆಶ್ರಮಕ್ಕೆ ಡಿಸಿ ಭೇಟಿ

ಮಾತೆ ಮಾಣಿಕೇಶ್ವರಿ ಆರೋಗ್ಯದ ವಸ್ತುಸ್ಥಿತಿಯ ಕುರಿತಂತೆ ಆಶ್ರಮದ ಟ್ರಸ್ಟಿನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಹಾಗೂ ಮಾತೆಯ ಆಪ್ತ ಸಿಬ್ಬಂದಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ವೈದ್ಯರ ತಂಡವು ಮಾತೆ ಮಾಣಿಕೇಶ್ವರಿ ತಾಯಿಯ ಅರೋಗ್ಯ ತಪಾಸಣೆ ಸಹ ನಡೆಸಿತು.

ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಪೂಜಾರ ವೀರಮಲ್ಲಪ್ಪ, ತಹಶೀಲ್ದಾರ ಕೀರ್ತಿ ಚಾಲಕ್‌, ಎಎಸ್ಪಿ ಅಕ್ಷ ಯ ಕುಮಾರ, ಮಾಜಿ ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಎ.ಬಿ.ಮಲಕರೆಡ್ಡಿ, ಯಾನಾಗುಂದಿ ಅಶ್ರಮದ ಟ್ರಸ್ಟಿನ ಖಜಾಂಚಿ ಸಿದ್ರಾಮಪ್ಪ ಸಣ್ಣೂರ, ಟ್ರಸ್ಟ್‌ ಸದಸ್ಯರಾದ ಜ್ನಾನೇಶ್ವರ, ಮಂದಾರ, ಹಣಮಂತ ಮಡ್ಡಿ, ಜಗಜೀವನರೆಡ್ಡಿ ಸೇರಿದಂತೆ ಇನ್ನಿತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ