ಆ್ಯಪ್ನಗರ

ಅನಾಥ ಜೀವಗಳಿಗೆ ಬೆಚ್ಚನೆ ಆಸರೆ

ಮದುವೆಯನ್ನೇ ನಿರಾಕರಿಸಿ, ತಾನು ದುಡಿಯುವುದೇ ಸಮಾಜದ ಅಪಸೌವ್ಯಗಳಿಗೆ ಸ್ಪಂದಿಸಲಿಕ್ಕೆ ಎನ್ನುವ ಧ್ಯೇಯವಾಕ್ಯದೊಂದಿಗೆ ಯುವತಿಯೊಬ್ಬಳು ಚಳಿಗೆ ನಡುಗಿ ನಡು ರಸ್ತೆಯಲ್ಲಿ ಜೀವನ ದೂಡುತ್ತಿದ್ದ ಅನಾಥರಿಗೆ ಬೆಚ್ಚಗಿನ ಕಂಬಳಿ(ಬ್ಲಾಂಕೆಟ್‌) ಹಂಚಿ ಮಾನವೀಯತೆ ಮೆರೆದಿದ್ದಾರೆ. ಇದರಿಂದ ಹೈದರಾಬಾದ ಕರ್ನಾಟಕದ ಯುವ ಮನಸ್ಸುಗಳ ಉದ್ದೇಶಗಳು ಬದಲಾಗುತ್ತಿವೆ ಎನ್ನುವುದಕ್ಕೆ ಇಲ್ಲಿ ಸಾಕ್ಷ್ಯ ಸಿಕ್ಕಂತಾಗಿದೆ.

Vijaya Karnataka 16 Jan 2019, 9:21 pm
ಸೂರ್ಯಕಾಂತ ಎಂ.ಜಮಾದಾರ ಕಲಬುರಗಿ :ಮದುವೆಯನ್ನೇ ನಿರಾಕರಿಸಿ, ತಾನು ದುಡಿಯುವುದೇ ಸಮಾಜದ ಅಪಸೌವ್ಯಗಳಿಗೆ ಸ್ಪಂದಿಸಲಿಕ್ಕೆ ಎನ್ನುವ ಧ್ಯೇಯವಾಕ್ಯದೊಂದಿಗೆ ಯುವತಿಯೊಬ್ಬಳು ಚಳಿಗೆ ನಡುಗಿ ನಡು ರಸ್ತೆಯಲ್ಲಿ ಜೀವನ ದೂಡುತ್ತಿದ್ದ ಅನಾಥರಿಗೆ ಬೆಚ್ಚಗಿನ ಕಂಬಳಿ(ಬ್ಲಾಂಕೆಟ್‌) ಹಂಚಿ ಮಾನವೀಯತೆ ಮೆರೆದಿದ್ದಾರೆ. ಇದರಿಂದ ಹೈದರಾಬಾದ ಕರ್ನಾಟಕದ ಯುವ ಮನಸ್ಸುಗಳ ಉದ್ದೇಶಗಳು ಬದಲಾಗುತ್ತಿವೆ ಎನ್ನುವುದಕ್ಕೆ ಇಲ್ಲಿ ಸಾಕ್ಷ್ಯ ಸಿಕ್ಕಂತಾಗಿದೆ.
Vijaya Karnataka Web warm up the orphan life
ಅನಾಥ ಜೀವಗಳಿಗೆ ಬೆಚ್ಚನೆ ಆಸರೆ


ಕಳೆದ 15 ದಿನಗಳಿಂದ ಕಲಬುರಗಿಯಲ್ಲಿ ಭಾರಿ ಚಳಿ ಇದೆ. ಸಂಜೆ ಆಗುತ್ತಿದ್ದಂತೆಯೇ ನಡುಕ ಶುರುವಾಗುಷ್ಟು ಭೀಕರವಾಗಿ ಕಾಡುತ್ತಿದೆ. ಇದರಿಂದ ಮಕ್ಕಳು, ವಯೋವೃದ್ಧರು ಸಂಭಾಳಿಸಿಕೊಂಡು ದಿನದೂಡುವುದು ಕಷ್ಟ. ಪರಿಸ್ಥಿತಿ ಹೀಗಿರುವಾಗ ಇನ್ನೂ ರಸ್ತೆಗಳಲ್ಲಿ ಭಿಕ್ಷೆ ಬೇಡುವವರು, ಗುಡಿ ಗುಂಡಾರಗಳ ಆವರಣ, ಬೀದಿಯ ಬದಿಯಲ್ಲಿ ಮಲಗುವ ಅನಾಥರಿಗೆ ಯಾರೂ ಬೆಚ್ಚಗಿನ ವ್ಯವಸ್ಥೆ ಮಾಡುತ್ತಾರೆ ಎನ್ನುವಾಗಲೇ ಅವರ ಧಾವಂತಕ್ಕೆ, ಸಂಕಷ್ಟಕ್ಕೆ ಮರುಗಿದವರು ಕು. ಮಾಲಾ ಸೋಮಶೇಖರ ಇಬ್ರಾಹಿಂಪುರ ಅವರು.

* ಸಮಾಜಕ್ಕಾಗಿ ದುಡಿಮೆ

ನಾನು ಹುಟ್ಟಿ ಬೆಳೆದ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು. ನಾನು ಈ ಭೂಮಿಯಿಂದ ಎದ್ದು ಹೋಗುವಾಗ ನನ್ನದು ಎನ್ನುವ ಹೆಸರು ಉಳಿಸಿ ಹೋಗಬೇಕು ಎನ್ನುವ ಉಮೇದಿಯಿಂದ ಮಾಲಾ ಅವರು ಶ್ರಮಿಸುತ್ತಿದ್ದಾರೆ. ಕಲಬುರಗಿಯ ಬಸ್‌ನಿಲ್ದಾಣದ ಬಳಿ ಇರುವ ಮುತ್ತೂಟ್‌ ಫೈನಾನ್ಸ್‌ ಬ್ರ್ಯಾಂಚಿನ ವ್ಯವಸ್ಥಾಪಕರಾಗಿರುವ ಮಾಲಾ ಎಸ್‌.ಇಬ್ರಾಹಿಂಪುರ ಅವರು ತಮ್ಮ ಪ್ರತಿ ತಿಂಗಳ ದುಡಿಮೆಯನ್ನು ಸಮಾಜದ ನಾನಾ ಬಗೆಯ ಸೇವಾ ಕಾರ್ಯಗಳಿಗೆ ಮೀಸಲಿಡುತ್ತಿದ್ದು, ಈಗಾಗಲೇ ಅನಾಥಶ್ರಮಗಳಿಗೆ ಹಣ ಹಾಗೂ ಅನಾಥ ಮಕ್ಕಳಿಗೆ ಬಟ್ಟೆ ಬರೆ ನೀಡಿದ್ದಾರೆ.

ಚಳಿಯಿಂದ ನಡುಗುವ ಜನರಿಗಾಗಿ ಎರಡು ತಿಂಗಳ ಸಂಬಳ ಜೊತೆ ಮಾಡಿ ಮೊದಲ ಹಂತವಾಗಿ ಬೆಂಗಳೂರಿನಿಂದ 50ಕ್ಕೂ ಹೆಚ್ಚು ಕಂಬಳಿಗಳನ್ನು ತಂದು ಎಲ್ಲರಿಗೂ ಹಂಚಿದ್ದಾರೆ. ಈ ಮೂಲಕ ಚಳಿಯಿಂದ ನಡುಗುವ ಅನಾಥ ಹಿರಿಯ ಜೀವಿಗಳಿಗೆ ಆಸರೆ ಆಗಿದ್ದಾರೆ. ಇನ್ನಷ್ಟು ಕಂಬಳಿ ಹಾಗೂ ಬೆಚ್ಚಗಿನ ಬಟ್ಟೆ ಹಂಚುವ ಉದ್ದೇಶ ಹೊಂದಿದ್ದಾರೆ.

ಮದುವೆ ಆಗಲ್ಲ

ನಾನು ತುಂಬಾ ಸಂಪ್ರದಾಯದ ಕುಟುಂಬದಿಂದ ಬಂದವಳು. ಅಪ್ಪ ಸೋಮಶೇಖರ ಇಬ್ರಾಹಿಂಪುರ ಆಳಂದ ತಾಲೂಕಿನವರು. ಜಮೀನಿದೆ, ವ್ಯವಹಾರವಿದೆ. ನನ್ನ ಜೀವನ ನಡೆಸಲು ನನಗೆ ದುಡಿಯುವ ಅವಶ್ಯಕತೆ ಇಲ್ಲ. ಆದರೂ, ನಾನು ಗೋದುತಾಯಿ ಕಾಲೇಜಿನಲ್ಲಿ ಎಂ.ಕಾಂ ಮುಗಿಸಿಕೊಂಡು ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುವುದು ಸಮಾಜ ಸೇವೆ ಮಾಡಲಿಕ್ಕೆ ಎನ್ನುತ್ತಾರೆ ಮಾಲಾ.


ಮಾಲಾ ಇಬ್ರಾಹಿಂಪುರ ನನ್ನ ವಿದ್ಯಾರ್ಥಿನಿ. ಓದುವ ಹಂತದಲ್ಲಿದ್ದಾಗಲೇ ಸಮಾಜ ಸೇವೆಗೆ ತುಡಿಯುತ್ತಿದ್ದಳು. ಸಮಾಜ ಸೇವೆ ಅಂದಕೂಡಲೇ ಶ್ರೀಮಂತ ಕುಟುಂಬ, ರಾಜಕಾರಣಿಗಳು ಇರಬೇಕು ಎನ್ನುವ ಮನೋಧೋರಣೆ ಮಧ್ಯೆ ಸಾಮಾನ್ಯ ಯುವತಿ ಸಮಾಜ ಸೇವೆ ಇಳಿದಿರುವುದು ಖುಷಿ ಕೊಟ್ಟಿದೆ. ನನ್ನ ವಿದ್ಯಾರ್ಥಿನಿ ಎನ್ನುವುದು ಹೆಮ್ಮೆಯ ಸಂಗತಿ.

- ಪ್ರೊ. ಶಿವಲಾಲ್‌ ಹತ್ತಿ ಎ.ವಿ.ಪಾಟೀಲ್‌ ಪದವಿ ಕಾಲೇಜು ಪ್ರಾಧ್ಯಾಪಕ

ನನಗೆ ಸಮಾಜ ಸೇವೆ ಮಾಡುವುದು ಎಂದರೆ ಇಷ್ಟ, ಮದುವೆ ಮಕ್ಕಳು ಮತ್ತು ಸಂಸಾರದಲ್ಲಿ ಆಸಕ್ತಿ ಇಲ್ಲ. ನಾನು ಬದುಕಲಿಕ್ಕೆ ಎಷ್ಟು ಆರ್ಥಿಕ ಅವಶ್ಯತೆ ಬೇಕೋ ಅಷ್ಟಿದೆ. ಈಗ ದುಡಿಯುತ್ತಿರುವುದು ಸಮಾಜದಲ್ಲಿನ ನಿರ್ಗತಿಕರಿಗಾಗಿ ಖರ್ಚು ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ.

- ಮಾಲಾ ಎಸ್‌.ಇಬ್ರಾಹಿಂಪುರ. ವ್ಯವಸ್ಥಾಪಕಿ ಮುತ್ತೂಟ್‌ ಫೈನಾನ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ