ಆ್ಯಪ್ನಗರ

ಭಗವಂತನ ಕೃಪೆಯಿದ್ದರೆ ಮುಖ್ಯಮಂತ್ರಿ ಆಗುತ್ತೇನೆ: ಡಿಕೆ ಶಿವಕುಮಾರ್

ಭಗವಂತನ ಕೃಪೆ ಇದ್ದರೆ ಮುಖ್ಯಮಂತ್ರಿ ಆಗ್ತೀನಿ, ಅದಕ್ಕೆ ಅವಸರ ಇಲ್ಲ. ಸರಕಾರದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಅರ್ಜೆಂಟ್‌ನಲ್ಲಿ ಹೋದರೆ ಅಪಘಾತ ಜಾಸ್ತಿ ಆಗುತ್ತದೆ. ನಿಧಾನವಾಗಿ ನಮ್ಮ ಸರಕಾರ ಹೋಗುತ್ತಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Vijaya Karnataka Web 16 Sep 2018, 7:30 pm
ಕಲಬುರಗಿ: ಭಗವಂತನ ಕೃಪೆ ಇದ್ದರೆ ಮುಖ್ಯಮಂತ್ರಿ ಆಗ್ತೀನಿ, ಅದಕ್ಕೆ ಅವಸರ ಇಲ್ಲ. ನಮ್ಮ ಸರಕಾರದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಅರ್ಜೆಂಟ್‌ನಲ್ಲಿ ಹೋದರೆ ಅಪಘಾತ ಜಾಸ್ತಿ ಆಗುತ್ತದೆ. ಹಾಗಾಗಿ ನಿಧಾನವಾಗಿ ನಮ್ಮ ಸರಕಾರ ಹೋಗುತ್ತಿದೆ ಎಂದು ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
Vijaya Karnataka Web dks


ಗಾಣಗಾಪುರದ ದತ್ತಾತ್ರೇಯ ದೇವರಿಗೆ ಪೂಜೆಯ ಬಳಿಕ ಮಾತನಾಡಿದ ಸಚಿವ ಡಿ. ಕೆ. ಶಿವಕುಮಾರ್, ಆಪರೇಷನ್ ಕಮಲದ ಹೆಸರಲ್ಲಿ 15 ರಿಂದ 16 ಶಾಸಕರು, ಮಾಜಿ ಶಾಸಕರನ್ನು ಸಂಪರ್ಕ ಮಾಡ್ತಿದ್ದಾರೆ. ಬಿ.ಸಿ. ಪಾಟೀಲ್, ರಹೀಮ್ ಖಾನ್ ಸಹಿತ ಅನೇಕ ಜನರನ್ನು ಸಂಪರ್ಕ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸರಕಾರ ರಚನೆ ಮಾಡೋದಕ್ಕೆ ರಾಹುಲ್ ಗಾಂಧಿ ತೀರ್ಮಾನಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬದ್ಧರಾಗಿದ್ದೇವೆ ಎಂದಿದ್ದಾರೆ.

ದೇವರ ಸನ್ನಿಧಾನದಲ್ಲಿ ನಿಂತು ಮಾತಾಡ್ತಾ ಇದ್ದೀನಿ. ನಾನು ಯಾವುದೇ ತರಹದ ತಪ್ಪು ಮಾಡಿಲ್ಲ, ನನಗೆ ಸಂಕಷ್ಟ ಎದುರಾದಾಗ ದೇವರು ಅದನ್ನು ಎದುರಿಸೋ ಶಕ್ತಿ ಕೊಟ್ಟಿದ್ದಾರೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ